“ನಿನ್ನ ಚರ್ಮ ಸುಲಿದು ಬಿಡ್ತೀನಿ”: ಪೊಲೀಸಪ್ಪನ ಗದರಿಕೆಗೆ ಭಯಗೊಂಡು ಮನೆಯಲ್ಲೇ ಕುಳಿತ ವಿದ್ಯಾರ್ಥಿನಿ?
ಪೊಲೀಸ್ವೊಬ್ಬರ ಗದರಿಕೆಗೆ ವಿದ್ಯಾರ್ಥಿನಿಯೊಬ್ಬಳು ಶಾಲೆ ಬಿಟ್ಟು ಮನೆಯಲ್ಲೇ ಕುಳಿತಿದ್ದಾಳೆ ಎಂಬ ಆರೋಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಕೇಳಿಬಂದಿದೆ. ಸದ್ಯ ಪೋಷಕರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾಗಿ ತಿಳಿದುಬಂದಿದೆ.
ಕಾರಾವರ: ಪೊಲೀಸ್ವೊಬ್ಬರ ಗದರಿಕೆಗೆ ವಿದ್ಯಾರ್ಥಿನಿಯೊಬ್ಬಳು ಶಾಲೆ ಬಿಟ್ಟು ಮನೆಯಲ್ಲೇ ಕುಳಿತಿದ್ದಾಳೆ ಎಂಬ ಆರೋಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ಕೇಳಿಬಂದಿದೆ. ದಾಯಾದಿಗಳ ನಡುವೆ ಆಸ್ತಿ ಸಂಬಂಧಿತ ವ್ಯಾಜ್ಯ ಬಗೆಹರಿಸಲು ಬಂದಾಗ ಮುಂಡಗೋಡ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ”ಮುಂಡಗೋಡಕ್ಕೆ ಬಾ ನಿನ್ನ ಚರ್ಮ ಸುಲಿದು ಬಿಡುತ್ತೇನೆ” ಎಂದು ಅಮಜಾನ್ ಅಬ್ದುಲ್ ಸಾಬ ಅವರ ಪುತ್ರಿ ನೇಹಾ (13)ಳಿಗೆ ಗದರಿಸಿದ್ದಾರೆ. ಸದ್ಯ ಪೋಷಕರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Crime News: ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಿ ಬಳ್ಳಾರಿ ಜಿಲ್ಲಾಡಳಿತ ಆದೇಶ
ಸುಬಾನ್ ಸಾಬ್ ಮತ್ತು ನಬಿಬ ಸಾಬ್ ಎಂಬ ದಾಯಾದಿಗಳ ಹೊಲದ ವ್ಯಾಜ್ಯ ಬಗೆಹರಿಸಲು ಹುಲಿಹೊಂಡಕ್ಕೆ ಪೊಲೀಸರು ಆಗಮಿಸಿದ್ದರು. ವ್ಯಾಜ್ಯ ನಡೆಯುತ್ತಿದ್ದಾಗ ಮಾತಿಗೆ ಮಾತು ಬೆಳೆದಿದೆ. ಇದನ್ನು ವಿದ್ಯಾರ್ಥಿನಿ ನೇಹಾ, ವಿಡಿಯೋ ಮಾಡುತ್ತಿದ್ದಳು. ಇದನ್ನು ಕಂಡ ಪಿಐ ಸಾಹೇಬರು, ವಿದ್ಯಾರ್ಥಿನಿಗೆ ”ನೀ ಬಾಳ ಹುಷಾರಿದ್ದೀಯ, ನಮ್ಮದೇ ವಿಡಿಯೋ ಮಾಡುತ್ತೀಯಾ” ಅಂತಾ ಗದರಿಸಿದ್ದಾರೆ. ಅಲ್ಲದೆ ಮೊಬೈಲ್ ಕಸಿದುಕೊಂಡು ”ನೀನು ಮುಂಡಗೋಡಕ್ಕೆ ಬಾ, ಚರ್ಮ ಸುಲಿತೇನೆ ಅಂತ ಹೇಳಿದ್ದಾರಂತೆ. ಇದರಿಂದ ಭಯಗೊಂಡ ವಿದ್ಯಾರ್ಥಿನಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾಳೆ.
ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಹೋಗಲು ಹಿಂದೇಟು ಹಾಕಿರುವ ನೇಹಾ, ನಾನು ಶಾಲೆಗೆ ಹೋಗಲ್ಲ, ನನ್ನನ್ನು ಪೊಲೀಸರು ಹೊಡಿತಾರೆ ಎಂದು ಅಳುತ್ತಾ ಕುಳಿತಿದ್ದಾಳೆ. ಅಲ್ಲದೆ ಆಕೆ ಜ್ವರದಿಂದ ಬಳಲು ಆರಂಭಿಸಿದ್ದಾಳೆ. ಯಾರೆ ಬಂದು ಮಾತನಾಡಿಸಿದರೂ ಆಳುತ್ತಾ ಕೂತಿದ್ದಾಳೆ. ಮಗಳ ಸ್ಥಿತಿ ಕಂಡು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Crime News: ಆಸ್ತಿಯಲ್ಲಿ ಭಾಗ ಕೇಳುವಂತೆ ಪೀಡಿಸುತ್ತಿದ್ದ ಭಾವನನ್ನೇ ಹತ್ಯೆಗೈದ ಬಾಮೈದ!
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ
ಧಾರವಾಡ: ಹೊಲಕ್ಕೆ ಹೋಗುತ್ತಿದ್ದಾಗ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಹೊಲಕ್ಕೆ ಊಟದ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದಾಗ ಪರಸಾಪುರ ಗ್ರಾಮದಲ್ಲಿ ಕೋಳಿ ಫಾರ್ಮ್ ನಡೆಸುವ ಮಹ್ಮದ್ ಮುಲ್ಲಾನವರ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ಮಹ್ಮದ್ ಮುಲ್ಲಾನವರ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿರುವ ಕಲಘಟಗಿ ಠಾಣಾ ಪೊಲೀಸರು ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ಇನ್ಸ್‌ಪೆಕ್ಟರ್ ಶ್ರೀಶೈಲ್ ಕೌಜಲಗಿ ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ನೊಂದ ಬಾಲಕಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Thu, 9 June 22