ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ, ವಿದ್ಯುತ್ ಉತ್ಪಾದನೆಗೆ ಹಿನ್ನಡೆ

| Updated By: Rakesh Nayak Manchi

Updated on: Oct 13, 2023 | 10:13 AM

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಉಂಟಾಗುತ್ತಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಜಲಾಶಯ, ಸೂಪಾ ಜಲಾಶಯ, ಗೇರುಸೊಪ್ಪ ಜಲಾಶಯ, ತಟ್ಟಿಹಳ್ಳಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ವಿದ್ಯುತ್ ಉತ್ಪಾದನೆಯಲ್ಲಿ ಶೆಕಡಾ 10 ರಷ್ಟು ಕುಸಿತ ಕಂಡಿದೆ. ಪ್ರತಿ ದಿನ 250 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ನಷ್ಟವಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ, ವಿದ್ಯುತ್ ಉತ್ಪಾದನೆಗೆ ಹಿನ್ನಡೆ
ಉತ್ತರ ಕನ್ನಡ ಜಿಲ್ಲೆಯ ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ, ವಿದ್ಯುತ್ ಉತ್ಪಾದನೆಗೆ ಹಿನ್ನಡೆ
Follow us on

ಕಾರವಾರ, ಅ.13: ಮಳೆ ಕೊರತೆಯಾಗಿ ಹಲವೆಡೆ ಬರದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ರಾಜ್ಯದ ಉದ್ದಗಲಕ್ಕೂ ಅಘೋಷಿತ ಲೋಡ್ ಶೆಡ್ಡಿಂಗ್ (Load Shedding) ಸಮಸ್ಯೆ ಉಂಟಾಗುತ್ತಿದೆ. ಈ ನಡುವೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕದ್ರಾ ಜಲಾಶಯ, ಸೂಪಾ ಜಲಾಶಯ, ಗೇರುಸೊಪ್ಪ ಜಲಾಶಯ, ತಟ್ಟಿಹಳ್ಳಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಶೆಕಡಾ 10 ರಷ್ಟು ಕುಸಿತ ಕಂಡಿದೆ. ಪ್ರತಿ ದಿನ 250 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ (Power Generation) ನಷ್ಟವಾಗುತ್ತಿದೆ.

ಕದ್ರಾ, ಸೂಪಾ, ಗೇರುಸೊಪ್ಪಾ, ತಟ್ಟಿಹಳ್ಳಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕಾಳಿ ನದಿ ಭಾಗದ ಜಲಾಶಯಗಳಿಂದ 1340 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದೆನೆಯಾಗುತ್ತಿದ್ದು, ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದೆ.

ವಿವಿಧ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆ

  • ನಾಗಜರಿ- 870 ಮೇಗಾ ವ್ಯಾಟ್ ಉತ್ಪಾದನೆ
  • ಕದ್ರಾ- 150 ಮೇಗಾ ವ್ಯಾಟ್ ಉತ್ಪಾದನೆ
  • ಕೊಡಸಳ್ಳಿ- 120 ಮೇಗಾ ವ್ಯಾಟ್ ಉತ್ಪಾದನೆ
  • ಸೂಪಾ- 200 ಮೇಗಾ ವ್ಯಾಟ್ ಉತ್ಪಾದನೆ
  • ಗೇರು ಸೊಪ್ಪಾ- 150 ವೇಗಾ ವ್ಯಾಟ್ ಉತ್ಪಾದನೆ

ಜಲಾಶಯಗಳಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ವಿದ್ಯುತ್ ವಿದ್ಯುತ್ ಉತ್ಪಾದನೆಗೆ ಹಿನ್ನೆಡೆ‌‌ಯಾಗಿದೆ. ರಾಜ್ಯದಲ್ಲಿ ಮಳೆ ಕೊರತೆ ಮುಂದುವರೆದರೆ ಜಲಾಶಯಗಳಲ್ಲಿ ವಿದ್ಯುತ್ ಉತ್ಪಾದನೆ ಬಹುತೇಕ ಬಂದ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್: ಕೊನೆಗೂ ಸತ್ಯ ಒಪ್ಪಿಕೊಂಡ ಡಿಕೆ ಶಿವಕುಮಾರ್

ಈಗಾಗಲೇ ರಾಜ್ಯದ ಜನರು ಲೋಡ್ ಶೆಡ್ಡಿಂಗ್ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೆಸ್ಕಾ ಒಂದಕ್ಕೆ ಪ್ರತಿನಿತ್ಯ 8 ಮಿಲಿಯನ್ ಯುನಿಟ್ ವಿದ್ಯುತ್ ಅವಶ್ಯಕವಾಗಿದೆ. ಜಿಲ್ಲೆಗೆ ಬಳಕೆಗೆ ಬೇಕಾದ ವಿದ್ಯುತ್ ಬಳಸಿ ನಂತರ ಹೆಸ್ಕಾಂ ಸೇರಿದಂತೆ ಬೇರೆ ಬೇರೆ ವಿಭಾಗಕ್ಕೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಮಳೆ ಕೊರತೆ ಮುಂದುವರೆದರೆ ಜಲ ವಿದ್ಯುತ್ ಉತ್ಪಾದನೆಗೆ ಸಂಕಷ್ಟ ಎದುರಾಗಲಿದೆ.

ಕೈಗಾ ಅಣುಸ್ಥಾವರದಲ್ಲಿ 900 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಲಾಗುತ್ತದೆ. ಆದರೆ ಅಣುಸ್ಥಾವರಕ್ಕೂ ನೀರು ಬೇಕಿದೆ. ಮಳೆ ಕೊರತೆ ಕೇವಲ ಕುಡಿಯುವ ನೀರು, ಕೃಷಿ ಮೇಲೆ ಮಾತ್ರ ಹೊಡೆತಕೊಟ್ಟಿಲ್ಲ. ಈಗ ವಿದ್ಯುತ್ ಉತ್ಪಾದನೆ ಮೇಲು ಹೊಡೆತ ನೀಡುತ್ತಿದೆ. ಮಳೆ ಕೊರತೆ ಮುಂದುವರೆದರೆ ರಾಜ್ಯಕ್ಕೆ ಮತ್ತಷ್ಟು ಕರೆಂಟ್ ಕೊರತೆ ಎದುರಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ