ಪೇಪರ್ ಲೆಸ್ (ಕಾಗದರಹಿತ ) ವಿಧಾನಮಂಡಲ ಕಾರ್ಯವಿಧಾನ ಜಾರಿಗೊಳಿಸಲು ರಾಜ್ಯಗಳ ಸಹಕಾರ ಅತ್ಯಗತ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಡಿಜಿಟಲ್ ಇಂಡಿಯಾದ ಭಾಗವಾಗಿ ಒನ್ ನೇಷನ್ ಒನ್ ಅಪ್ಲಿಕೇಷನ್ ಯೋಜನೆಯಲ್ಲಿ ನಾವು ಮುಂದೆ ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ಸಹಕಾರವಿಲ್ಲದೇ ರಾಷ್ಟ್ರೀಯ ಇ ವಿಧಾನ ಅಪ್ಲಿಕೇಷನ್ (National e-Vidhan Application : NeVA) ಜಾರಿ ಸುಲಭವಲ್ಲ ಎಂದಿದ್ದಾರೆ. ಹರಿಯಾಣ ವಿಧಾನಸಭೆಯಲ್ಲಿ NeVA ತಂತ್ರಾಂಶ ಬಿಡುಗಡೆ ಗೊಳಿಸಿದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಪೂರ್ತಿದಾಯಕ ನಾಯಕತ್ವದಲ್ಲಿ, ನಾವು “ಡಿಜಿಟಲ್ ಇಂಡಿಯಾ” ದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದೇವೆ. ಹರಿಯಾಣದಲ್ಲಿ ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (NeVA) ಬಿಡುಗಡೆ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ಪಟ್ಟರು.
NeVA will help members of Vidhan Sabha to track Ques. & Ans, Calling Attention Motion, etc.
My message on the occasion of launch of NeVA in Haryana Assembly.@mpa_india pic.twitter.com/y4ELl5ujNA
— Pralhad Joshi (@JoshiPralhad) August 10, 2022
ಪೇಪರ್ ರಹಿತ ವಿಧಾನ ಸಭೆ ಕಾರ್ಯಕಲಾಪಗಳನ್ನ ರೂಪಿಸುವ ನಿಟ್ಟಿನಲ್ಲಿ NeVA ಅಪ್ಲಿಕೇಶನ್ ಹೆಚ್ಚು ಸಹಕಾರಿಯಾಗಿದೆ. ವಿಶೇಷವಾಗಿ ಪ್ರಶ್ನೆಗಳನ್ನ ಟ್ರ್ಯಾಕ್ ಮಾಡಲು NeVA ವಿಧಾನ ಸಭೆಯ ಸದಸ್ಯರಿಗೆ ಸಹಾಯ ಮಾಡುತ್ತದೆ. ಅಲ್ಲದೇ ಸರ್ಕಾರದ ಉತ್ತರ, ಕಾಲಿಂಗ್ ಅಟೆನ್ಶನ್, ನಿಲುವಳಿ ಸೂಚನೆ ಸೇರಿದಂತೆ ಇತ್ಯಾದಿ ಕಾರ್ಯಕಲಾಪಗಳನ್ನ ಪೇಪರ್ ಲೆಸ್ ಮಾಡುವಲ್ಲಿ ಇ – ವಿಧಾನ ಅಪ್ಲೀಕೇಶನ್ ಸಹಕಾರಿಯಾಗಿದೆ ಅಂದ್ರು.
NeVA ಜಾರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಹೆಚ್ವಿನ ಗಮನ ಹರಿಸುತ್ತಿದೆ. ಸುಮಾರು 21 ರಾಜ್ಯಗಳು ರಾಷ್ಟ್ರೀಯ ಇ ವಿಧಾನ ಅಪ್ಲೀಕೇಶನ್ ಜಾರಿಗೆ ಆಸಕ್ತಿ ತೋರಿಸಿದ್ದು, ಈಗಾಗಲೇ 16 ರಾಜ್ಯಗಳಿಗೆ ಅನುಮತಿ ನೀಡಲಾಗಿದೆ. ಉತ್ತರ ಪ್ರದೇಶ, ಬಿಹಾರ, ನಾಗಾಲ್ಯಾಂಡ್ ರಾಜ್ಯಗಳು NeVA ಜಾರಿಗೊಳಿಸಿಕೊಂಡು ಸಂಪೂರ್ಣ ಡಿಜಿಟಲ್ ಕಾರ್ಯಕಲಾಪಗಳನ್ನ ನಡೆಸುತ್ತಿವೆ. ಇದೀಗ ಹರಿಯಾಣ ಕೂಡ ಈ ರಾಜ್ಯಗಳ ಸಾಲಿಗೆ ಸೇರುತ್ತಿರುವುದು ಸಂತಸದ ಸಂಗತಿ. ಇತರ ರಾಜ್ಯಗಳೂ ಕೂಡ NeVA ಜಾರಿಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯಗಳ ಸಹಕಾರದಿಂದ ಮಾತ್ರ ಕೇಂದ್ರ ಸರ್ಕಾರ ಈ ಯೋಜನೆಯನ್ನ ಸಂಪೂರ್ಣವಾಗಿ ಜಾರಿಗೊಳಿಸಲು ಸಾಧ್ಯ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.