ಮನುಷ್ಯನಿಗೆ ಒಂದು ಬಾರಿಗಿಂತ ಹೆಚ್ಚು ಬಾರಿ ಕಚ್ಚಿದ್ರೆ ಆ ನಾಯಿಗೆ ಜೀವಾವಧಿ ಶಿಕ್ಷೆ
ಒಂದಕ್ಕಿಂತ ಹೆಚ್ಚು ಬಾರಿ ಮನುಷ್ಯನನ್ನು ಕಚ್ಚಿದ ನಾಯಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಯಾವುದೇ ಪ್ರಚೋದನೆಯಿಲ್ಲದೆ ಒಮ್ಮೆ ಮನುಷ್ಯನನ್ನು ಕಚ್ಚಿದ ನಾಯಿಗಳನ್ನು 10 ದಿನಗಳವರೆಗೆ ಪ್ರಾಣಿ ಕೇಂದ್ರದಲ್ಲಿ ಇಡಲಾಗುವುದು ಮತ್ತು ಅದೇ ಕೃತ್ಯವನ್ನು ಪುನರಾವರ್ತಿಸಿದರೆ ಆ ನಾಯಿಗಳು ಬದುಕಿರುವವರೆಗೂ ಅಲ್ಲಿಯೇ ಇರಿಸಲಾಗುವುದು ಎಂದು ಇದೇ ಜೀವಾವಧಿ ಶಿಕ್ಷೆ ಎಂದು ಹೇಳಲಾಗಿದೆ.

ಲಕ್ನೋ, ಸೆಪ್ಟೆಂಬರ್ 17: ಯಾವುದೇ ಪ್ರಚೋದನೆಯಿಲ್ಲದೆ ಮನುಷ್ಯನನ್ನು ನಾಯಿ ಒಂದು ಬಾರಿಗಿಂತ ಹೆಚ್ಚು ಬಾರಿ ಕಚ್ಚಿದರೆ ಅಂತಹ ನಾಯಿ(Dog)ಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಉತ್ತರ ಪ್ರದೇಶ ಆದೇಶಿಸಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ದೆಹಲಿಯಲ್ಲಿ ಬೀದಿನಾಯಿಗಳು ಹೊರವಲಯಗಳಲ್ಲಿ ಆಶ್ರಯ ಕೇಂದ್ರವನ್ನು ತೆರೆಯುವವರೆಗೂ ಮಾತುಕತೆಗಳು ನಡೆದಿದ್ದವು. ಆದರೆ ಬಳಿಕ ನಾಯಿಗಳು ರೇಬಿಸ್ ಚುಚ್ಚು ಮದ್ದು ಹಾಗೂ ಸಂತಾನ ಹರಣ ಚಿಕಿತ್ಸೆ ನೀಡಿ ಹೊರಗೆ ಬಿಡಬಹುದು. ರೇಬಿಸ್ ರೋಗ ಬಂದಿರುವ ನಾಯಿಗಳನ್ನು ಮಾತ್ರ ಕೇಂದ್ರದಲ್ಲಿರಿಸುವಂತೆ ಸೂಚಿಸಲಾಗಿತ್ತು.
ಯಾವುದೇ ಪ್ರಚೋದನೆಯಿಲ್ಲದೆ ಒಮ್ಮೆ ಮನುಷ್ಯನನ್ನು ಕಚ್ಚಿದ ನಾಯಿಗಳನ್ನು 10 ದಿನಗಳವರೆಗೆ ಪ್ರಾಣಿ ಕೇಂದ್ರದಲ್ಲಿ ಇಡಲಾಗುವುದು ಮತ್ತು ಅದೇ ಕೃತ್ಯವನ್ನು ಪುನರಾವರ್ತಿಸಿದರೆ ಆ ನಾಯಿಗಳು ಬದುಕಿರುವವರೆಗೂ ಅಲ್ಲಿಯೇ ಇರಿಸಲಾಗುವುದು ಎಂದು ಇದೇ ಜೀವಾವಧಿ ಶಿಕ್ಷೆ ಎಂದು ಹೇಳಲಾಗಿದೆ.
ಯಾರಾದರೂ ಅವುಗಳನ್ನು ದತ್ತು ತೆಗೆದುಕೊಳ್ಳುವುದಾದರೆ ಅವುಗಳನ್ನು ಮತ್ತೆ ಬೀದಿಗೆ ಬಿಡುವಂತಿಲ್ಲ. ಆಕ್ರಮಣಕಾರಿ ನಾಯಿಗಳ ನಿರ್ವಹಣೆಗಾಗಿ ಸೆಪ್ಟೆಂಬರ್ 10 ರಂದು ಎಲ್ಲಾ ಗ್ರಾಮೀಣ ಮತ್ತು ನಗರ ನಾಗರಿಕ ಸಂಸ್ಥೆಗಳಿಗೆ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಹೊರಡಿಸಿದ ಆದೇಶದಲ್ಲಿ, ಬೀದಿ ನಾಯಿ ಕಚ್ಚಿದ ನಂತರ ಯಾವುದೇ ವ್ಯಕ್ತಿ ರೇಬೀಸ್ ವಿರೋಧಿ ಲಸಿಕೆಯನ್ನು ತೆಗೆದುಕೊಂಡರೆ, ಆ ಘಟನೆಯನ್ನು ತನಿಖೆ ಮಾಡಲಾಗುತ್ತದೆ.
ಮತ್ತಷ್ಟು ಓದಿ: ನಾಯಿ ಕಡಿತ: ರೇಬಿಸ್ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು
ಕೇಂದ್ರಕ್ಕೆ ಸೇರಿಸಿದ ಬಳಿಕ, ಅದಕ್ಕೆ ಸಂತಾನ ಹರಣ ಚಿಕಿತ್ಸೆ ಮಾಡಿಲ್ಲದಿದ್ದರೆ ಮೊದಲು ಅದನ್ನು ಮಾಡಿ, ರೇಬಿಸ್ ಲಸಿಕೆ ನೀಡಲಾಗುತ್ತದೆ. 10 ದಿನಗಳ ಕಾಲ ವೀಕ್ಷಣೆಯಲ್ಲಿ ಇಡಲಾಗುತ್ತದೆ. ಬಿಡುವ ಮೊದಲು, ನಾಯಿಯನ್ನು ಮೈಕ್ರೋಚಿಪ್ ಅಳವಡಿಸಲಾಗುತ್ತದೆ.ಇದು ಅದರ ಎಲ್ಲಾ ವಿವರಗಳನ್ನು ಹೊಂದಿರುತ್ತದೆ. ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.
ನಿಜವಾಗಿಯೂ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಅದು ಕಚ್ಚಿದೆ ಎಂದು ನಿರ್ಧರಿಸುವುದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ಮೂರು ಜನರ ಸಮಿತಿಯನ್ನು ರಚಿಸಲಾಗುತ್ತದೆ, ಇದರಲ್ಲಿ ಆ ಪ್ರದೇಶದ ಪಶುವೈದ್ಯರು, ಪ್ರಾಣಿಗಳ ಬಗ್ಗೆ ಅನುಭವ ಹೊಂದಿರುವ ಮತ್ತು ಅವುಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವವರು ಇರುತ್ತಾರೆ. ಅವರು ಅದನ್ನು ಪರಿಶೀಲಿಸುತ್ತಾರೆ. ಯಾರಾದರೂ ಕಲ್ಲು ಎಸೆದ ನಂತರ ಪ್ರಾಣಿ ಕಚ್ಚಿದರೆ, ಅದನ್ನು ಅಪ್ರಚೋದಿತ ದಾಳಿ ಎಂದು ಪರಿಗಣಿಸಲಾಗುವುದಿಲ್ಲ.
ಅಂತಹ ನಾಯಿಗಳನ್ನು ದತ್ತು ಪಡೆಯಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ, ಆದರೆ ಹಾಗೆ ಮಾಡುವ ವ್ಯಕ್ತಿಯ ಹೆಸರು, ವಿಳಾಸ ಇತ್ಯಾದಿಗಳ ಎಲ್ಲಾ ವಿವರಗಳನ್ನು ಒದಗಿಸಬೇಕು ಮತ್ತು ನಾಯಿಯನ್ನು ಬೀದಿಗಳಲ್ಲಿ ಬಿಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಬೇಕು.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಎಂಟು ವಾರಗಳ ಒಳಗೆ ಬಂಧಿಸಿ ಆಶ್ರಯ ಮನೆಗಳಲ್ಲಿ ಇಡಬೇಕೆಂದು ಸುಪ್ರೀಂ ಕೋರ್ಟ್ ಪೀಠ ಆದೇಶಿಸಿದ ಒಂದು ತಿಂಗಳ ನಂತರ ಉತ್ತರ ಪ್ರದೇಶದ ನಿರ್ದೇಶನ ಬಂದಿದೆ.
ಭಾರಿ ಆಕ್ರೋಶದ ನಂತರ, ದೊಡ್ಡ ಪೀಠವು ಆದೇಶವನ್ನು ಮಾರ್ಪಡಿಸಿ, ರೇಬೀಸ್‌ನಿಂದ ಬಳಲುತ್ತಿರುವ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ನಾಯಿಗಳನ್ನು ಹೊರತುಪಡಿಸಿ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ, ಲಸಿಕೆ ಮತ್ತು ಅವುಗಳ ಮೂಲ ಸ್ಥಳಗಳಲ್ಲಿ ಬಿಡಬೇಕು ಎಂದು ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




