ಉತ್ತರ ಕನ್ನಡ: ಮಳೆ ಅಬ್ಬರಕ್ಕೆ ಗುಡ್ಡ ಕುಸಿತ; ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್​​​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 04, 2024 | 2:56 PM

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಇದೀಗ ಹೊನ್ನಾವರ ತಾಲೂಕಿನ ವರ್ನಕೇರಿ ಗ್ರಾಮದ ಬಳಿ ಏಕಾಎಕಿ ಗುಡ್ಡ ಕುಸಿದು ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್(Bangalore-Honnavar National Highway Bandh)​​​ ಆಗಿದೆ. ದಿಢೀರ್​ ಗುಡ್ಡ ಕುಸಿತದಿಂದ ವಾಹನ ಸವಾರರು ಕಂಗಾಲಾದ್ದಾರೆ.

ಉತ್ತರ ಕನ್ನಡ: ಮಳೆ ಅಬ್ಬರಕ್ಕೆ ಗುಡ್ಡ ಕುಸಿತ; ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್​​​
ಗುಡ್ಡ ಕುಸಿತ, ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್
Follow us on

ಉತ್ತರ ಕನ್ನಡ, ಜು.04: ಜಿಲ್ಲೆಯಲ್ಲಿ ವರುಣಾರ್ಭಟ ಹೆಚ್ಚಾಗಿದ್ದು, ಭಾರಿ ಮಳೆಗೆ ಹೊನ್ನಾವರ ತಾಲೂಕಿನ ವರ್ನಕೇರಿ ಗ್ರಾಮದ ಬಳಿ ಗುಡ್ಡ ಕುಸಿತವಾಗಿದೆ. ಏಕಾಏಕಿ ಗುಡ್ಡ ಕುಸಿತ(Hill collapse)ದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್(Bangalore-Honnavar National Highway Bandh)​​​ ಆಗಿದೆ. ಇನ್ನು ದಿಢೀರ್​ ಗುಡ್ಡ ಕುಸಿತಗೊಂಡ ಹಿನ್ನೆಲೆ ವಾಹನ ಸವಾರರು ಆತಂಕಗೊಂಡಿದ್ದಾರೆ. ಈ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಂಕೋಲ ತಾಲೂಕಿನಲ್ಲಿ ಮಳೆಯ ಆರ್ಭಟ; 35ಕ್ಕೂ ಹೆಚ್ಚು ಮನೆಗಳು ಜಲಾವೃತ

ಇನ್ನುಅಂಕೋಲ ತಾಲೂಕಿನಲ್ಲಿ ಮಳೆಯ ಆರ್ಭಟಕ್ಕೆ ಬಿಳೆಹೊಂಗಿ, ಮಂಜುಗುಣಿ, ಪಣಸಗೊಳಿ, ಹೊನ್ನೆಬೈಲು ಸೇರಿ 5ಕ್ಕೂ ಹೆಚ್ಚು ಗ್ರಾಮಕ್ಕೆ ನೀರು ನುಗ್ಗಿ, ರಸ್ತೆ ಮುಳುಗಡೆಯಾಗಿದೆ. ಅದರಲ್ಲೂ ಹೊನ್ನೆಬೈಲು ಗ್ರಾಮದಲ್ಲಿ 35ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಈ ಹಿನ್ನಲೆ ಬಿಳೆಹೊಂಗಿ, ಹೊನ್ನೆಬೈಲು, ಶಿಂಗನಮಕ್ಕಿ, ಮಂಜುಗುಣಿಯ ಸರ್ಕಾರಿ ಶಾಲೆಗಳಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದೆ.

ಇದನ್ನೂ ಓದಿ:ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಶಾಲೆ ಹಿಂಬದಿ ಗುಡ್ಡ ಕುಸಿತ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ಅನಾಹುತ

ಕಾಳಜಿ ಕೇಂದ್ರಕ್ಕೆ ತೆರಳಲು ಐದು ಗ್ರಾಮಗಳ ನಿವಾಸಿಗಳು ಹಿಂದೇಟು

ಆದರೆ, ಕಾಳಜಿ ಕೇಂದ್ರಕ್ಕೆ ತೆರಳಲು ಐದು ಗ್ರಾಮಗಳ ನಿವಾಸಿಗಳು ಹಿಂದೇಟು ಹಾಕುತ್ತಿದ್ದು, ‘ನಿನ್ನೆ ಅಥವಾ ಮೊನ್ನೆ ಹೇಳಿದ್ರೆ ಸ್ವಲ್ಪ ವಸ್ತುಗಳ ಜೊತೆ ಶಿಫ್ಟ್‌ ಆಗಬಹುದಿತ್ತು. ಈಗ ಹೇಳಿದ್ರೆ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಹೇಗೆ? ಎನ್ನುತ್ತಿದ್ದಾರೆ. ಈ ಹಿನ್ನಲೆ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಅಧಿಕಾರಿಗಳು ಜನರ ಮನವೊಲಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅಂಕೋಲಾ ತಹಶೀಲ್ದಾರ್ ಅನಂತ ಶಂಕರ, ‘ ತಾಲೂಕಿನ ಐದಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಈಗಾಗಲೇ ಜನರನ್ನ ಕಾಳಜಿ ಕೇಂದ್ರಕ್ಕೆ ಕಳಿಸುತ್ತಿದ್ದೆವೆ. ಕೆಲವರು ಕಾಳಜಿ ಕೇಂದ್ರಕ್ಕೆ ಹೊಗಲು ಹಿಂದೇಟು ಹಾಕುತ್ತಿದ್ದಾರೆ. ಜನರನ್ನು ಮನವೊಲಿಸಿ ಕರೆದುಕೊಂಡು ಹೊಗಲು ಬಂದಿದ್ದೆವೆ ಎಂದರು.

ನೀರಿನ ಪ್ರಮಾಣ ಇಳಿಕೆಯಿಂದ ಶಿರಸಿ -ಕುಮಟಾ ಹೆದ್ದಾರಿ ವಾಹನ ಸಂಚಾರ ಸುಗಮ

ಇನ್ನು ಕುಮಟಾ – ಶಿರಸಿ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಕುಮಟಾ ತಾಲೂಕಿನ ಕತಗಾಲ್ ಗ್ರಾಮದ ಬಳಿಯ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಬಸ್​ನ್ನು ಸ್ಥಳೀಯರು ಸೇರಿಕೊಂಡು ತೆರವು ಮಾಡಿದ್ದಾರೆ. ಚಂಡಿಕಾ ಹೊಳೆ ನೀರು ಹರಿದು ಬಸ್​ ಸಿಲುಕಿಕೊಂಡಿತ್ತು. ಇದೀಗ ನೀರಿನ ಪ್ರಮಾಣ ಇಳಿಕೆಯಿಂದ ಶಿರಸಿ -ಕುಮಟಾ ಹೆದ್ದಾರಿ ವಾಹನ ಸಂಚಾರ ಸುಗಮವಾಗಿದೆ. ಆದರೆ, ಹೆಚ್ಚಿನ ಮಳೆಯಾದರೇ ಮತ್ತೆ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ