ಸಚಿವರು-ಶಾಸಕರಷ್ಟೇ ಅಲ್ಲ, ಪಕ್ಷದ ಪದಾಧಿಕಾರಿಗಳು-ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ :ಸಿಎಂ ಬೊಮ್ಮಾಯಿ‌ಗೆ ಅಮಿತ್ ಶಾ ಫರ್ಮಾನು

| Updated By: ಸಾಧು ಶ್ರೀನಾಥ್​

Updated on: Aug 04, 2022 | 8:19 PM

Amit Shah: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಕ್ ಟು ಬ್ಯಾಕ್ ನಡೆದಿರುವ ಹತ್ಯಾ ಪ್ರಕರಣಗಳಲ್ಲಿ ಯಾವುದೇ ಜಾತಿ, ಮತ ನೋಡದೇ ತನಿಖೆ ಮಾಡಿಸಿ ಎಂದಿರುವ ಅಮಿತ್ ಶಾ ಕೇಸ್‌ಗಳನ್ನ ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಗೊಳಪಡಿಸಿ ಎಂದಿದ್ದಾರೆ.

ಸಚಿವರು-ಶಾಸಕರಷ್ಟೇ ಅಲ್ಲ, ಪಕ್ಷದ ಪದಾಧಿಕಾರಿಗಳು-ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ :ಸಿಎಂ ಬೊಮ್ಮಾಯಿ‌ಗೆ ಅಮಿತ್ ಶಾ ಫರ್ಮಾನು
ಸಚಿವರು-ಶಾಸಕರಷ್ಟೇ ಅಲ್ಲ, ಪಕ್ಷದ ಪದಾಧಿಕಾರಿಗಳು-ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ-ಸಿಎಂ ಬೊಮ್ಮಾಯಿ‌ಗೆ ಅಮಿತ್ ಶಾ ಫರ್ಮಾನು
Image Credit source: Deccan Herald
Follow us on

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಸೂದ್, ಪ್ರವೀಣ್, ಫಾಜಿಲ್ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ತನಿಖೆಯನ್ನು ತ್ವರಿತಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಗೆ (Basavaraj Bommai) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಖಡಕ್ ಸೂಚನೆ ನೀಡಿದ್ದಾರೆ. ಯಾವುದೇ ಜಾತಿ, ಮತ ನೋಡದೇ ತನಿಖೆ ಮಾಡಿಸಿ ಎಂದಿರುವ ಅಮಿತ್ ಶಾ ಕೇಸ್‌ಗಳನ್ನ ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಗೊಳಪಡಿಸಿ ಎಂದಿದ್ದಾರೆ. ಈ ಮಧ್ಯೆ ಕೇವಲ ಸಚಿವರು ಮತ್ತು ಶಾಸಕರನ್ನು ಮಾತ್ರ ಗಮನಿಸುವುದಲ್ಲ. ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನೂ (Karnataka BJP) ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಿಎಂ ಬೊಮ್ಮಾಯಿ‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ರೂಪದಲ್ಲಿ ಸೂಚನೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ರೋಡ್ ಮ್ಯಾಪ್ ಸಿದ್ಧಪಡಿಸಿ, ಪ್ರತಿ ತಿಂಗಳೂ ವರದಿ ಕಳುಹಿಸಿಕೊಡಿ- ಅಮಿತ್ ಶಾ

ಇನ್ನು, ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ರೋಡ್ ಮ್ಯಾಪ್ ಸಿದ್ಧಪಡಿಸಿ, ಪ್ರತಿ ತಿಂಗಳೂ ವರದಿ ಕಳುಹಿಸಿಕೊಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಕೇಂದ್ರ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇಂದು ಮಧ್ಯಾಹ್ನ ಭೋಜನದ ವೇಳೆ ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಗೆ ಅಮಿತ್ ಶಾ ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬೊಮ್ಮಾಯಿ ಮತ್ತು ಕಟೀಲ್ ಜೊತೆ ಭೋಜನದ ವೇಳೆ ಅಮಿತ್ ಶಾ ಪ್ರತ್ಯೇಕ ಮಾತುಕತೆ ನಡೆಸಿದರು.

ಕೋಮುಗಲಭೆಯಲ್ಲಿ ಪಾಲ್ಗೊಂಡವರ ಆಸ್ತಿ ಮುಟ್ಟುಗೋಲಿಗೆ ಕ್ರಮ, ಪ್ರವೀಣ್ ಕೊಲೆಗಾರನ ಶೀಘ್ರ ಬಂಧನ: ಎಡಿಜಿಪಿ ಅಲೋಕ್​ಕುಮಾರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಯಲ್ಲಿ ತೊಡಗಿಸಿಕೊಳ್ಳುವವರ ಬಗ್ಗೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ವರ್ತಿಸಲಿದ್ದಾರೆ. ಅಂಥವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡುವುದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೋಮು ಸೌಹಾರ್ದ ಕದಡುವವರ ಬಗ್ಗೆ ನಾವು ಹಾರ್ಷ್​ (ಕಠೋರ) ಆಗಿಯೇ ವರ್ತಿಸುತ್ತೇವೆ. ನಮ್ಮಿಂದ ಸಾಫ್ಟ್ ಆದ ವರ್ತನೆ ನಿರೀಕ್ಷಿಸಬೇಡಿ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮುಖ್ಯ ಆರೋಪಿಯ ಜಾಡು ಸಿಕ್ಕಿದೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (National Investigation Agency – NIA) ಒಪ್ಪಿಸಿದ್ದರೂ ನಮ್ಮ ಪ್ರಯತ್ನಗಳನ್ನು ನಾವು ನಿಲ್ಲಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ ಅಲೋಕ್​ ಕುಮಾರ್ ಎಚ್ಚರಿಸಿದ್ದಾರೆ.

Published On - 8:11 pm, Thu, 4 August 22