ಯಶ್​ಪಾಲ್ ಸುವರ್ಣಗೆ ಕೊಲೆ ಬೆದರಿಕೆ ಪ್ರಕರಣ: ಗನ್ ಮ್ಯಾನ್ ಪಡೆಯುವಂತೆ ಪೊಲೀಸ್ ಇಲಾಖೆಯಿಂದ ಸೂಚನೆ

| Updated By: Rakesh Nayak Manchi

Updated on: Jun 09, 2022 | 10:10 PM

ಕೊಲೆ ಬೆದರಿಕೆ ಹಿನ್ನೆಲೆ ಉಡುಪಿ ಸರಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್​ಪಾಲ್ ಸುವರ್ಣ ಅವರಿಗೆ ಗನ್ ಮ್ಯಾನ್ ಪಡೆದುಕೊಳ್ಳುವಂತೆ ಉಡುಪಿ ಪೊಲೀಸ್ ಇಲಾಖೆ ಸಲಹೆ ನೀಡಿದೆ. ಈ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ ಎಂದು ಯಶ್​ಪಾಲ್ ಸುವರ್ಣ ಹೇಳಿದ್ದಾರೆ.

ಯಶ್​ಪಾಲ್ ಸುವರ್ಣಗೆ ಕೊಲೆ ಬೆದರಿಕೆ ಪ್ರಕರಣ: ಗನ್ ಮ್ಯಾನ್ ಪಡೆಯುವಂತೆ ಪೊಲೀಸ್ ಇಲಾಖೆಯಿಂದ ಸೂಚನೆ
ಯಶ್​ಪಾಲ್ ಸುವರ್ಣ
Follow us on

ಉಡುಪಿ: ಕೊಲೆ ಬೆದರಿಕೆ ಹಿನ್ನೆಲೆ ಉಡುಪಿ ಸರಕಾರಿ ಮಹಿಳಾ ಪಿಯು ಕಾಲೇಜು ಉಪಾಧ್ಯಕ್ಷ ಯಶ್​ಪಾಲ್ ಸುವರ್ಣ ಅವರಿಗೆ ಗನ್ ಮ್ಯಾನ್ ಪಡೆದುಕೊಳ್ಳುವಂತೆ ಉಡುಪಿ ಪೊಲೀಸ್ ಇಲಾಖೆ ಸಲಹೆ ನೀಡಿದೆ. ಹಿಜಾಬ್ ವಿವಾದ ಪ್ರಕರಣದ ಹಿನ್ನೆಲೆ ನಿರಂತರ ಕೊಲೆ ಬೆದರಿಕೆ ಎದುರಿಸುತ್ತಿರುವ ಯಶ್​ಪಾಲ್ ಸುವರ್ಣ ಅವರಿಗೆ ಕಾನೂನನ್ನು ಗೌರವಿಸುವ ಮೂಲಕ ಗನ್​ಮ್ಯಾನ್ ಪಡೆದುಕೊಳ್ಳುವಂತೆ ಉಡುಪಿ ಎಸ್​ಪಿ ವಿಷ್ಣುವರ್ಧನ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: “ನಿನ್ನ ಚರ್ಮ ಸುಲಿದು ಬಿಡ್ತೀನಿ”: ಪೊಲೀಸಪ್ಪನ ಗದರಿಕೆಗೆ ಭಯಗೊಂಡು ಮನೆಯಲ್ಲೇ ಕುಳಿತ ವಿದ್ಯಾರ್ಥಿನಿ?

ಗನ್​​ಮ್ಯಾನ್ ಪಡೆಯುವಂತೆ ಪೊಲೀಸ್ ಇಲಾಖೆ ನೀಡಿದ ಸಲಹೆ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಯಶ್​ಪಾಲ್ ಸುವರ್ಣ, ಪೊಲೀಸ್ ಇಲಾಖೆ ಇಂದು ಗನ್​ಮ್ಯಾನ್ ಕಳುಹಿಸಿಕೊಟ್ಟಿದೆ. ನಾನು ಗನ್ ಮ್ಯಾನ್ ಸಂಸ್ಕೃತಿಯಲ್ಲಿ ಬೆಳೆದವ ಅಲ್ಲ. ಉಡುಪಿಯಲ್ಲಿ ಓಡಾಡುವಾಗ ಗನ್ ಮ್ಯಾನ್ ಬೇಡ ಎಂದಿದ್ದೇನೆ. ಈ ಬಗ್ಗೆ ಪಕ್ಷದ ಹಿರಿಯರ ಅಭಿಪ್ರಾಯ ಪಡೆಯುತ್ತೇನೆ. ಪೊಲೀಸ್ ಇಲಾಖೆ ಗನ್ ಮ್ಯಾನ್ ಪಡೆಯಲೇಬೇಕು ಎಂದು ಹೇಳಿದೆ. ಪೊಲೀಸ್ ಇಲಾಖೆ ತನ್ನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಆದರೆ ನಮಗೆಲ್ಲಾ ಭದ್ರತೆ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಮಾರಿಗುಡಿ-6 ಪೇಜಿನಲ್ಲಿ ಯಶ್​ಪಾಲ್ ಸುವರ್ಣಗೆ ಮತ್ತೆ ಬೆದರಿಕೆ ಹಾಕಲಾಗಿದ್ದು, ಶ್ರದ್ಧಾಂಜಲಿ ಬ್ಯಾನರ್ ರೆಡಿ ಮಾಡಲು ಹೇಳಿದ್ದಾರೆ. ಇಂಥ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಬೆದರಿಕೆ ಹಾಕುವವರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಸರಿಯಾದ ದಾರಿಯಲ್ಲಿ ಬದುಕಲು ಕಲಿಯಿರಿ. ಅಡ್ಡದಾರಿ ಹಿಡಿದರೆ ಇಲಾಖೆ ಮತ್ತು ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ ಎಂದರು. ಯಾರೋ ಸ್ಥಳೀಯರು ಹೊರದೇಶದವರಿಂದ ಬೆದರಿಕೆ ಹಾಕಿಸುತ್ತಿದ್ದಾರೆ. ಮೂರೂರು, ಉಚ್ಚಿಲ ಭಾಗದವರು ಎಂಬ ಮಾಹಿತಿ ಇದೆ. ಸ್ಥಳೀಯ ಭಾಷೆಯನ್ನು ಕಾಮೆಂಟ್​ನಲ್ಲಿ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ 10 ರೂಪಾಯಿ ಚಿಲ್ಲರೆಗಾಗಿ 28 ವರ್ಷದ ಬಾರ್ ಕ್ಯಾಶಿಯರ್ ಕೊಲೆ; 6 ಆರೋಪಿಗಳು ಅರೆಸ್ಟ್

ಅಷ್ಟಕ್ಕೂ ಸಾಮಾಜಿಕ ಜಾಲತಾಣದಲ್ಲಿ ಏನೆಂದು ಬೆದರಿಕೆ ಹಾಕಲಾಗಿತ್ತು?

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಯಶ್​ಪಾಲ್ ಸುವರ್ಣ ಅವರಿಗೆ ಮಾರಿಗುಡಿ ಎಂಬ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ಬೆದರಿಕೆ ಹಾಕಲಾಗಿದೆ. ಇವರಿಬ್ಬರ ತಲೆ ತೆಗೆದವರಿಗೆ 20 ಲಕ್ಷ ರೂ. ಜಮಾ ಮಾಡಲಾಗುವುದು, ಒಂದು ತಲೆ ತೆಗೆದರೆ 10 ಲಕ್ಷ ನೀಡಲಾಗುವುದು ಎಂದು ಹೇಳಿ ಇಬ್ಬರನ್ನೂ ಹಂದಿಗೆ ಹೋಲಿಕೆ ಮಾಡಿ ಬೆದರಿಕೆ ಹಾಕಲಾಗಿದೆ. ಅಲ್ಲದೆ ಇವರಿಬ್ಬರ ತಲೆ ಉರುಳುವುದು ಶೇ.100ರಷ್ಟು ಖಚಿತ ಎಂದು ಧಮ್ಕಿ ಹಾಕಲಾಗಿದೆ. ಬೆದರಿಕೆ ಹಾಕಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಯುವ ಮೋರ್ಚಾ, ಕ್ರಮ ಕೈಗೊಳ್ಳುವಂತೆ ಲಿಖಿತ ರೂಪದಲ್ಲಿ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Thu, 9 June 22