ಹಣಕ್ಕಾಗಿ ಮೊಮ್ಮಗಳನ್ನೇ ಮಾರಿದ್ದ ಅಜ್ಜ ಅರೆಸ್ಟ್, ಮಾರಾಟಕ್ಕೆ ಅಜ್ಜ ಕಟ್ಟಿದ ಕಥೆ ಹೇಗಿತ್ತು ಗೊತ್ತಾ?
ಹಣಕ್ಕಾಗಿ ಮೊಮ್ಮಗಳನ್ನೇ ಮಾರಿದ್ದ ಅಜ್ಜನನ್ನು ಪೊಲೀಸರು ಬಂಧಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮಾರಾಟಗೊಂಡ ಎರಡು ದಿನದ ಹೆಣ್ಣು ಮಗುವಿನ ರಕ್ಷಣೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದಾವಣಗೆರೆ: ಹಣಕ್ಕಾಗಿ ಮೊಮ್ಮಗಳನ್ನೇ ಮಾರಿದ್ದ ಅಜ್ಜನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಸುಜಾತಾ, ಹನುಮಂತ ದಂಪತಿಗೆ ಜನಿಸಿದ ಹೆಣ್ಣು ಮಗುವನ್ನು ಅಜ್ಜ ಹಣಕ್ಕಾಗಿ ಕಥೆ ಕಟ್ಟಿ ಮಗುವನ್ನು ಮಾರಾಟ ಮಾಡಿದ್ದಾನೆ. ಮಗ ಪ್ರಶ್ನಿಸಿದಾಗ ಮಗು ಮಾರಾಟದ ಬಗ್ಗೆ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿ ಬಸವಣ್ಣನನ್ನು ಪೊಲೀಸರು ಬಂಧಿಸಿದ್ದು, ಮಾರಾಟವಾದ ನವಜಾತ ಶಿಶುವಿನ ರಕ್ಷಣೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Crime News: ಆಸ್ತಿಯಲ್ಲಿ ಭಾಗ ಕೇಳುವಂತೆ ಪೀಡಿಸುತ್ತಿದ್ದ ಭಾವನನ್ನೇ ಹತ್ಯೆಗೈದ ಬಾಮೈದ!
ತುಮಕೂರಿನ ಸುಜಾತಾ, ಹನುಮಂತ ದಂಪತಿಗೆ ಹೆಣ್ಣು ಮಗು ಹುಟ್ಟಿದ್ದು, ತಾವು ತಂದೆ ತಾಯಿ ಆಗಿದ್ದೇವೆ ಎಂಬ ಸಂತೋಷ ದಂಪತಿಯಲ್ಲಿತ್ತು. ಆದರೆ ಹಣದ ಆಸೆಗೆ ಬಿದ್ದಿದ್ದ ಮಗುವಿನ ಅಜ್ಜನೂ ಆಗಿರುವ ಹನುಮಂತನ ತಂದೆ ಬಸವಣ್ಣ, 2ದಿನಗಳ ನವಜಾತ ಮಗುವನ್ನು 50ಸಾವಿರ ರೂ.ಗೆ ಮಾರಾಟ ಮಾಡಿದ್ದಾನೆ. ಹನುಮಂತನ ಪತ್ನಿ ಬುದ್ಧಿಮಾಂದ್ಯಳಾಗಿದ್ದು, ಈಕೆಗೆ ತಿಳಿಯದಂತೆ ತುಮಕೂರಿನಲ್ಲಿರುವ ಕುಟುಂಬವೊಂದಕ್ಕೆ ಮಗುವನ್ನು ಮಾರಾಟ ಮಾಡಿದ್ದಾನೆ. ಅಲ್ಲದೆ ಮಗು ಮೃತಪಟ್ಟಿದೆ ಎಂದು ಕಥೆ ಕಟ್ಟಿ ಸುಜಾತಾಳನ್ನು ನಂಬಿಸಿದ್ದನು.
ಆದರೆ ಅನುಮಾನಗೊಂಡ ಹನುಮಂತ ತನ್ನ ತಂದೆಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಸತ್ಯಾಂಶ ಹೊರಬಿದ್ದಿದ್ದು, ಮಗು ಮಾರಾಟ ಮಾಡಿರುವುದಾಗಿ ಬಸವಣ್ಣ ತಪ್ಪು ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಾರಾಟವಾದ ಮಗುವಿನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: Crime News: ಬೈಕ್ ಮೇಲೆ ಬಂದು ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿ
ಬೈಕ್ಗೆ ಕ್ಯಾಂಟರ್ ಡಿಕ್ಕಿ ತಂದೆ ಸಾವು
ಹಾವೇರಿ: ಸಂಚರಿಸುತ್ತಿದ್ದ ಬೈಕ್ಗೆ ಟ್ಯಾಂಕರ್ ಡಿಕ್ಕಿ ಹೊಡೆದು ತಂದೆ ಸಾವನ್ನಪ್ಪಿ, ಮಗಳು ಗಾಯಗೊಂಡ ಘಟನೆ ನಗರದ ಹೊರವಲಯದ ಹಾನಗಲ್ ರಸ್ತೆಯಲ್ಲಿ ನಡೆದಿದೆ. ಚನ್ನಬಸಪ್ಪ ಮಂಟಗಣಿ(45) ಸಾವನ್ನಪ್ಪಿದ ಬೈಕ್ ಸವಾರ. ಗಾಯಾಳು ದೀಪಾ ಮಂಟಗಣಿ(18) ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಚಾರ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಟ್ಯಾಂಕರ್ ಸಹಿತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ತಾನು ಎಂಎಲ್ಎ ಪುತ್ರಿ ಎಂಬ ಮದ ತಲೆಗೇರಿದ್ದ ಬಿಜೆಪಿ ಶಾಸಕನ ಪುತ್ರಿಗೆ 10 ಸಾವಿರ ದಂಡ!
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 pm, Thu, 9 June 22