ಹೈದರಾಬಾದ್: ಕಿಸ್ಮತ್‌ಪುರ ಸೇತುವೆ ಬಳಿ ಚೀಲದಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯ ಕಿಸ್ಮತ್‌ಪುರ ಸೇತುವೆಯ ಕೆಳಗೆ ಮಹಿಳೆಯೊಬ್ಬ ನಗ್ನ ಶವ(Deadbody) ಪ್ಲಾಸ್ಟಿಕ್ ಚೀಲವೊಂದರಲ್ಲಿ ಪತ್ತೆಯಾಗಿದೆ. ಶವ ಪತ್ತೆಯಾಗುವ ಸುಮಾರು ಮೂರು ದಿನಗಳ ಮೊದಲು ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಭಯವನ್ನು ಹುಟ್ಟುಹಾಕಿದೆ. ಅಧಿಕಾರಿಗಳು ಮೃತ ಮಹಿಳೆಯ ವಯಸ್ಸು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಎಂದು ಅಂದಾಜಿಸಿದ್ದಾರೆ.

ಹೈದರಾಬಾದ್, ಸೆಪ್ಟೆಂಬರ್ 17: ಹೈದರಾಬಾದ್ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯ ಕಿಸ್ಮತ್‌ಪುರ ಸೇತುವೆಯ ಕೆಳಗೆ ಮಹಿಳೆಯೊಬ್ಬ ನಗ್ನ ಶವ(Deadbody) ಪ್ಲಾಸ್ಟಿಕ್ ಚೀಲವೊಂದರಲ್ಲಿ ಪತ್ತೆಯಾಗಿದೆ. ಶವ ಪತ್ತೆಯಾಗುವ ಸುಮಾರು ಮೂರು ದಿನಗಳ ಮೊದಲು ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಭಯವನ್ನು ಹುಟ್ಟುಹಾಕಿದೆ. ಅಧಿಕಾರಿಗಳು ಮೃತ ಮಹಿಳೆಯ ವಯಸ್ಸು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಎಂದು ಅಂದಾಜಿಸಿದ್ದಾರೆ.
ದೇಹದ ಮೇಲೆ ಬಟ್ಟೆ ಇಲ್ಲದ ಕಾರಣ, ಮಹಿಳೆಯನ್ನು ಕೊಲ್ಲುವ ಮೊದಲು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ರಾಜೇಂದ್ರನಗರ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ, ಪ್ರದೇಶವನ್ನು ಸುತ್ತುವರೆದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ವಿಶೇಷ ಸುಳಿವುಗಳ ತಂಡವು ಸಂಭಾವ್ಯ ಶಂಕಿತರನ್ನು ಗುರುತಿಸಲು ಹತ್ತಿರದ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಗಂಭೀರತೆಯನ್ನು ಒತ್ತಿ ಹೇಳಿದ್ದು, ಎಲ್ಲಾ ಸಂಭಾವ್ಯ ಕೋನಗಳನ್ನು ಕೂಲಂಕಷವಾಗಿ ತನಿಖೆ ಮಾಡಲು ಮೀಸಲಾದ ತಂಡವನ್ನು ರಚಿಸಿದ್ದಾರೆ. ತನಿಖೆಗೆ ಸಹಾಯವಾಗುವ ಯಾವುದೇ ಮಾಹಿತಿಯೊಂದಿಗೆ ಮುಂದೆ ಬರುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬಲಿಪಶುವಿನ ಗುರುತು ಇನ್ನೂ ದೃಢಪಟ್ಟಿಲ್ಲ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮತ್ತಷ್ಟು ಓದಿ: ವರದಕ್ಷಿಣೆಗಾಗಿ ಮಗಳ ಕೊಲೆ, ಆಕೆಯ ಶವ ನೋಡಿ ಪ್ರಾಣಬಿಟ್ಟ ತಾಯಿ
ಮತ್ತೊಂದು ಘಟನೆ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ ಮಾವಿನ ಹಣ್ಣೆಂದು ಬೈಕ್ ಮೇಲೆ ವ್ಯಕ್ತಿಯೊಬ್ಬ ಮಹಿಳೆಯ ಶವಸಾಗಿಸಿ ಸಿಕ್ಕಿ ಬಿದ್ದಿರುವ ಘಟನೆ ಲುಧಿಯಾನಾದಲ್ಲಿ ನಡೆದಿದೆ. ಪಂಜಾಬ್ನ ಲುಧಿಯಾನಾದಲ್ಲಿ ಇಬ್ಬರು ಬೈಕ್ನಲ್ಲಿ ತುಂಬಿದ ಪ್ಲಾಸ್ಟಿಕ್ ಚೀಲವನ್ನಿರಿಸಿಕೊಂಡು ಹೊರಟಿದ್ದರು. ಜನರಿಗೆ ಅನುಮಾನ ಬಂದು ಪ್ರಶ್ನಸಿದ್ದಕ್ಕೆ, ಏನಿಲ್ಲ ಮಾವಿನ ಹಣ್ಣುಗಳಿವೆ ಎಂದು ಹೇಳಿದ್ದಾರೆ.
ಬಳಿಕ ಅನುಮಾನ ಬಂದು ತೆರೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.ಆರೋಪಿಗಳು ಮೃತ ದೇಹವನ್ನು ಫ್ಲೈಓವರ್ ಕೆಳಗೆ ಎಸೆಯಲು ತಂದಿದ್ದರು. ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಫಿರೋಜ್ಪುರ ರೋಡ್ ಡಿವೈಡರ್ ಬಳಿ ಪೊಲಸರು ಹಿಡಿದಿದ್ದರು.ಮೊದಲ ಕೊಳೆತ ಮಾವಿನ ಹಣ್ಣುಗಳಿವೆ ಎಂದು ಆರೋಪಿಗಳು ಹೇಳಿದ್ದರು. ಪ್ಲಾಸ್ಟಿಕ್ ಚೀಲದೊಳಗೆ ಎರಡು ಕವರ್ಗಳನ್ನಿಟ್ಟುಶವವನ್ನು ತುಂಬಲಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ಆರೋಪಿಗನ್ನು ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




