ರಾಜಧಾನಿಯಲ್ಲಿ ದಿಢೀರನೆ ಮಳೆ, ಗಾಳಿ: ಚಳಿ ಜೋರು

|

Updated on: Nov 20, 2019 | 7:23 PM

ಬೆಂಗಳೂರು: ರಾಜಧಾನಿಯಲ್ಲಿ ಇಂದು ದಿಢೀರನೆ ಮಳೆಯಾಗಿದೆ. ಬೆಳಗ್ಗೆಯಿಂದ ಮೋಡಮುಸುಕಿದ ವಾತಾವರಣ ಇತ್ತಾದರೂ ಅದು ಮಳೆಗೆ ತಿರುಗುವ ಲಕ್ಷಣಗಳು ಇರಲಿಲ್ಲ. ಆದ್ರೆ ಮಧ್ಯಾಹ್ನದ ವೇಳೆಗೆ ನಗರದ ನಾನಾ ಭಾಗಗಳಲ್ಲಿ ಸ್ವಲ್ಪ ಕಾಲ ಮಳೆ ಬಿದ್ದಿದೆ. ಜಯನಗರ, ಶಾಂತಿನಗರ ಸೇರಿದಂತೆ ಹಲವೆಡೆ ಗಾಳಿಯಿಂದ ಕೂಡಿದ ಜೋರು ಮಳೆಯಾಗಿದೆ. ಸಂಜೆ ವೇಳೆಗೆ ಮಳೆ ಇನ್ನೂ ಹೆಚ್ಚಾಗುವ ಸೂಚನೆಯಿದೆ. ಮಂಜು ಬೀಳುವ ಕಾಲಮಾನದಲ್ಲಿ ಮಳೆಯಾಗಿದ್ದು, ತಾಪಮಾನ ಬಹಳಷ್ಟು ಕುಸಿದಿದ್ದು, ಚಳಿ ಜಾಸ್ತಿಯಾಗುವ ಸಾಧ್ಯತೆಯಿದೆ. ನಗರದಲ್ಲಿ ಮಳೆ ಅವಾಂತರ..!! ರಸ್ತೆಲಿ ನೀರು ನಿಂತು ಟ್ರಾಫಿಕ್ […]

ರಾಜಧಾನಿಯಲ್ಲಿ ದಿಢೀರನೆ ಮಳೆ, ಗಾಳಿ: ಚಳಿ ಜೋರು
Follow us on

ಬೆಂಗಳೂರು: ರಾಜಧಾನಿಯಲ್ಲಿ ಇಂದು ದಿಢೀರನೆ ಮಳೆಯಾಗಿದೆ. ಬೆಳಗ್ಗೆಯಿಂದ ಮೋಡಮುಸುಕಿದ ವಾತಾವರಣ ಇತ್ತಾದರೂ ಅದು ಮಳೆಗೆ ತಿರುಗುವ ಲಕ್ಷಣಗಳು ಇರಲಿಲ್ಲ. ಆದ್ರೆ ಮಧ್ಯಾಹ್ನದ ವೇಳೆಗೆ ನಗರದ ನಾನಾ ಭಾಗಗಳಲ್ಲಿ ಸ್ವಲ್ಪ ಕಾಲ ಮಳೆ ಬಿದ್ದಿದೆ. ಜಯನಗರ, ಶಾಂತಿನಗರ ಸೇರಿದಂತೆ ಹಲವೆಡೆ ಗಾಳಿಯಿಂದ ಕೂಡಿದ ಜೋರು ಮಳೆಯಾಗಿದೆ.

ಸಂಜೆ ವೇಳೆಗೆ ಮಳೆ ಇನ್ನೂ ಹೆಚ್ಚಾಗುವ ಸೂಚನೆಯಿದೆ. ಮಂಜು ಬೀಳುವ ಕಾಲಮಾನದಲ್ಲಿ ಮಳೆಯಾಗಿದ್ದು, ತಾಪಮಾನ ಬಹಳಷ್ಟು ಕುಸಿದಿದ್ದು, ಚಳಿ ಜಾಸ್ತಿಯಾಗುವ ಸಾಧ್ಯತೆಯಿದೆ.

ನಗರದಲ್ಲಿ ಮಳೆ ಅವಾಂತರ..!!
ರಸ್ತೆಲಿ ನೀರು ನಿಂತು ಟ್ರಾಫಿಕ್ ಜಾಮ್ ನಿಂದ ಪ್ರಯಾಣಿಕರು ಪರದಾಡತೊಡಗಿದ್ದಾರೆ. ಬಿನ್ನಿಮಿಲ್ ರಸ್ತೆಯಲ್ಲಿಲಿ ಕಿ.ಮೀ. ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.  ಈ ಮಧ್ಯೆ, ಚಿಕ್ಕಪೇಟೆ ಸಂಚಾರಿ ಪೊಲೀಸರು ಸುಗಮ ಸಂಚರಕ್ಕಾಗಿ ರಸ್ತೆಗಿಳಿದು ಗುಂಡಿ ಮುಚ್ಚಿ ನೀರು ತೆರವು ಗೊಳಿಸಿದರು. ಸಂಚಾರಿ ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

Published On - 3:14 pm, Wed, 20 November 19