ಜೋಯಿಡಾ(ಉತ್ತರ ಕನ್ನಡ ): ಸ್ವಾರ್ಥಿ ಮನುಷ್ಯ ನೀಚ ಕ್ರಿಮಿ ವಿಷ ಜಂತು ಅನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಲೇ ಇದ್ದಾನೆ. ಮನುಷ್ಯನೊಳಗಿನ ರಾಕ್ಷಸ ಪ್ರವೃತ್ತಿ ವಿಜೃಂಭಿಸಿದಾಗ ಈ ರೀತಿಯ ಪರಮ ನೀಚ ಕೃತ್ಯಗಳು ಜರುಗುತ್ತವೆ. ಹೌದು.. ಕಾಡುಪ್ರಾಣಿಗಳ ಕಾಟ ತಪ್ಪಿಸಲು ತೋಟದಲ್ಲಿ ವಿಷ ಬೆರೆಸಿಸಿಟ್ಟಿದ್ದ ಅಕ್ಕಿಯನ್ನು ತಿಂದು ಐದು ಜಾನುವಾರುಗಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಾಗೋಡಾದಲ್ಲಿ ನಡೆದಿದೆ.
ಕಾಡುಪ್ರಾಣಿಗಳ ಕಾಟ ತಪ್ಪಿಸಲು ತೋಟದಲ್ಲಿ ವಿಷ ಬೇರಸಿದ ಅಕ್ಕಿ ಇಡಲಾಗಿದೆ. ಆದ್ರೆ, ಮಮತಾ ಮಹಾಬಲೇಶ್ವರ ಗಾಳಕರ ಎಂಬುವವರಿಗೆ ಸೇರಿದ ಜಾನುವಾರುಗಳು ಬಂದು ವಿಷ ಮಿಶ್ರಿತ ಅಕ್ಕಿಯನ್ನು ತಿಂದಿದ್ದಾವೆ. ಪರಿಣಾಮ ಐದು ಜಾನುವಾರುಗಳು ಮೃತಪಟ್ಟಿದ್ದು,, ಏಳು ಗೋವುಗಳು ಅಸ್ವಸ್ಥಗೊಂಡಿವೆ. ಅನಂತ ನರಸಿಂಹ ಭಾಗ್ವತ್ ಎಂಬುವವರ ತೋಟದಲ್ಲಿ ನಡೆದ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿವೆ. ಜೀವನಕ್ಕೆ ಆಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡು ಮಾಲೀಕರು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತೋಟದ ಮಾಲೀಕರನ್ನು ವಿಚಾರಣೆ ನಡೆಸಿದ್ದಾರೆ. ಕಾಡುಪ್ರಾಣಿಗಳ ಕಾಟಕ್ಕೆ ಈ ರೀತಿ ವಿಷ ಇಡುವುದು ಮಹಾ ಅಪರಾಧ.
ಚಕ್ಕಡಿಗೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ: ಎತ್ತು ಸ್ಥಳದಲ್ಲೇ ಸಾವು
ಧಾರವಾಡ: ನಗರದ ಹೊರವಲಯದಲ್ಲಿರುವ ಯರಿಕೊಪ್ಪ ಗ್ರಾಮದ ಬಳಿ ಸಾರಿಗೆ ಸಂಸ್ಥೆ ಬಸ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದು ಎತ್ತು ಸ್ಥಳದಲ್ಲೇ ಸಾವು, ಮತ್ತೊಂದು ಎತ್ತಿಗೆ ಗಂಭೀರ ಗಾಯಗಳಾಗಿವೆ.
ಇನ್ನು ಚಕ್ಕಡಿಯಲ್ಲಿದ್ದ ಈರಪ್ಪ ಜಮ್ಮಿಹಾಳ, ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Published On - 10:38 pm, Thu, 27 October 22