ಬೆಂಗಳೂರು: ಅನ್ಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿರುವ ಕಾರಣ ಎಲ್ಲಾ ಚಟುವಟಿಕೆಗಳನ್ನು ಓಪನ್ ಮಾಡಬೇಕಿದೆ.ಎಲ್ಲಾ ವ್ಯಾಪಾರ- ವ್ಯವಹಾರವನ್ನು ಆರಂಭಿಸಲು ಸಾಕಷ್ಟು ಜನ ಮನವಿ ಮಾಡಿಕೊಂಡಿದ್ದಾರೆ. ಆದರೆ ಅನ್ಲಾಕ್ ಮಾಡುವುದು ಸುಲಭ ಆದರೆ, ಅನ್ಲಾಕ್ ನಂತರ ವೈರಸ್ ಹರಡುವ ಸಾಧ್ಯತೆಯಿದೆ. ಸದ್ಯ ಬೃಹತ್ ಮಾರುಕಟ್ಟೆಗಳನ್ನು ಓಪನ್ ಮಾಡಲ್ಲ. ಮಾರುಕಟ್ಟೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆದೇಶ ಆಗುತ್ತದೆ ಎಂದು ತಿಳಿಸಿದ್ದಾರೆ.
ಅನ್ಲಾಕ್ 3.0 ವಿಚಾರವಾಗಿ ಮಾತನಾಡಿದ ಅವರು ಥಿಯೇಟರ್ಗಳು ತುಂಬಾ ಅಪಾಯಕಾರಿ ಇದ್ದ ಹಾಗೇ.
ಎರಡ್ಮೂರು ಗಂಟೆಗಳ ಕಾಲ ಜನರು ಮುಚ್ಚಿದ ಕೋಣೆಯಲ್ಲಿ ಇರಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಥಿಯೇಟರ್ಗಳನ್ನ ಓಪನ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಸಡಿಲಿಕೆ ಆಗಲಿದೆ. ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಸೋಮವಾರದಿಂದಲೇ ಮಾಲ್ ಓಪನ್ ಸಾಧ್ಯತೆ
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಈಗಾಗಲೇ ಅನ್ಲಾಕ್ 2.0 ಆರಂಭವಾಗಿದ್ದು, ಇದೀಗ ಜುಲೈ 5 ರಿಂದ ಅನ್ಲಾಕ್ 3.O ಜಾರಿಯಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಮಾಲ್ಗೆ ರಿಲೀಫ್ ನೀಡಲು ನಿರ್ಧರಿಸಿದೆ. ಇನ್ನು ಥಿಯೇಟರ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ಗಳಿಗೂ ರಿಲೀಫ್ ನೀಡುವ ಸಾಧ್ಯತೆ ಇದೆ.
ಅನ್ಲಾಕ್ 3.O ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಲ್ಲಿ ಮಾಲ್ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಲ್ಗಳು ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ 10 ಗಂಟೆಗೆ ಓಪನ್ ಆಗುತ್ತಿದ್ದ ಮಾಲ್ಗಳು. ನೈಟ್ ಕರ್ಫ್ಯೂ ಜಾರಿಗೆ ಬಂದರೆ, ಬೆಳಗ್ಗೆ ಬೇಗನೆ ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ.
ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್ಲಾಕ್ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ರಾಜ್ಯದ ಪಾಸಿಟಿವ್ ರೇಟ್ ಗಮನದಲ್ಲಿರಿಸಿಕೊಂಡು ಮಾಲ್ ಓಪನ್ಗೆ ಮುಂದಾಗಿದೆ. ಇನ್ನು ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಥಿಯೇಟರ್, ಪಬ್, ಬಾರ್, ಕ್ಲಬ್, ಸ್ವಿಮ್ಮಿಂಗ್ ಪೂಲ್ಗಳಿಗೆ ಅನುಮತಿ ಕೊಡುವ ಸಾಧ್ಯತೆಯಿದೆ.
ಇದನ್ನೂ ಓದಿ:
Karnataka Unlock: 3ನೇ ಹಂತದ ಅನ್ಲಾಕ್; ಸೋಮವಾರದಿಂದಲೇ ಮಾಲ್ ಓಪನ್ ಸಾಧ್ಯತೆ, ಷರತ್ತುಗಳು ಅನ್ವಯ
ಜನಸಾಮಾನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ, ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ: ಗೌರವ್ ಗುಪ್ತಾ