ಹಿರಿಯರ ಕಾಲದ ದೇವರ ತೆಂಗಿನಕಾಯಿಗಾಗಿ ತಮ್ಮನ ಹೆಂಡ್ತಿಯನ್ನೇ ಹತ್ಯೆಗೈದ: ಅಷ್ಟಕ್ಕೂ ತೆಂಗಿನಕಾಯಿಯ ಮಹತ್ವವೇನು?

ಸಹೋದರರು ತಂದೆ ತಾಯಿ ಮಾಡಿದ ಆಸ್ತಿಗಾಗಿ ಜಗಳ ಮಾಡುವುದನ್ನು ನಾವೆಲ್ಲರೂ ಕಂಡಿದ್ದೇವೆ. ಆದರೆ ತಂದೆ ಮಾಡಿಟ್ಟ ದೇವರ ಕಾಯಿ ಕೊಟ್ಟಿಲ್ಲವೆಂಬ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಸಹೋದರರ ನಡುವೆ ಜಗಳ ನಡೆಯುತಿತ್ತು. ರಾಜಿ ಸಂಧಾನವೂ ಆಗಿತ್ತು. ಆದರೂ ಮನಸ್ಸಿನಲ್ಲಿ ಕೋಪ ತುಂಬಿಕೊಂಡಿದ್ದ ಅಣ್ಣ ತಮ್ಮನ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.

ಹಿರಿಯರ ಕಾಲದ ದೇವರ ತೆಂಗಿನಕಾಯಿಗಾಗಿ ತಮ್ಮನ ಹೆಂಡ್ತಿಯನ್ನೇ ಹತ್ಯೆಗೈದ: ಅಷ್ಟಕ್ಕೂ ತೆಂಗಿನಕಾಯಿಯ ಮಹತ್ವವೇನು?
ಕೊಲೆಯಾದ ಜಾಗದಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು
Updated By: ಭಾವನಾ ಹೆಗಡೆ

Updated on: Sep 17, 2025 | 3:27 PM

ಕಾರವಾರ , ಸೆಪ್ಟೆಂಬರ್17 : ಹಿರಿಯರ ಕಾಲದ ದೇವರ ತೆಂಗಿನಕಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಮತ್ತು ಅವನ ತಮ್ಮನ ನಡುವೆ ಹಿರಿಯರ ಕಾಲದ ದೇವರ ತೆಂಗಿನಕಾಯಿ ಸಲುವಾಗಿ ಜಗಳವಾಗಿತ್ತು. ಅದು ಇತ್ಯರ್ಥವಾದ ನಂತರವೂ ಕೋಪದಿಂದ ಅಣ್ಣನೊಬ್ಬ ತನ್ನ ತಮ್ಮನ ಹೆಂಡತಿ ಭಾಗ್ಯಶ್ರಿಯನ್ನು ಕಬ್ಬಿಣದ ಪಿಕಾಸಿಯಿಂದ ಹೊಡೆದು ಕೊಂದು ಪರಾರಿಯಾಗಿದ್ದು, ಮೂರು ದಿನಗಳ ನಂತರ ಆರೋಪಿ ದೊಂಡು ವರಕ ಪತ್ನಿ ಮನೆಗೆ ಹೋಗಿ ಊಟ ಮಾಡುತ್ತಿದ್ದ ವೇಳೆ ಪೊಲೀಸರು ಬಂದು ಲಾಕ್ ಮಾಡಿದ್ದಾರೆ.

ಏನಿದು ತೆಂಗಿನಕಾಯಿ ಕೊಲೆ ಪ್ರಕರಣ?

ಹಿರಿಯರ ಕಾಲದ ದೇವರ ತೆಂಗಿನಕಾಯಿ ನನಗ್ಯಾಕೆ ಕೊಟ್ಟಿಲ್ಲ ಎಂದು ಅಣ್ಣನೊಬ್ಬ ತಮ್ಮನ ಪತ್ನಿಯನ್ನೆ ಕೊಲೆ ಮಾಡಿದ್ದಾನೆ.  ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಒಬ್ಬ ದೈವ ಭಕ್ತ. ಗೌಳಿ ಕೆಲಸ ಮಾಡುತ್ತಿದ್ದ. ಕೊಲೆ ಮಾಡಿರುವ ಈ ದೊಂಡು ವರಕ ಸೇರಿದಂತೆ ಒಟ್ಟು ಐವರು ಸಹೋದರರು. ಐವರು ಕೂಡ ತಂದೆಯ ಆಸ್ತಿಯನ್ನ ಭಾಗ ಮಾಡಿಕೊಂಡು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ದೊಂಡು ವರಕನ ಮಗನಿಗೆ ಕಳೆದ ಕೆಲವು ತಿಂಗಳಿನಿಂದ ಆರೋಗ್ಯ ಸಮಸ್ಯೆ ಇತ್ತು. ಹಿರಿಯರ ಕಾಲದಿಂದಲೂ ಪೂಜಿಸುತ್ತಿರುವ ತೆಂಗಿನಕಾಯಿ ಚಿಕ್ಕ ತಮ್ಮನ ಮನೆಯಲ್ಲಿ ಇರುವುದೇ ಇದಕ್ಕೆಲ್ಲಾ ಕಾರಣ ಎಂದು ಭಾವಿಸಿದ ಈತ ತೆಂಗಿನಕಾಯಿಯನ್ನು ತನಗೆ ಕೊಡುವಂತೆ ಕಳೆದ ಒಂದು ವರ್ಷದಿಂದ ಪಟ್ಟು ಹಿಡಿದಿದ್ದ. ಆ ತೆಂಗಿನ ಕಾಯಿ ಬಳಸಿ ತಮ್ಮನ ಹೆಂಡತಿ ಭಾಗ್ಯಶ್ರೀ ನಮ್ಮ ಮೇಲೆ ಮಾಟ ಮಂತ್ರ ಮಾಡಿಸುತ್ತಿದ್ದಾಳೆ ಎಂದು ಊರಿನವರೆಲ್ಲಿರಿಗೂ ಹೇಳುತ್ತಾ ತಿರುಗುತ್ತಿದ್ದ.  ಕಳೆದ ಆರು ತಿಂಗಳ ಹಿಂದೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಹಾಗೂ ದೇವರಿಗೆ ಪ್ರಸಾದ ಮಾಡಿದಾಗ ದೈವವಾಣಿಯೂ ಅವನ ಮೂಢನಂಬಿಕೆಗೆ ಸಾಥ್ ಕೊಟ್ಟಿತ್ತು. ಇದರಿಂದಾಗಿಯೇ ಸಿಟ್ಟಿಗೆದ್ದ ಈತ ಭಾಗ್ಯಶ್ರಿಯ ಹತ್ಯೆ ಮಾಡಿದ್ದಾನೆ.

 ಇದನ್ನೂ ಓದಿ  ಹೈದರಾಬಾದ್: ಕಿಸ್ಮತ್​ಪುರ ಸೇತುವೆ ಬಳಿ ಚೀಲದಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ತಪ್ಪಿಸಿಕೊಂಡು ಓಡಿ ಹೋದವ ಸಿಕ್ಕಿದ್ದು ಹೇಗೆ?

ಕಬ್ಬಿಣದ ವಸ್ತು ತೆಗದುಕೊಂಡು ಗದ್ದೆಗೆ ಹೊರಟಿದ್ದ ಈತ ತನ್ನ ತಮ್ಮನ ಹೆಂಡತಿಯಾದ ಕಬ್ಬಿಣದ ಪಿಕಾಸಿಯಿಂದ ಭಾಗ್ಯಶ್ರಿ ತಲೆಗೆ ಜೋರಾಗಿ ಹೊಡೆದಿದ್ದಾನೆ ಅವಳ ರಕ್ಷಣೆಗೆ ಬಂದ ಸ್ಥಳೀಯರನ್ನು ಆಕೆಯ ಬೆಂಬಲಿಗರೆಂದು ತಿಳಿದು ಅವರ ಮೇಲೆಯೂ ಹಲ್ಲೆಗೆ ಯತ್ನಸಿದ್ದಾನೆ, ಅಷ್ಟೆ ಅಲ್ಲ ಕೈಯಯಲ್ಲಿದ್ದ ಆಯುಧದಿಂದ ತನ್ನ ವೃದ್ಧ ತಾಯಿಯ ಕಾಲಿಗೆ ಬಲವಾಗಿ ಬಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ದೊಂಡು ವರಕ ಸೆಪ್ಟೆಂಬರ್ 11 ರಿಂದ ಕಾಡಿನಲ್ಲಿ ಅವಿತು ಕೊಂಡಿದ್ದ. ಅವನ  ಬಗ್ಗೆ ಪೊಲೀಸರು  ರಾಮನಗರದಿಂದ ಖಾನಾಪೂರದವರೆಗೆ ತೀವ್ರ ಶೋಧ ಕೈಗೊಂಡಿದ್ದರು. ಮೂರು ದಿನಗಳ ಬಳಿಕ ಪತ್ನಿಯ ಮನೆಗೆ ಹೊಗಿ ಊಟ ಮಾಡುತ್ತಿದ್ದ ವಿಷಯ ತಿಳಿದ ಪೊಲೀಸರು ಕೂಡಲೆ ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ