Unlock‌ 3.O: ಇಂದಿನಿಂದ ಫ್ರೀಡೌನ್ ಜೀವನ ಆರಂಭ​, ಆದರೆ?

|

Updated on: Aug 01, 2020 | 7:18 AM

ಬೆಂಗಳೂರು: ಮಧ್ಯರಾತ್ರಿಯಿಂದ್ಲೇ ದೇಶಾದ್ಯಂತ ಅನ್‌ಲಾಕ್‌ 3.0 ಜಾರಿಯಾಗಿದೆ. ಕಂಟೇನ್ಮೆಂಟ್‌ ಜೋನ್‌ಗಳನ್ನ ಹೊರತುಪಡಿಸಿ ಉಳಿದೆಡೆ ಅನ್‌ಲಾಕ್‌ 3.0 ನಿಯಮಗಳು ಅನ್ವಯವಾಗಲಿದ್ದು, ಕರ್ನಾಟಕದಲ್ಲೂ ಕೂಡ ಕೇಂದ್ರದ ಮಾರ್ಗಸೂಚಿಯನ್ನ ಯಥಾವತ್ತಾಗಿ ಪಾಲನೆ ಮಾಡಲಾಗಿದೆ. ನೈಟ್‌ ಕರ್ಫ್ಯೂ ಎಂಡ್.. ಸಂಡೇ ಲಾಕ್‌ಡೌನ್‌ಗೂ ಬ್ರೇಕ್..! ಕಳೆದ ಬುಧವಾರ ಕೇಂದ್ರ ಸರ್ಕಾರ ಅನ್‌ಲಾಕ್‌ 3.O ಮಾರ್ಗಸೂಚಿಯನ್ನ ಬಿಡುಗಡೆ ಮಾಡಿತ್ತು. ಅದೇ ಮಾರ್ಗಸೂಚಿಯನ್ನೇ ರಾಜ್ಯ ಸರ್ಕಾರವೂ ಪಾಲನೆ ಮಾಡಿದ್ದು, ಇಂದಿನಿಂದ ಜಾರಿಗೆ ಬಂದಿದೆ. ದಿನೇ ದಿನೆ ಸೋಂಕು ಹೆಚ್ಚಳವಾಗಿರೋದ್ರಿಂದ ಶಾಲಾ ಕಾಲೇಜು ಮತ್ತು ಖಾಸಗಿ ಕೋಚಿಂಗ್ ಸೆಂಟರ್​ಗಳ […]

Unlock‌ 3.O: ಇಂದಿನಿಂದ ಫ್ರೀಡೌನ್ ಜೀವನ ಆರಂಭ​, ಆದರೆ?
Follow us on

ಬೆಂಗಳೂರು: ಮಧ್ಯರಾತ್ರಿಯಿಂದ್ಲೇ ದೇಶಾದ್ಯಂತ ಅನ್‌ಲಾಕ್‌ 3.0 ಜಾರಿಯಾಗಿದೆ. ಕಂಟೇನ್ಮೆಂಟ್‌ ಜೋನ್‌ಗಳನ್ನ ಹೊರತುಪಡಿಸಿ ಉಳಿದೆಡೆ ಅನ್‌ಲಾಕ್‌ 3.0 ನಿಯಮಗಳು ಅನ್ವಯವಾಗಲಿದ್ದು, ಕರ್ನಾಟಕದಲ್ಲೂ ಕೂಡ ಕೇಂದ್ರದ ಮಾರ್ಗಸೂಚಿಯನ್ನ ಯಥಾವತ್ತಾಗಿ ಪಾಲನೆ ಮಾಡಲಾಗಿದೆ.

ನೈಟ್‌ ಕರ್ಫ್ಯೂ ಎಂಡ್.. ಸಂಡೇ ಲಾಕ್‌ಡೌನ್‌ಗೂ ಬ್ರೇಕ್..!
ಕಳೆದ ಬುಧವಾರ ಕೇಂದ್ರ ಸರ್ಕಾರ ಅನ್‌ಲಾಕ್‌ 3.O ಮಾರ್ಗಸೂಚಿಯನ್ನ ಬಿಡುಗಡೆ ಮಾಡಿತ್ತು. ಅದೇ ಮಾರ್ಗಸೂಚಿಯನ್ನೇ ರಾಜ್ಯ ಸರ್ಕಾರವೂ ಪಾಲನೆ ಮಾಡಿದ್ದು, ಇಂದಿನಿಂದ ಜಾರಿಗೆ ಬಂದಿದೆ. ದಿನೇ ದಿನೆ ಸೋಂಕು ಹೆಚ್ಚಳವಾಗಿರೋದ್ರಿಂದ ಶಾಲಾ ಕಾಲೇಜು ಮತ್ತು ಖಾಸಗಿ ಕೋಚಿಂಗ್ ಸೆಂಟರ್​ಗಳ ಓಪನ್‌ಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ನೈಟ್‌ ಕರ್ಫ್ಯೂ ತೆರವು ಮಾಡೋದ್ರ ಜೊತೆಗೆ ಸಂಡೇ ಲಾಕ್‌ಡೌನ್‌ ಕೂಡ ಎಂಡ್‌ ಮಾಡಲಾಗಿದೆ. ಆದ್ರೆ ಕಂಟೇನ್‌ಮೆಂಟ್‌ ಜೋನ್‌ಗಳಲ್ಲಿ ಇದ್ಯಾವುದೂ ಅನ್ವಯ ಆಗೋದಿಲ್ಲ. ಕಂಟೇನ್ಮೆಂಟ್‌ ಜೋನ್‌ಗಳಲ್ಲಿ ಲಾಕ್‌ಡೌನ್ ನಿಯಮಗಳೇ ಜಾರಿಯಲ್ಲಿರಲಿದೆ.

ಅನ್​ಲಾಕ್​ 3.0 ರೂಲ್ಸ್
1. ಇಂದಿನಿಂದ ನೈಟ್ ಕರ್ಫ್ಯೂಗೆ ಕಂಪ್ಲೀಟ್ ಗುಡ್ ಬೈ
2. ರಾತ್ರಿ ವೇಳೆ ಜನ, ವಾಹನ ಸಂಚಾರಕ್ಕೆ ಇಲ್ಲ ಯಾವುದೇ ಅಡೆತಡೆ
3.ಆಗಸ್ಟ್ 5ರಿಂದ ಯೋಗ ಸೆಂಟರ್, ಜಿಮ್ ಓಪನ್​ಗೆ ಅನುಮತಿ
4.ದೈಹಿಕ ಅಂತರ ಪಾಲಿಸಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಅನುಮತಿ
5.ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್​ ಆಗಸ್ಟ್​ 31ರವರೆಗೆ ಕ್ಲೋಸ್
6.ಮೆಟ್ರೋ ಸಂಚಾರವಿಲ್ಲ, ಥಿಯೇಟರ್​ಗಳು, ಸ್ವಿಮ್ಮಿಂಗ್ ಪೂಲ್ಸ್ ಬಂದ್
7.ಮನರಂಜನಾ ಪಾರ್ಕ್​ಗಳು, ಬಾರ್​ಗಳು, ಆಡಿಟೋರಿಯಂಗಳು ಬಂದ್
8.ರಂಗ ಮಂದಿರಗಳು, ಕಲ್ಯಾಣ ಮಂಟಪಗಳ ರೀತಿಯ ಕೇಂದ್ರಗಳು ಬಂದ್
9.ಧಾರ್ಮಿಕ, ರಾಜಕೀಯ, ಕ್ರೀಡೆ, ಶೈಕ್ಷಣಿಕ ಕಾರ್ಯಕ್ರಮಕ್ಕಿಲ್ಲ ಅನುಮತಿ
10.ಮನರಂಜನೆ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಿಗಿಲ್ಲ ಅನುಮತಿ
11.ಮದುವೆಗೆ 50 ಜನ, ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಅನುಮತಿ

ಈ ಮೂಲಕ ಲಾಕ್​ಡೌನ್ ಸೀಲ್​ಡೌನ್​ನಲ್ಲಿ ಜೀವನ ಸಾಗಿಸಿದ್ದ ಜನ, ಇಂದಿನಿಂದ ಫ್ರೀಡೌನ್ ಜೀವನ ಆರಂಭಿಸಲಿದ್ದಾರೆ. ಸರ್ಕಾರ ಹೊಸ ರೂಲ್ಸ್ ಮೂಲಕ ಜನಜೀವನವನ್ನ, ಕೊರೊನಾಗೂ ಮುನ್ನ ಇದ್ದ ರೀತಿ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ಸರ್ಕಾರದ ಜೊತೆ ಜನ ಕೈ ಜೋಡಿಸಿದ್ರೆ, ಈ ಪ್ರಕ್ರಿಯೆ ಸುಲಭವಾಗಲಿದೆ. ಅಲ್ದೆ, ಕೊರೊನಾ ಮಹಾಮಾರಿಯ ವಿರುದ್ಧವೂ ಗೆಲುವು ಸಾಧಿಸಬಹುದಾಗಿದೆ.