ತ್ರಿವಳಿ ತಲಾಖ್ ತಿದ್ದುಪಡಿ ಕಾನೂನಿಗೆ 1 ವರ್ಷ, ಬಿಜೆಪಿ ನಾಯಕರಲ್ಲಿ ಹರ್ಷ
ದೆಹಲಿ:ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕ ಅಂಗೀಕರಿಸಿದ ಮೊದಲ ವಾರ್ಷಿಕೋತ್ಸವವನ್ನು ಭಾರತೀಯ ಜನತಾ ಪಕ್ಷವು ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನವಾಗಿ ಆಚರಿಸುತ್ತಿದೆ. ವಿಧೇಯಕವು, ಕಳೆದ ವರ್ಷ ಇದೇ ದಿನದಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕಾರಗೊಂಡಿತ್ತು. ವಿರೋಧ ಪಕ್ಷಗಳು, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮಸೂದೆ ಪಾಸು ಮಾಡಲಾಗಿದೆ ಎಂದು ಆರೋಪಿಸಿದ್ದರೆ, ಸರಕಾರವು ಈ ಕಾನೂನು ಲಿಂಗ-ತಾರತಮ್ಯ ಇಲ್ಲವಾಗಿಸಿ, ಮುಸ್ಲಿಂ ಮಹಿಳೆಯರಿಗೆ ನೆರವಾಗುತ್ತದೆ ಎಂದು ಹೇಳಿತ್ತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ […]
ದೆಹಲಿ:ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕ ಅಂಗೀಕರಿಸಿದ ಮೊದಲ ವಾರ್ಷಿಕೋತ್ಸವವನ್ನು ಭಾರತೀಯ ಜನತಾ ಪಕ್ಷವು ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನವಾಗಿ ಆಚರಿಸುತ್ತಿದೆ. ವಿಧೇಯಕವು, ಕಳೆದ ವರ್ಷ ಇದೇ ದಿನದಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕಾರಗೊಂಡಿತ್ತು. ವಿರೋಧ ಪಕ್ಷಗಳು, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಮಸೂದೆ ಪಾಸು ಮಾಡಲಾಗಿದೆ ಎಂದು ಆರೋಪಿಸಿದ್ದರೆ, ಸರಕಾರವು ಈ ಕಾನೂನು ಲಿಂಗ-ತಾರತಮ್ಯ ಇಲ್ಲವಾಗಿಸಿ, ಮುಸ್ಲಿಂ ಮಹಿಳೆಯರಿಗೆ ನೆರವಾಗುತ್ತದೆ ಎಂದು ಹೇಳಿತ್ತು.
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತ್ರಿವಳಿ ತಲಾಕ್ ನಿಷೇಧ ಕಾನೂನನ್ನು ಜಾರಿ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
“ಭಾರತದಲ್ಲಿರುವ ಎಲ್ಲಾ ಮುಸ್ಲಿಂ ಮಹಿಳೆಯರು, ಸಾಮಾಜಿಕ ಪೀಡೆಯಾಗಿದ್ದ ಕ್ರೂರ ತ್ರಿವಳಿ ತಲಾಕ್ ಪದ್ಧತಿಯನ್ನು ನಿರ್ಮೂಲಗೊಳಿಸಿದ @narendramodi ಅವರಿಗೆ ಕೃತಙ್ಞತೆ ಸಲ್ಲಿಸುತ್ತದೆ. ಧನ್ಯವಾದಮೋದಿಭೈಜಾನ್” @naqvimukhtar
ಮತ್ತೊಂದು ಟ್ವೀಟ್ ಮೂಲಕ ನಖ್ವಿಯವರು, ಮೋದಿ ಸರಕಾರ ತ್ರಿವಳಿ ತಲಾಕ್ ಪದ್ಧತಿಯನ್ನು ಕ್ರಿಮಿನಲ್ ಅಪರಾಧವೆಂದು ಘೋಷಿಸುವ ಮೂಲಕ ಮುಸ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ ಎಂದಿದ್ದಾರೆ.
“ನರೇಂದ್ರ ಮೋದಿ ಸರಕಾರ ತ್ರಿವಳಿತಲಾಖ್ ಪದ್ಧತಿಯನ್ನು ಅಪರಾಧವೆಂದು ಪರಿಗಣಿಸುವ ನಿರ್ಧಾರ ತೆಗೆದುಕೊಂಡಿದ್ದು ಮುಸ್ಲಿಂ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವುದರೊಂದಿಗೆ ಅವರನ್ನು ಸ್ವಾವಲಂಬಿಗಳನ್ನಾಗಿಸಿದೆ”@naqvimukhtar
ತ್ರಿವಳಿ ತಲಾಕ್ ಪದ್ಧತಿ ತೆಗೆದು ಹಾಕಿ ಮುಸ್ಲಿಂ ಮಹಿಳೆಯರ ರಕ್ಷಣೆ ಮತ್ತು ಹಕ್ಕುಗಳ ಕಾನೂನು ಜಾರಿಗೊಳಿಸಿದ ನಂತರ ಅಂಥ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆಯೆಂದು ಸಹ ನಖ್ವಿ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್ ತಮ್ಮ ಟ್ವೀಟ್ನಲ್ಲಿ ಇಂದಿನ ದಿನ ಸುವರ್ಣಾಕ್ಷರಗಳಿಂದ ಬರೆದಿರುವಂಥದ್ದು ಎಂದಿದ್ದಾರೆ.
“31ನೇ ಜುಲೈ 2020 ದಿನವನ್ನು ನಾವು ಮುಸ್ಲಿಂಮಹಿಳೆಯರಹಕ್ಕುಗಳದಿನ ಎಂದು ಆಚರಿಸುತ್ತಿದ್ದೇವೆ. ಮುಸ್ಲಿಂ ಸಮುದಾಯದ ಮಹಿಳೆಯರಿಗೆ ನ್ಯಾಯಯುತ, ಆದರ ಮತ್ತು ಸಮಾನತೆಯ ಬದುಕು ನಡೆಸಲು ಅವಕಾಶ ಮಾಡಿಕೊಟ್ಟು, ತ್ರಿವಳಿ ತಲಾಖ್ನಂಥ ಕೆಟ್ಟ ಪದ್ಧತಿಯನ್ನು ನಿರ್ಮೂಲಗೊಳಿಸಿದ ಇಂದಿನ ದಿನವನ್ನು ಭಾರತೀಯ ಪ್ರಜಾಪ್ರಭತ್ವದಲ್ಲಿ ಸುವರ್ಣಾಕ್ಷರಗಳಿಂದ ಬರೆದ ದಿನವೆಂದು ಸ್ಮರಿಸಲಾಗುತ್ತದೆ”@rsprasad
ಭಾರತೀಯ ಜನತಾ ಪಕ್ಷವು, ಮುಸ್ಲಿಂ ಮಹಿಳೆಯರ ರಕ್ಷಣೆ ಮತ್ತು ಹಕ್ಕುಗಳ ಕಾನೂನು ಜಾರಿಗೆ ಬಂದ ನಂತರ ದಶಕಗಳಿಂದ ಆ ಸಮುದಾಯದ ಮಹಿಳೆಯರು ಅನುಭವಿಸುತ್ತಿದ್ದ ಬವಣೆ, ಶೋಷಣೆ ಮತ್ತು ಹಿಂಸೆ ಕೊನೆಗೊಂಡಿದೆ ಎಂದು ಟ್ವೀಟ್ ಮೂಲಕ ಹೇಳಿದೆ.
“ಶಹ ಬಾನು ಮೊದಲುಗೊಂಡು, ಶಾಯಿರಾ ಬಾನುವರೆಗೆ ದಶಕಗಳಿಂದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಪೀಡೆಯನ್ನು ಎದುರಿಸುತ್ತಾ, ಆಸಮಾನತೆ ಮತ್ತು ಅಗೌರವಗಳೊಂದಿಗೆ ಜೂಜುತ್ತಾ ಸಮಾಜದಲ್ಲಿ ಬದುಕುತ್ತಿದ್ದರು. 1ಆಗಸ್ಟ, 2019 ರಂದು ಮೋದಿ ಸರಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಿದ ನಂತರ ಅವರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ” @BJP4India.
Published On - 6:13 pm, Fri, 31 July 20