AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯವರ ಸೇವಾ ಮನೋಭಾವ ಗೌರವಿಸಲು ‘ಸೇವಾ ಪರ್ವ’ ಆರಂಭಿಸಿದ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ಇಂದು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಗೌರವ ಸೂಚಿಸಲು ಬಿಜೆಪಿಯು 15 ದಿನಗಳ ‘ಸೇವಾ ಪರ್ವ 2025’ ಎನ್ನುವ ವಿಶಿಷ್ಟ ಅಭಿಯಾನವನ್ನು ಆರಂಬಿಸಿದೆ. ಈ ಕಾರ್ಯಕ್ರಮವು ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ಪ್ರಧಾನಿ ಮೋದಿಯವರ ಸೇವಾ ಮನೋಭಾವ ಹಾಗೂ ಅವರಿಗಿರುವ ಬದ್ಧತೆಯನ್ನು ಗೌರವಿಸಲಾಗುತ್ತದೆ. ಸೇವಾ ಪರ್ವ್ 2025 ಎಂಬುದು ಪ್ರಧಾನಿ ಮೋದಿಯವರ ಜನ್ಮದಿನದಂದು ನಾಗರಿಕರು ಸೇವಾ ಕಾರ್ಯಗಳಲ್ಲಿ ಕೈಜೋಡಿಸುವಂತೆ ಆಹ್ವಾನಿಸುವ ಒಂದು ಉಪಕ್ರಮವಾಗಿದೆ.

ಪ್ರಧಾನಿ ಮೋದಿಯವರ ಸೇವಾ ಮನೋಭಾವ ಗೌರವಿಸಲು ‘ಸೇವಾ ಪರ್ವ’ ಆರಂಭಿಸಿದ  ಬಿಜೆಪಿ
ನರೇಂದ್ರ ಮೋದಿ Image Credit source: DD News
ನಯನಾ ರಾಜೀವ್
|

Updated on:Sep 17, 2025 | 10:48 AM

Share

ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಗೌರವ ಸೂಚಿಸಲು ಬಿಜೆಪಿಯು 15 ದಿನಗಳ ‘ಸೇವಾ ಪರ್ವ 2025’ ಎನ್ನುವ ವಿಶಿಷ್ಟ ಅಭಿಯಾನವನ್ನು ಆರಂಬಿಸಿದೆ. ಈ ಕಾರ್ಯಕ್ರಮವು ಅಕ್ಟೋಬರ್ 2 ರವರೆಗೆ ನಡೆಯಲಿದ್ದು, ಪ್ರಧಾನಿ ಮೋದಿಯವರ ಸೇವಾ ಮನೋಭಾವ ಹಾಗೂ ಅವರಿಗಿರುವ ಬದ್ಧತೆಯನ್ನು ಗೌರವಿಸಲಾಗುತ್ತದೆ.

ಸೇವಾ ಪರ್ವ್ 2025 ಎಂಬುದು ಪ್ರಧಾನಿ ಮೋದಿಯವರ ಜನ್ಮದಿನದಂದು ನಾಗರಿಕರು ಸೇವಾ ಕಾರ್ಯಗಳಲ್ಲಿ ಕೈಜೋಡಿಸುವಂತೆ ಆಹ್ವಾನಿಸುವ ಒಂದು ಉಪಕ್ರಮವಾಗಿದೆ. ಇದು ಪ್ರಧಾನಿಯ ಮಾರ್ಗದರ್ಶಿ ಮಂತ್ರವಾದ ಸೇವೆಯೇ ಸಂಕಲ್ಪ, ರಾಷ್ಟ್ರವೇ ಮೊದಲು ಇದರಿಂದ ಪ್ರೇರಿತವಾಗಿ ನಮೋ ಅಪ್ಲಿಕೇಶನ್‌ನಲ್ಲಿ ಸಂವಾದಾತ್ಮಕ ಅನುಭವಗಳನ್ನು ಜೀವಂತಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಈ ಉಪಕ್ರಮದಲ್ಲಿ ಭಾಗವಹಿಸುವವರು ಸೇವಾ ಮನೋಭಾವ ಅರಿಯುವುದು, ಪ್ರಧಾನಿಯವರ ಸ್ಪೂರ್ತಿದಾಯಕ ಪ್ರಯಾಣವನ್ನು  ತಿಳಿದುಕೊಳ್ಳಬಹುದು,  ಹಾಗೆಯೇ ಪ್ರಧಾನಿ ಮೋದಿಗೆ ಶುಭಾಶಯ ಕೂಡ ತಿಳಿಸಬಹುದಾಗಿದೆ.

ಮತ್ತಷ್ಟು ಓದಿ: : PM Modi at 75: ಭಿನ್ನಾಭಿಪ್ರಾಯಗಳ ಬದಿಗಿಟ್ಟು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಟ್ರಂಪ್

ನಮೋ  ಆ್ಯಪ್​ನಲ್ಲಿ ಯಾವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ?

ಸಬ್ಕಾ ಸಾಥ್, ಸಬ್ಕಿ ಸೇವಾ: ಇದರ ಅಡಿಯಲ್ಲಿ, ನಾಗರಿಕರು ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮದಡಿಯಲ್ಲಿ ಮರ ನೆಡುವುದು, ರಕ್ತದಾನ ಮಾಡುವುದು ಅಥವಾ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸುವಂತಹ 15 ಪೂರ್ವನಿರ್ಧರಿತ ಚಟುವಟಿಕೆಗಳಿಂದ ರಾಷ್ಟ್ರವ್ಯಾಪಿ ಸೇವಾ ಆಂದೋಲನಕ್ಕೆ ಕೊಡುಗೆ ನೀಡಲು ಪ್ರೇರೇಪಿಸಲ್ಪಡುತ್ತಾರೆ.

ಪ್ರತಿಯೊಂದು ಸೇವಾ ಕಾರ್ಯವನ್ನು ನಮೋ ಆಪ್‌ನಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಬಹುದು. ಅತ್ಯಂತ ಸಕ್ರಿಯ ಬಳಕೆದಾರರನ್ನು ಸೇವಾ ಲೀಡರ್‌ಬೋರ್ಡ್‌ನಲ್ಲಿ ಗುರುತಿಸಲಾಗುತ್ತದೆ ಮತ್ತು ವೈಯಕ್ತಿಕಗೊಳಿಸಿದ ಮಾನ್ಯತೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ವರ್ಚ್ಯುವಲ್ ಎಕ್ಸಿಬಿಷನ್: ನರೇಂದ್ರ ಮೋದಿ ಜೀವನದ ಕುರಿತು ಅರ್ಥ ಮಾಡಿಕೊಳ್ಳಬಹುದು, ಅದರಲ್ಲಿ ಮೋದಿ ಮೈಲ್​ಸ್ಟೋನ್ ಫೋಟೊಬೂತ್, ಜರ್ನಿ ಆಫ್ ನರೇಂದ್ರ ಮೋದಿ ಎನ್ನುವ ಲಿಂಕ್ ನಿಮಗೆ ಸಿಗಲಿದ್ದು ಅದರಲ್ಲಿ ಪ್ರಧಾನಿ ಮೋದಿ ಬಾಲ್ಯದಿಂದ ಹಿಡಿದು ಇಲ್ಲಿಯವರೆಗೂ ಮೋದಿಯ ಬಗ್ಗೆ ಸಂಪೂರ್ಣ ತಿಳಿಯಲು ಸಹಕಾರಿಯಾಗುತ್ತದೆ.

ಎಐ ಶುಭ್​ಕಾಮನಾ ರೀಲ್: ಅದರಲ್ಲಿ ಎಐ ಮೂಲಕ ಜನರು ತಮಗಿಷ್ಟವಾದ ರೀತಿಯಲ್ಲಿ ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಸಂದೇಶ ಕಳುಹಿಸಬಹುದು. ಡಿಸ್ಕವರ್ ಯುವರ್ ಮೋದಿ ಟ್ರೈಟ್: ಪ್ರಧಾನಿ ಮೋದಿಯವರ ವ್ಯಕ್ತಿತ್ವದ ಬಗ್ಗೆ ಜನರು ತಮ್ಮ ಅಭಿಪ್ರಾಯ ತಿಳಿಸಬಹುದು. ನೋ ಯುವರ್ ನಮೋ ಕ್ವಿಜ್: ಇದರಲ್ಲಿ ಪ್ರಧಾನಿ ಮೋದಿಗೆ ಸಂಬಂಧಿಸಿದ 10 ಪ್ರಶ್ನೆಗಳಿರುತ್ತವೆ. ಅದಕ್ಕೆ ಉತ್ತರಿಸಬೇಕಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:46 am, Wed, 17 September 25

ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ