ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ಸ್ಫೋಟಕ ರಹಸ್ಯ: ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು-1912 ಪುಸ್ತಕದಲ್ಲಿ ಏನಿದೆ?
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸಂಬಂಧ ಹಿಂದೂಪರ ಮುಖಂಡರಿಂದ ಸ್ಫೋಟಕ ಸಾಕ್ಷ್ಯ ಬಹಿರಂಗ ಮಾಡಿದ್ದು, ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು-1912 ಪುಸ್ತಕದಲ್ಲಿ ಮಸೀದಿಯ ಸ್ಫೋಟಕ ರಹಸ್ಯ ಲಭ್ಯವಾಗಿದೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Masjid) ವಿವಾದ ಹಿನ್ನೆಲೆ ಹಿಂದೂಪರ ಮುಖಂಡರಿಂದ ಸ್ಫೋಟಕ ಸಾಕ್ಷ್ಯ ಬಹಿರಂಗವಾಗಿದೆ. ದೆಹಲಿಯ ಪುರಾತತ್ವ ಇಲಾಖೆಯ ಆರ್ಕಿಯಲಾಜಿಕಲ್ ಸರ್ವೆ ಆಫ್ ಮೈಸೂರು-1912 ಪುಸ್ತಕದಲ್ಲಿ ಜಾಮಿಯಾ ಮಸೀದಿಯ ಸ್ಫೋಟಕ ರಹಸ್ಯ ಬಯಲಾಗಿದೆ. ಮೂಡಲಬಾಗಿಲು ಆಂಜನೇಯ ದೇಗುಲದ ವಿಷಯ ಪ್ರಸ್ತಾಪ ಮಾಡಲಾಗಿದ್ದು, ಟಿಪ್ಪು ಪರಿವೀಕ್ಷಣಾ ಗೋಪುರ ನಿರ್ಮಿಸಿದ್ದ ಎಂದು ರಾಜ್ಯ ವಕ್ಫ್ ಬೋರ್ಡ್ ಸಮರ್ಥನೆ ಮಾಡಿಕೊಳ್ಳುತ್ತಿತ್ತು. ಆದರೆ ಆರ್ಕಿಯಲಾಜಿಕಲ್ ಸರ್ವೆ ಪುಸ್ತಕ ಬೇರೆ ಹೇಳುತ್ತಿದೆ. ಕಾವೇರಿ ನದಿಯಲ್ಲಿ ಗೌರಿ ಖಡ ಎಂಬ ಜಾಗದಲ್ಲಿ ಆಂಜನೇಯನ ಮೂರ್ತಿಯ ಟಿಪ್ಪು ಎಸೆದಿದ್ದ. ದಳವಾಯಿ ದೊಡ್ಡಯ್ಯನವರು ಮೂರ್ತಿ ತಂದು ಮರು ಪ್ರತಿಷ್ಠಾಪಿಸಿದರು. ಈ ಕುರಿತು ಸ್ಫೋಟಕ ಮಾಹಿತಿಯನ್ನ ಸರ್ವೆ ಪುಸ್ತಕ ಬಿಚ್ಚಿಟ್ಟಿದೆ.
ಇದನ್ನೂ ಓದಿ: World Oceans Day 2022: ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆ ಇಲ್ಲಿದೆ
ಪ್ರತಿಭಟನೆಗೂ ಮುನ್ನಾ ಜಾಮೀಯ ಮಸೀದಿ ಒಳಗೆ ಹೋಗಿ ಹನುಮಾನ್ ಚಾಲೀಸ್ ಪಠಣೆ
ಜಾಮೀಯ ಮಸೀದಿ ಇದ್ದ ಸ್ಥಳದಲ್ಲಿ ಮೂಡಲ ಬಾಗಿಲು ಶ್ರೀ ಆಂಜನೇಯ ದೇವಾಲಯವಿತ್ತು ಎಂದು ಆರೋಪಿಸಿರುವ ಹಿಂದೂ ಸಂಘಟನೆ ಮುಖಂಡರು ಜೂನ್ 4 ಶ್ರೀರಂಗಪಟ್ಟಣ ಚಲೋ ಜಾಥಾ ನಡೆಸಿದ್ದರು. ಜಾಮೀಯ ಮಸೀದಿಯಲ್ಲಿ ಹನುಮಾನ್ ಚಾಲೀಸ್ ಪಠಿಸೇ ತೀರುತ್ತೇವೆ ಎಂದಿದ್ದ ಭಜರಂಗದಳ, ಅದರಂತೆ ನಿನ್ನೆ ಮಧ್ಯಾಹ್ನ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಮಸೀದಿ ಒಳಗೆ ಹೋಗಿ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಕೂಗಿದ್ದರು. ಮಸೀದಿ ಒಳಗೆ ಹೋಗಿ ಹನುಮಾನ್ ಚಾಲೀಸ್ ಪಠಿಸಿದ್ದ ಇಬ್ಬರು ಹಿಂದಿನ ದಿನವೇ ಅಂದರೆ ಜೂನ್ 3ಕ್ಕೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಇದಕ್ಕೆ ಸಂಬಂಧಿಸಿದ ಸಿಸಿ ಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ.
ಜಾಮೀಯ ಮಸೀದಿ ಶೇ.100ರಷ್ಟು ಮಸೀದಿಯೇ: ಆಸಿಫ್ ಸೇಠ್
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಶೇ.100ರಷ್ಟು ಮಸೀದಿಯೇ ಎಂದು ಟಿಪ್ಪು ವಕ್ಫ್ ಬೋರ್ಡ್ ಉಪಾಧ್ಯಕ್ಷ ಆಸಿಫ್ ಸೇಠ್ ಹೇಳಿಕೆ ನೀಡಿದ್ದಾರೆ. ಜಾಮಿಯಾ ಮಸೀದಿ ಬಳಿ ಮಾತನಾಡಿದ ಅವರು, ಮಸೀದಿ ಇರುವ ಜಾಗ ವಕ್ಫ್ ಬೋರ್ಡ್ಗೆ ಸೇರಿದ್ದಾಗಿದೆ. ಇದರ ನಿರ್ವಹಣೆಯನ್ನ ಎಎಸ್ಐ ಮಾಡುತ್ತಿದೆ. ಟಿಪ್ಪು ವಕ್ಫ್ ಬೋರ್ಡ್ ಯಾವಾಗ ಸ್ಥಾಪನೆ ಆಯ್ತೋ ಅಂದಿನಿಂದ ಇದು ವಕ್ಫ್ ಬೋರ್ಡ್ ಆಸ್ತಿಯಾಗಿದೆ. ಟಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಟಿಪ್ಪು ಜಾಗವನ್ನೆಲ್ಲ ಆರ್ಕ್ಯಾಲಜಿ ಡಿಪಾರ್ಟ್ಮೆಂಟ್ ಅವರು ನಿರ್ವಹಣೆಗೆ ಪಡೆದಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.