ಬಿಸಿನೆಸ್‌ ಪಾರ್ಟನರ್‌ಗೆ ಅವರು ಮಾಡಿದ ದೋಖಾ ಎಷ್ಟು ಕೋಟಿ ಗೊತ್ತಾ?

ಬಿಸಿನೆಸ್‌ ಪಾರ್ಟನರ್‌ಗೆ ಅವರು ಮಾಡಿದ ದೋಖಾ ಎಷ್ಟು ಕೋಟಿ ಗೊತ್ತಾ?

ಬೆಂಗಳೂರು: ಚೆಕ್ ಮೌಲ್ಯ ಮಾರ್ಪಾಡುಗೊಳಿಸಿ ಉದ್ಯಮಿಯೊಬ್ಬರಿಗೆ ಅವರ ಪಾರ್ಟನರ್‌ಗಳೇ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನ ರಾಜಶೇಖರ ರೆಡ್ಡಿ ಎಂಬ ಉದ್ಯಮಿಗೆ ಅವರ ಬಿಸಿನೆಸ್‌ ಪಾರ್ಟನರ್‌ಗಳಾದ ಭಾಸ್ಕರ ರೆಡ್ಡಿ, ವೆಂಕಟರಮಣ ರೆಡ್ಡಿ ಹಾಗೂ ಸುದರ್ಶನ ಗಾಲಿ ಎಂಬುವವರು 6 ಕೋಟಿ 30ಲಕ್ಷ ರೂ ವಂಚಿಸಿದ್ದಾರೆ. ಇವರೆಲ್ಲಾ ರಾಜಶೇಖರ ರೆಡ್ಡಿ ಜೊತೆ ಖಾಸಗಿ ಕಂಪನಿಯ ಸಹಭಾಗಿತ್ವ ಹೊಂದಿದ್ದ ಆರೋಪಿಗಳು. ರಾಜಶೇಖರ ರೆಡ್ಡಿ ನೀಡಿದ್ದ 8 ಲಕ್ಷದ 7 ಚೆಕ್ ಗಳನ್ನ 80 ಲಕ್ಷಕ್ಕೆ […]

Guru

| Edited By: sadhu srinath

Jul 31, 2020 | 5:33 PM

ಬೆಂಗಳೂರು: ಚೆಕ್ ಮೌಲ್ಯ ಮಾರ್ಪಾಡುಗೊಳಿಸಿ ಉದ್ಯಮಿಯೊಬ್ಬರಿಗೆ ಅವರ ಪಾರ್ಟನರ್‌ಗಳೇ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹೌದು ಬೆಂಗಳೂರಿನ ರಾಜಶೇಖರ ರೆಡ್ಡಿ ಎಂಬ ಉದ್ಯಮಿಗೆ ಅವರ ಬಿಸಿನೆಸ್‌ ಪಾರ್ಟನರ್‌ಗಳಾದ ಭಾಸ್ಕರ ರೆಡ್ಡಿ, ವೆಂಕಟರಮಣ ರೆಡ್ಡಿ ಹಾಗೂ ಸುದರ್ಶನ ಗಾಲಿ ಎಂಬುವವರು 6 ಕೋಟಿ 30ಲಕ್ಷ ರೂ ವಂಚಿಸಿದ್ದಾರೆ. ಇವರೆಲ್ಲಾ ರಾಜಶೇಖರ ರೆಡ್ಡಿ ಜೊತೆ ಖಾಸಗಿ ಕಂಪನಿಯ ಸಹಭಾಗಿತ್ವ ಹೊಂದಿದ್ದ ಆರೋಪಿಗಳು. ರಾಜಶೇಖರ ರೆಡ್ಡಿ ನೀಡಿದ್ದ 8 ಲಕ್ಷದ 7 ಚೆಕ್ ಗಳನ್ನ 80 ಲಕ್ಷಕ್ಕೆ ಮತ್ತು 7 ಲಕ್ಷದ ಒಂದು ಚೆಕ್‌ನ್ನು  70 ಲಕ್ಷವೆಂದು ಬದಲಿಸಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ನಡೆದ ಈ ಮೋಸ ಆಡಿಟ್ ವೇಳೆ ಬಯಲಿಗೆ ಬಂದಿದೆ. ಅಸಲಿ ವಿಚಾರ ತಿಳಿಯತ್ತಿದ್ದಂತೆ 1 ಕೋಟಿ 60 ಸಾವಿರ ರೂ.ಗಳನ್ನು ಆರೋಪಿಗಳು ವಾಪಸ್‌ ಮಾಡಿದ್ದಾರೆ. ಆದ್ರೆ ಉಳಿದ ಹಣ ವಾಪಾಸ್ ಮಾಡದೆ ಸತಾಯಿಸುತ್ತಿದ್ದಾರೆ. ಇದರಿಂದ ರೋಸೆತ್ತು ಹೋಗಿರುವ ರಾಜಶೇಖರ್‌ ರೆಡ್ಡಿ ವೈಟ್ ಫೀಲ್ಡ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada