ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನ ವಶ, ವಿಮಾನ ನಿಲ್ದಾಣ ಯಾವುದು?

  • TV9 Web Team
  • Published On - 17:14 PM, 31 Jul 2020
ಮತ್ತೆ ಭಾರಿ ಪ್ರಮಾಣದಲ್ಲಿ ಚಿನ್ನ ವಶ, ವಿಮಾನ ನಿಲ್ದಾಣ ಯಾವುದು?

ಹೈದರಾಬಾದ್: ಕೆಲವು ದಿನಗಳ ಹಿಂದೆ ಕೇರಳದಲ್ಲಿ ಸದ್ದು ಮಾಡಿದ್ದ ಚಿನ್ನದ ಕಳ್ಳ ಸಾಗಾಣಿಕೆ ವಿಚಾರ ದೇಶದಲ್ಲೆಡೆ ಬಾರಿ ಸದ್ದು ಮಾಡಿತ್ತು, ಆ ಪ್ರಕರಣ ಮರೆಯುವ ಮುನ್ನವೇ ಹೈದ್ರಾಬಾದ್ ನಲ್ಲಿ ಅಂತಹದೆ ಪ್ರಕರಣ ಬೆಳಕಿಗೆ ಬಂದಿದೆ.

ಒಂದೇ ಭಾರತ್ ಮಿಷನ್ ಅಡಿ ದಾಮನ್ ನಿಂದ ಪ್ರಯಾಣ ಬೆಳೆಸಿದ್ದ ಸುಮಾರು 11 ಪ್ರಯಾಣಿಕರ ಬ್ಯಾಗಿನಲ್ಲಿದ್ದ ಚಿನ್ನವನ್ನು ಹೈದರಾಬಾದ್ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

11 ಪ್ರಯಾಣಿಕರ ಬ್ಯಾಗಿನಲ್ಲಿ ಒಟ್ಟು 3 ಕೆಜಿ ಚಿನ್ನವಿದ್ದು, ಚಿನ್ನದ ಮೌಲ್ಯ 2.5 ಕೋಟಿ ರೂ. ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಸದ್ಯ ಚಿನ್ನದ ಕಳ್ಳ ಸಾಗಾಣಿಕೆ ವಿಚಾರವಾಗಿ ಶಂಷಾಬಾದ್ ಪೊಲೀಸರು ತೀವ್ರ ವಿಚಾರಣೆ ನೆಡೆಸುತ್ತಿದ್ದಾರೆ.