AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಹದಗೆಟ್ಟ ರಸ್ತೆಗಳಿಂದ ನಿರಂತರ ಅಪಘಾತ, ಆತಂಕದಲ್ಲಿ ವಾಹನ ಸವಾರರು!

ಹದಗೆಟ್ಟ ರಸ್ತೆಗಳಿಂದಾಗಿ ಪ್ರತಿನಿತ್ಯ ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆ ವಾಹನ ಸವಾರರು ಆತಂಕದಲ್ಲೇ ಸಂಚಾರ ನಡೆಸುವ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

Bengaluru News: ಹದಗೆಟ್ಟ ರಸ್ತೆಗಳಿಂದ ನಿರಂತರ ಅಪಘಾತ, ಆತಂಕದಲ್ಲಿ ವಾಹನ ಸವಾರರು!
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jun 09, 2022 | 5:21 PM

ಬೆಂಗಳೂರು: ನಗರದಲ್ಲಿ ಹದಗೆಟ್ಟ ರಸ್ತೆ (Deteriorated road)ಗಳಿಂದಾಗಿ ಪ್ರತಿನಿತ್ಯ ರಸ್ತೆ ಅಪಘಾತ (Accident)ಗಳು ಸಂಭವಿಸುತ್ತಿರುವ ಹಿನ್ನೆಲೆ ವಾಹನ ಸವಾರರು ಆತಂಕದಲ್ಲೇ ಸಂಚಾರ ನಡೆಸುವ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ರಸ್ತೆಯ ಅವ್ಯವಸ್ಥೆ ನೋಡಿ ಸಾರ್ವಜನಿಕರು ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ನಗರದ ರಾಷ್ಟಕವಿ ಕುವೆಂಪು ನಗರದ ವಾರ್ಡ್​​ನ ಜೆ.ಪಿ. ನಗರದಿಂದ ಸಿಲ್ಕ್ ಬೋರ್ಡ್ ತಲುಪುವ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಿವೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು, ಒಂದು ಅಪಘಾತದಲ್ಲಿ ದ್ವಿಚಕ್ರ ವಾಹನ ಎರಡು ಮೂರು ರೌಂಡ್ ಪಲ್ಟಿ ಹೊಡೆದಿದೆ. ಮತ್ತೊಂದು ಅಪಘಾತದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Crime News: ಆಸ್ತಿಯಲ್ಲಿ ಭಾಗ ಕೇಳುವಂತೆ ಪೀಡಿಸುತ್ತಿದ್ದ ಭಾವನನ್ನೇ ಹತ್ಯೆಗೈದ ಬಾಮೈದ!

ರಸ್ತೆಯಲ್ಲಿ ಯಾವುದೇ ಸೂಚನೆ ಫಲಕ ಅಳವಡಿಕೆ ಮಾಡಿಲ್ಲ. ಇದರಿಂದಾಗಿ ಇಂಥ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕನಿಷ್ಠ ಪಕ್ಷ ರಸ್ತೆಯಲ್ಲಿ ಒಂದು ಸ್ಪೀಡ್ ಬ್ರೇಕರ್ ಕೂಡ ಇಲ್ಲ. ರಸ್ತೆಯ ನಡುವೆ ಹಾಕಿದ ಡಿವೇಡರ್​ಗಳಲ್ಲಿ ಗ್ಯಾಪ್ ಕೂಡ ಅಪಘಾತಗಳಿಗೆ ಒಂದು ಕಾರಣವಾಗಿದೆ. ಜೊತೆಗೆ ರಸ್ತೆಯಲ್ಲಿ ಕರ್ವ್ ಕೂಡ ಇದೆ. ಇದು ವಾಹನ ಸವಾರರಿಗೆ ತಿಳಿಯುವುದಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.

ಕೊಲೆ ಆರೋಪಿ ಕೋರ್ಟ್​ಗೆ ಶರಣು

ಬೆಂಗಳೂರು: ಪುಲಕೇಶಿನಗರ ಠಾಣೆಯ ರೌಡಿಶೀಟರ್ ಪ್ರಶಾಂತ್ ಕೊಲೆ ಪ್ರಕರಣದ ಆರೋಪಿ ಅರ್ಜುನ್ ನ್ಯಾಯಾಲಯದ ಮುಂದೆ ಹಾಜರಾಗಿದ್ದಾನೆ. ಮನೆ ಮುಂದೆ ಮೀನು ಖರೀದಿಸುವ ವಿಚಾರಕ್ಕೆ ಆರ್ಜುನ್​ನೊಂದಿಗೆ ಪ್ರಶಾಂತ್ ಕಿರಿಕ್ ಮಾಡಿಕಿಂಡಿದ್ದ. ಅಲ್ಲದೆ ಅರ್ಜುನ್​ಗೆ ಪ್ರಶಾಂತ್ ಬಾಯಿಗೆ ಬಂದಂತೆ ಬೈದಿದ್ದ. ಈ ವೇಳೆ ಕೋಪಗೊಂಡ ಅರ್ಜುನ್, ಪ್ರಶಾಂತ್​ನ ಎದೆಗೆ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ. ಅದರಂತೆ ಕೊಲೆ ಆರೋಪಿ ಅರ್ಜುನ್ ಕೋರ್ಟ್​ ಮುಂದೆ ಶರಣಾಗಿದ್ದಾನೆ. ಕೊಲೆಯಾದ ಪ್ರಶಾಂತ್ ಪುಲಕೇಶಿನಗರದ ಠಾಣೆಯ ರೌಡಿಶೀಟರ್ ಆಗಿದ್ದು, 2020ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.

ಇದನ್ನೂ ಓದಿ: Crime News: ಕುಡುಕ ಪತಿಯ ಕಾಟ ತಾಳಲಾರದೆ ಕತ್ತು ಹಿಚುಕಿ ಪತ್ನಿಯಿಂದಲೇ ಪತಿಯ ಕೊಲೆ!

ದುಬಾರಿ ಬೈಕ್​ಗಳನ್ನು ಕದಿಯುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ದುಬಾರಿ ಬೈಕ್​ಗಳ ಹ್ಯಾಂಡ್​ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್​ಫೀಲ್ಡ್​ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಾಜಿ ಬಂಧಿತ ಆರೋಪಿಯಾಗಿದ್ದಾನೆ. ನಗರದಲ್ಲಿನ ದುಬಾರಿ ಬೈಕ್​ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಬಾಲಜಿ, ಪಾರ್ಕಿಂಗ್ ಮಾಡಿದ್ದ ಬೈಕ್​ಗಳ ಹ್ಯಾಂಡ್​ ಲಾಕರ್​ ಮುರಿದು ಕಳವು ಮಾಡುತ್ತಿದ್ದನು. ಸದ್ಯ ಆರೋಪಿಯ ಸಹಿತ 1 ಲಕ್ಷ ರೂ. ಮೌಲ್ಯದ ಪಲ್ಸರ್ 220 ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ