ಉತ್ತರ ಕನ್ನಡ: ಆರ್.ಬಿ.ಐ(RBI)2000 ರೂಪಾಯಿ ನೋಟನ್ನು ಹಿಂಪಡೆಯುತಿದ್ದಂತೆ ಜಿಲ್ಲೆಯಲ್ಲಿ 10 ರೂಪಾಯಿ(Ten Rupees)ನಾಣ್ಯವನ್ನು ಪಡೆದುಕೊಳ್ಳಲು ಜನ ಹಿಂದೇಟು ಹಾಕುತಿದ್ದು, ಜನರೇ ಸ್ವಯಂ ಪ್ರೇರಿತವಾಗಿ ಬ್ಯಾನ್ ಮಾಡಿದ್ದಾರೆ. ಹತ್ತು ರೂಪಾಯಿ ನಾಣ್ಯ ಚಲಾವಣೆ ರದ್ದಾಗಿದೆ ಎಂಬ ವದಂತಿಗಳಿಂದ ವರ್ತಕರು ಹಾಗೂ ಗ್ರಾಹಕರು ವಹಿವಾಟು ನೆಡೆಸುವಾಗ ನಾಣ್ಯವನ್ನು ಪಡೆದುಕೊಳ್ಳುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿ ವರ್ತಕರ ಹಾಗೂ ಗ್ರಾಹಕರು ಬ್ಯಾಂಕ್ಗಳಿಗೆ ಹತ್ತು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಹೋದ್ರೆ, ಕೆಲ ಬ್ಯಾಂಕ್ನಲ್ಲಿ ತೆಗೆದುಕೊಳ್ಳಲು ನಿರಾಕರಿಸುತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಹಬ್ಬಿದ ಗಾಳಿ ಸುದ್ದಿಗಳು ನಿಜವೆಂದು ನಂಬಿದ ಜನ 10 ರೂಪಾಯಿ ನಾಣ್ಯ ತೆಗೆದುಕೊಳ್ಳುತ್ತಿಲ್ಲ. ಇನ್ನು ತಮ್ಮ ಬಳಿ ಇರುವ ನಾಣ್ಯಗಳನ್ನು ವರ್ತಕರು ಚಲಾವಣೆ ಮಾಡಲು ಸಹ ಪರದಾಡುತಿದ್ದು, ಪಡೆದುಕೊಂಡ ಲಕ್ಷಾಂತರ ರೂಪಾಯಿ ನಾಣ್ಯಗಳು ಉಳಿಯುವಂತಾಗಿದೆ.
ಇನ್ನು ಹತ್ತು ರುಪಾಯಿ ನಾಣ್ಯಗಳು ಇದೀಗ ಜಿಲ್ಲೆಯ ವಿವಿಧ ಬ್ಯಾಂಕ್ನಲ್ಲಿ ಸಹ 5 ಕೋಟಿಗೂ ಹೆಚ್ಚು ಉಳಿದುಹೋಗಿವೆ. ಹೇಗಾದರೂ ಮಾಡಿ ನಾಣ್ಯಗಳನ್ನ ಮಾರುಕಟ್ಟೆಯಲ್ಲಿ ಚಲಾವಣೆಗೆ ತರಬೇಕು, ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನ ಹೋಗಲಾಡಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು ಜನರು ನಾಣ್ಯವನ್ನು ಬದಾಲಾಯಿಸಿಕೊಂಡು ನೋಟುಗಳನ್ನು ಪಡೆಯಲು ಬಂದಾಗ ಬ್ಯಾಂಕ್ ಸಹ ನಿರಾಕರಿಸುತ್ತಿದೆ. ಕಾರಣ ನಾಣ್ಯ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರಲೆಂದು.
ಇದನ್ನೂ ಓದಿ:2000 ರೂ. ನೋಟು ಬದಲಾವಣೆಗೆ ಫಾರ್ಮ್ ಬಿಡುಗಡೆ: ಇಲ್ಲಿದೆ ಭರ್ತಿ ಪ್ರಕ್ರಿಯೆ
ಇನ್ನು ಕೇವಲ ಇದು ಉತ್ತರ ಕನ್ನಡ ಜಿಲ್ಲೆಯ ಜನರ ಸಮಸ್ಯೆ ಆಗಿಲ್ಲ. ರಾಜ್ಯದಲ್ಲಿ ಈ ನಾಣ್ಯ ಬ್ಯಾನ್ ಆಗಿದೆ ಎಂಬ ವಂದತಿಗಳಿವೆ. ಹೀಗಾಗಿ ಜಿಲ್ಲೆಯ ಪ್ರತಿ ಬ್ಯಾಂಕ್ನಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸಲು ನಾಣ್ಯ ಮೇಳವನ್ನು ಆಯೋಜನೆ ಮಾಡಿದ್ದು, ತಪ್ಪು ತಿಳುವಳಿಕೆ ಬಗ್ಗೆ, ಜೊತೆಗೆ ಹತ್ತು ರೂಪಾಯಿ ನಾಣ್ಯದ ಉಪಯೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನ ಮಾಡುತ್ತಿದೆ. ಹತ್ತು ರೂಪಾಯಿ ನಾಣ್ಯ ಬ್ಯಾನ್ ಆಗಿಲ್ಲ, ಇದು ಚಲಾವಣೆಯಲ್ಲಿದೆ. ಜೊತೆಗೆ ಹತ್ತು ರೂಪಾಯಿ ನೋಟು ಬೇಗ ಕಟ್ ಆಗಬಹುದು, ಆದರೆ ನಾಣ್ಯ ಸಾಕಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತೆ. ಇದನ್ನ ನಕಲು ಮಾಡಲು ಸಹ ಕಷ್ಟ ಸಾಧ್ಯವಿದೆ. ನಾಣ್ಯ ಬಳಕೆ ಮಾಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಸದ್ಯ ಆರ್.ಬಿ.ಐ 2000 ರೂಪಾಯಿ ನೋಟನ್ನು ಹಿಂಪಡೆದು ಜನರಿಗೆ ಮತ್ತೊಮ್ಮೆ ಶಾಕ್ ನೀಡಿದ್ರೆ, ಗಾಳಿಸುದ್ದಿಗಳು ಇದೀಗ ಬ್ಯಾಂಕ್ಗಳಿಗೂ ಶಾಕ್ ನೀಡಿದ್ದು, ಜನರೇ ಸ್ವಯಂ ಪ್ರೇರಿತವಾಗಿ ಹತ್ತು ರೂಪಾಯಿ ನಾಣ್ಯ ಬ್ಯಾನ್ ಮಾಡುವಂತಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ