ಉಡುಪಿ: ಬೆಂಗಳೂರಿನಲ್ಲಿ ಕರೆಂಟ್ ಶಾಕ್ (Current Shock)ಗೆ ಯುವಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪವರ್ ಮಿನಿಸ್ಟರ್ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಇಲಾಖೆಯಿಂದ ತಪ್ಪುಗಳಾಗಿದ್ದಲ್ಲಿ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುತ್ತೇವೆ. ಬೆಸ್ಕಾಂ ಎಂಡಿ ಅವರಿಗೆ 24 ಗಂಟೆಯೊಳಗೆ ವರದಿ ನೀಡಲು ಸೂಚಿಸಿದ್ದೇನೆ. ಈ ರೀತಿಯ ಘಟನೆಗಳಾಗದಂತೆ ಸೂಚನೆ ಪದೇ ಪದೇ ನೀಡಿದ್ದೇನೆ. ಬೆಂಗಳೂರಿನಲ್ಲಿ ನಡೆದ ಘಟನೆಯ ವರದಿ ಪಡೆದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು. ನಮ್ಮ ಇಲಾಖೆ ಕಡೆಯಿಂದ ತಪ್ಪಾಗಿದ್ದಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ ಏರ್ಟೆಲ್ ಕಂಪನಿಯ ಸಂಜಯ್ನಗರ ಇನ್ಚಾರ್ಜ್ ನವೀನ್ ಎಂಬುವವನನ್ನು ಬೆಂಗಳೂರಿನ ಸಂಜಯ್ನಗರ ಪೊಲೀಸರಿಂದ ಬಂಧನ ಮಾಡಲಾಗಿದೆ. ಕಿಶೋರ್ ಸಾವಿಗೆ ಏರ್ಟೆಲ್ ಕಂಪನಿಯ ವೈರ್ ಕಾರಣ ಎಂದು ಹೇಳಲಾಗುತ್ತಿದ್ದು, ಏರ್ಟೆಲ್ ಕಂಪನಿ ವೈರ್ನಲ್ಲಿ ಕರೆಂಟ್ ಪ್ರವಹಿಸಿ ಸಾವನ್ನಪ್ಪಿದ್ದಾನೆ. ಘಟನೆ ಆದ ಬಳಿ ಪೋನ್ ಸ್ವೀಚ್ ಆಪ್ ಮಾಡಿಕೊಂಡಿಕೊಂಡು ತಲೆ ಮರಿಸಿಕೊಂಡಿದ್ದ ನವೀನ್ ನನ್ನ ಅರೆಸ್ಟ್ ಮಾಡಲಾಗಿದೆ. ನಿನ್ನೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಕಿಶೋರ್ (27) ಮೃತ ಪಟ್ಟಿದ್ದ. ಬೆಸ್ಕಾಂ ನಿರ್ಲಕ್ಷ್ಯ ಎಂದು ಆರೋಪಿಸಿ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ;
ಅಲೋವೆರಾ ಜ್ಯೂಸ್‌ನ 5 ಅದ್ಭುತ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ..! ಇಲ್ಲಿದೆ ಮಾಹಿತಿ
ಮತ್ತೊಂದು ದಿವ್ಯ ಕೊಡುಗೆ! ’6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’