PPE Kitಗಳ ನಿರ್ಲಕ್ಷ್ಯದ ಪರಮಾವಧಿ.. ಎಲ್ಲೆಡೆ ತಾಂಡವವಾಡುತ್ತಿದೆ

| Updated By:

Updated on: Jul 01, 2020 | 11:41 AM

ಕೊರೊನಾ ಅಟ್ಟಹಾಸದ ನಡುವೆ ಸಿಬ್ಬಂದಿ ಮಹಾ ಎಡವಟ್ಟು ಮಾಡ್ತಿದ್ದಾರೆ. ಬೆಂಗಳೂರಿನ ಜೆ.ಸಿ ನಗರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಿ ಧರಿಸಿದ್ದ ಪಿಪಿಇ ಕಿಟ್​ಗಳನ್ನು ಕಳಚಿ ಅಲ್ಲೇ ಬಿಸಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ಈಗ ಇದೇ ರೀತಿಯ ಘಟನೆ ಮರು ಕಳಿಸಿದೆ. ರಾಜಧಾನಿ ಅಷ್ಟೇ ಅಲ್ಲದೆ ಜಿಲ್ಲೆಗಳಲ್ಲೂ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಈಗಲಾದ್ರು ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ಕಾರಣರಾಗುತ್ತಾರೆ. ಮಕ್ಕಳ ವಾರ್ಡ್ ಬಳಿ ಪಿಪಿಇ ಕಿಟ್ಸ್ […]

PPE Kitಗಳ ನಿರ್ಲಕ್ಷ್ಯದ ಪರಮಾವಧಿ.. ಎಲ್ಲೆಡೆ ತಾಂಡವವಾಡುತ್ತಿದೆ
Follow us on

ಕೊರೊನಾ ಅಟ್ಟಹಾಸದ ನಡುವೆ ಸಿಬ್ಬಂದಿ ಮಹಾ ಎಡವಟ್ಟು ಮಾಡ್ತಿದ್ದಾರೆ. ಬೆಂಗಳೂರಿನ ಜೆ.ಸಿ ನಗರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯನ್ನು ಅಂತ್ಯಕ್ರಿಯೆ ಮಾಡಿ ಧರಿಸಿದ್ದ ಪಿಪಿಇ ಕಿಟ್​ಗಳನ್ನು ಕಳಚಿ ಅಲ್ಲೇ ಬಿಸಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿತ್ತು. ಈಗ ಇದೇ ರೀತಿಯ ಘಟನೆ ಮರು ಕಳಿಸಿದೆ. ರಾಜಧಾನಿ ಅಷ್ಟೇ ಅಲ್ಲದೆ ಜಿಲ್ಲೆಗಳಲ್ಲೂ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಈಗಲಾದ್ರು ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ಕಾರಣರಾಗುತ್ತಾರೆ.

ಮಕ್ಕಳ ವಾರ್ಡ್ ಬಳಿ ಪಿಪಿಇ ಕಿಟ್ಸ್
ಬೆಳಗಾವಿಯಲ್ಲೂ ಆಸ್ಪತ್ರೆ ತುಂಬೆಲ್ಲಾ ಬಳಸಿದ ಪಿಪಿಇ ಕಿಟ್ಸ್​ಗಳು ರಾರಾಜಿಸುತ್ತಿವೆ. ಆಸ್ಪತ್ರೆಗಳಲ್ಲೇ ಸ್ವಚ್ಛತೆ ಕಪಾಡಿಕೊಳ್ಳುತ್ತಿಲ್ಲ. ಕೊರೊನಾ ಅಟ್ಟಹಾಸದ ನಡುವೆ ಆಸ್ಪತ್ರೆಯಲ್ಲಿ ಮಹಾ ಎಡವಟ್ಟು ನಡೀತಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಮಕ್ಕಳ ವಾರ್ಡ್​ಬಳಿ ವೈದ್ಯರು ಬಳಸಿರುವ PPE ಕಿಟ್​ಗಳನ್ನ ಸಿಬ್ಬಂದಿ ಎಲ್ಲೆಂದರಲ್ಲಿ ಎಸೆದಿದ್ದಾರೆ. ಮಕ್ಕಳ ಐಸೋಲೇಷನ್ ವಾರ್ಡ್​​ನಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ವಾರಿಯರ್ಸ್​ಗೆ ಸೇಫ್ ಗಾರ್ಡ್ ಆಗಿರೋ ಕಿಟ್​​ಗಳು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಳೆ ನೀರು ವಾರ್ಡ್​​​ನೊಳಗೆ ನುಗ್ಗದಂತೆ ತಡೆಯಲು ನೀರು ಒಳ ನುಗ್ಗುವ ಜಾಗದಲ್ಲಿ ಪಿಪಿಇ ಕಿಟ್ ಬಳಸಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲೂ ಇದೇ ಗೋಳು
ಇಲ್ಲೂ ಕೂಡ ಇದೇ ಗೋಳು. ಬಳಸಿದ ಪಿಪಿಇ ಕಿಟ್​ಗಳನ್ನು ಹುಬ್ಬಳ್ಳಿಯ ನೃಪತುಂಗ ಬೆಟ್ಟದ ರಸ್ತೆ ಬಳಿ ಎಸೆದಿದ್ದಾರೆ. ಜನ ಓಡಾಡ್ತಾರೆ ಅನ್ನೋ ಸಣ್ಣ ತಿಳಿವಳಿಕೆಯೂ ಇಲ್ಲದೆ ರಸ್ತೆ ಪಕ್ಕ ಎಸೆದು ಹೋಗಿದ್ದಾರೆ. ಇದರಿಂದ ಯಾರಿಗಾದ್ರೂ ಸೋಂಕು ತಗುಲಿದ್ರೆ ಯಾರು ಹೊಣೆ? ಪಿಪಿಇ ಕಿಟ್ ನೋಡಿ ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ. ಉಪಯೋಗಿಸಿದ ಬಳಿಕ ಕಿಟ್‍ನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡ್ಬೇಕು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೇ ಖಡಕ್ ನಿರ್ದೇಶನ ನೀಡಿದೆ. ಇಷ್ಟಾದ್ರೂ ರಸ್ತೆ ಪಕ್ಕ ಪಿಪಿಇ ಕಿಟ್ ಎಸೆದು ಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.