ತಾನು ಎಂಎಲ್ಎ ಪುತ್ರಿ ಎಂಬ ಮದ ತಲೆಗೇರಿದ್ದ ಬಿಜೆಪಿ ಶಾಸಕನ ಪುತ್ರಿಗೆ 10 ಸಾವಿರ ದಂಡ!
ಸಿಗ್ನಲ್ ಜಂಪ್ ಮಾಡಿದ್ದಲ್ಲದೆ, ಕಾರನ್ನು ತಡೆದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ ಪೊಲೀಸರು, 10 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಈ ಪೈಕಿ 9ಸಾವಿರ ರೂ. ಹಳೆಯ ದಂಡದ ಬಾಕಿ ಮೊತ್ತವಾಗಿದೆ.
ಬೆಂಗಳೂರು: ಕಾರು ತಡೆದ ಒಂದೇ ಒಂದು ಕಾರಣಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಅವರ ಪುತ್ರಿ (Daughter) ಪೊಲೀಸರೊಂದಿಗೆ ವಾಗ್ವಾದಕ್ಕಿಳದ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಶಾಸಕರ ಪುತ್ರಿ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆ ಟ್ರಾಫಿಕ್ ಪೊಲೀಸರು ಲಿಂಬಾವಳಿ ಪುತ್ರಿ ಕಾರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿದ್ದು, ಮಾಧ್ಯಮದವರ ಮೇಲೂ ಚೀರಾಡಿದ್ದಾಳೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ಸ್ಫೋಟಕ ರಹಸ್ಯ: ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು-1912 ಪುಸ್ತಕದಲ್ಲಿ ಏನಿದೆ?
ತಾನು ಮಿನಿಸ್ಟರ್ ಮಗಳು, ಎಂಎಲ್ಎ ಮಗ ಎಂದೆಲ್ಲಾ ಹೇಳಿಕೊಂಡು ಟ್ರಾಫಿಕ್ ನಿಯಮ ಉಲ್ಲಂಘಿಸಿ ಓಡಾಡುವುದನ್ನು ಕಾಣಬಹುದು. ಆದೇ ರೀತಿ ತಾನು ಎಂಎಲ್ಎ ಮಗಳು ಎಂಬ ಮದ ತಲೆಯಲ್ಲಿ ಹತ್ತಕೊಂಡಿದ್ದ ಲಿಂಬಾವಳಿ ಪುತ್ರಿ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೆ, ಸಿಗ್ನಲ್ ಜಂಪ್ ಮಾಡಿದ್ದಾಳೆ. ಈ ವೇಳೆ ಪೊಲೀಸರು ಕಾರನ್ನು ತಡೆ ಪ್ರಶ್ನಿಸಿದ್ದಾರೆ. ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಪಾವತಿಸುವ ಬದಲು ಆಕೆ ಪೊಲೀಸರೊಂದಿಗೆ ರೋಷಾವೇಷದಿಂದ ವಾಗ್ವಾದಕ್ಕಿಳಿದಿದ್ದಾಳೆ.
ಇದನ್ನೂ ಓದಿ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ; ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಹೆತ್ತವರು
ಇದು ಎಂಎಲ್ಎ ಗಾಡಿ, ಲಿಂಬಾವಳಿ ಕಾರು ಇದು ಗೊತ್ತಾ? ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಎಂದೆಲ್ಲಾ ಪೊಲೀಸರ ಮುಂದೆ ಏರುಧ್ವನಿಯಲ್ಲಿ ಚೀರಾಡಿದ್ದಾಳೆ. ಆದರೂ ಬಿಡದ ಪೊಲೀಸರು ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಈ ವೇಳೆ ವಿಧಿ ಇಲ್ಲದೆ ಲಿಂಬಾವಳಿ ಪುತ್ರಿಯೊಂದಿಗೆ ಕಾರಿನಲ್ಲಿದ್ದ ಯುವಕ ದಂಡ ವಿಧಿಸಿದ್ದಾನೆ. ಒಟ್ಟು 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆ ನಿಯಮ ಉಲ್ಲಂಘಿಸಿದ ಬಾಕಿ 9 ಸಾವಿರ ರೂ. ದಂಡದ ಜೊತೆಗೆ ಇಂದಿನ ಸಿಗ್ನಲ್ ಜಂಪ್ಗೆ 1 ಸಾವಿರ ರೂ. ಸೇರಿದಂತೆ ಒಟ್ಟು 10 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಇದನ್ನೂ ಓದಿ: Bengaluru News: ಹದಗೆಟ್ಟ ರಸ್ತೆಗಳಿಂದ ನಿರಂತರ ಅಪಘಾತ, ಆತಂಕದಲ್ಲಿ ವಾಹನ ಸವಾರರು!
ಸಿಗ್ನಲ್ ಜಂಪ್ ಆದಾಗ ಪೊಲೀಸ್ ಮಾಡಿದ್ದೇನು?
ವೇಗವಾಗಿ ಬರುತಿದ್ದ ಬಿಎಂಡಬ್ಯ್ಲೂ ಕಾರನ್ನು ನೋಡಿದ ಕಬ್ಬನ್ ಪಾರ್ಕ್ ಎಸಿಪಿ ಕೈ ಅಡ್ಡಹಿಡಿದಿದ್ದಾರೆ. ಈ ವೇಳೆ ಕಾರ್ ನಿಲ್ಲಿಸದೇ ವೇಗವಾಗಿ ತೆರಳಿದ್ದು, ನಂತರ ಸಿಗ್ನಲ್ ಜಂಪ್ ಕೂಡ ಮಾಡಲಾಗಿದೆ. ಕೂಡಲೇ ಅತಿವೇಗವಾಗಿ ಬರುವ ಕಾರನ್ನು ನಿಲ್ಲಿಸುವಂತೆ ಎಸಿಪಿ ವಾಕಿಗೆ ಸಂದೇಶ ನೀಡಿದ್ದಾರೆ. ಅದರಂತೆ ಪೊಲೀಸರು ಕಾರನ್ನು ತಡೆದಿದ್ದಾರೆ.
ಮಗಳ ವರ್ತನೆಗೆ ಕ್ಷಮೆ ಯಾಚಿಸಿದ ಶಾಸಕ
ಸಂಚಾರಿ ಪೊಲೀಸರ ಜೊತೆ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿದ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅರವಿಂದ ಲಿಂಬಾವಳಿ, ನನ್ನ ಮಗಳ ವರ್ತನೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ನನ್ನ ಮಗಳ ಸ್ನೇಹಿತ ತರುಣ್ ಕಾರನ್ನು ವೇಗವಾಗಿ ಓಡಿಸಿದ್ದಾನೆ. ಹೀಗಾಗಿ ಪೊಲೀಸರು ನನ್ನ ಪುತ್ರಿ ಸ್ನೇಹಿತ ತರುಣ್ಗೆ ದಂಡ ವಿಧಿಸಿದ್ದಾರೆ. ಆತ ದಂಡ ಪಾವತಿಸಿದ್ದಾನೆ. ಇಂದಿನ ಘಟನೆಯಲ್ಲಿ ನನ್ನ ಮಗಳ ವರ್ತನೆಯಿಂದ ಮಾಧ್ಯಮ ಸ್ನೇಹಿತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ವಿಡಿಯೋ ವೀಕ್ಷಿಸಿ:
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Thu, 9 June 22