ಕಾರವಾರ: ಮಾಜಾಳಿ ಪಂಚಾಯತಿ ಪಿಡಿಓ ಬದಲಾವಣೆ ವಿರೋಧಿಸಿ ಮನವಿ ಸಲ್ಲಿಸಲು ಬಂದಾಗ ದರ್ಪ ತೋರಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ್ (Roopali Naik) ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ (Satish Sail) ಆರೋಪ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಘಟನೆ ನಡೆದಿದೆ. ರೂಪಾಲಿ ನಾಯ್ಕ್ ಮತ್ತು ಸತೀಶ್ ಸೈಲ್ ನಡುವೆ ಕೆಲ ಕಾಲ ಮಾತಿನ ಚಕಮಕಿ ಉಂಟಾಗಿದೆ. ಬಳಿಕ ಸತೀಶ್ ಸೈಲ್‌ಗೆ ಕುಡುಕ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಮಾತಿಗೆ ಮಾತು ಬೆಳೆದು ಮೇಜಿನ ಮೇಲಿದ್ದ ಪೇಪರ್ ವೇಟೇಜ್ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸದ್ಯ ಶಾಸಕಿ ದರ್ಪವನ್ನ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.
ಪಿಡಿಓ ಬದಲಾವಣೆ ವಿಚಾರವಾಗಿ ಸತೀಶ್ ಸೈಲ್ ಸಿಇಒ ಭೇಟಿಗೆ ಮುಂದಾಗಿದ್ದಾರೆ. ಈ ವೇಳೆ ರೂಪಾಲಿ ನಾಯ್ಕ್ ತಮ್ಮ ಬೆಂಬಲಿಗರೊಂದಿಗೆ ಸಿಇಒ ಕಚೇರಿಗೆ ಬಂದು ಸಿಇಒವನ್ನು ಬೇರೆ ಚರ್ಚೆಗೆ ಕರೆದುಕೊಂಡು ಹೋಗಿದ್ದಾರೆ. ಕಳೆದ ಆರೇಳು ತಿಂಗಳಲ್ಲಿ ಗ್ರಾಮದಲ್ಲಿ ಮೂವರು ಪಿಡಿಒಗಳು ಬದಲಾಗಿದ್ದಾರೆ. ಹಾಗಾಗಿ ಅಭಿವೃದ್ಧಿ ಚಟುವಟಿಕೆಯಲ್ಲಿ ಹಿನ್ನೆಡೆ ಉಂಟಾಗಿದೆ. ಈ ವಿಚಾರವನ್ನು ಬಗೆ ಹರಿಸಲು ಸಿಇಒ ಬಳಿ ಚರ್ಚಿಸಲು ಸತೀಶ್ ಸೈಲ್ ಹೋಗಿದ್ದಾಗ ಶಾಸಕಿ ರೂಪಾ ನಾಯ್ಕ್ ಇಬ್ಬರ ನಡುವೆ ಪರಸ್ಪರ ವಾಗ್ವಾದ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಅಭಿವೃದ್ಧಿ ವಿಚಾರದಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ತಾರತಮ್ಯವಾಗುತ್ತಿದೆ. ಸಿಎಂ ಅವರೇ ಖುದ್ದು ಅನುದಾನ ನೀಡುವುದಾಗಿ ಸಹಿ ಹಾಕಿದ್ದರು. ಆದ್ರೆ ತಾಲೂಕಿಗೆ ಬಂದಿದ್ದ ಅನುದಾನವನ್ನ ಎಂಟಿಬಿ ನಾಗರಾಜ್ ತಡೆ ಹಿಡಿದಿದ್ದಾರೆ ಎಂದು ಬೆಂಗಳೂರು ಗ್ರಾ. ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು. ಅನುದಾನಕ್ಕೆ ತಡೆ ನೀಡಿದ ಆರೋಪ ಹಿನ್ನೆಲೆ ವಿಧಾನಸೌಧದ ಆವರಣದಲ್ಲಿ ಅಹೋರಾತ್ರಿ ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಅಭಿವೃದ್ಧಿ ಮಾಡಿದರೆ ಸಮಸ್ಯೆ ಆಗುತ್ತದೆಂದು ತಡೆ ಹಿಡಿದಿದ್ದಾರೆ.
ಇದನ್ನೂ ಓದಿ: ಪರಮೇಶ್ವರ್ ಸೋಲಿಸಿಲ್ಲ ಎಂದು ಸಿದ್ದರಾಮಯ್ಯ ಆಣೆ ಮಾಡಲಿ: ಕೆ ಎಸ್ ಈಶ್ವರಪ್ಪ ಸವಾಲು
10 ಕೋಟಿ ರೂಪಾಯಿ ಅನುದಾನದಲ್ಲಿ ಭಾರಿ ಅಭಿವೃದ್ಧಿ ಆಗುವುದಿಲ್ಲ. ನಾವು, ಸಚಿವ ಎಂಟಿಬಿ ಇಬ್ಬರೂ ಸೇರಿ ಕ್ಷೇತ್ರ ಅಭಿವೃದ್ಧಿ ಮಾಡೋಣ. ಯಾರಿಗೆ ಮತಹಾಕಬೇಕೆಂದು ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಹೊಸಕೋಟೆ ಜನರು ಸ್ವತಂತ್ರ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಇದೇ ಕಾರಣಕ್ಕೆ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Fri, 3 March 23