ಕಾರವಾರ ನೌಕಾ ನೆಲೆಯಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್: ಏನೆಲ್ಲಾ ಇವೆ ನೋಡಿ

|

Updated on: Mar 05, 2024 | 10:46 AM

Indian Navy Karawara Base:ಭಾರತೀಯ ನೌಕಾಪಡೆಯ ಕಾರವಾರದ ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಅನೇಕ ಮೂಲ ಸೌಕರ್ಯ ಯೋಜನೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕರಾವಳಿಯಲ್ಲಿರುವ ಈ ನೌಕಾನೆಲೆಯಲ್ಲಿ ನೌಕಾಪಡೆ ಹಮ್ಮಿಕೊಂಡಿರುವ ಯೋಜನೆಗಳು ಹಲವು ವಿಶೇಷಗಳನ್ನೊಳಗೊಂಡಿವೆ. ಆ ಕುರಿತ ವಿವರ ಇಲ್ಲಿದೆ.

ಕಾರವಾರ ನೌಕಾ ನೆಲೆಯಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್: ಏನೆಲ್ಲಾ ಇವೆ ನೋಡಿ
ರಾಜನಾಥ್ ಸಿಂಗ್
Follow us on

ಕಾರವಾರ, ಮಾರ್ಚ್​​ 5: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ (Karawara) ಭಾರತೀಯ ನೌಕಾಪಡೆಯ (Indian Navy) ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಇಂದು ಉದ್ಘಾಟಿಸಲಿದ್ದಾರೆ. ‘ಪ್ರಾಜೆಕ್ಟ್ ಸೀಬರ್ಡ್’ನ ಹಂತ-IIಎ ಭಾಗವಾಗಿ ಉದ್ಘಾಟನೆಗೊಳ್ಳುತ್ತಿರುವ ಮೂಲಸೌಕರ್ಯ ಯೋಜನೆ, ಸೌಲಭ್ಯಗಳಲ್ಲಿ ಎರಡು ಪ್ರಮುಖ ಸೇತುವೆಗಳು ಮತ್ತು ಏಳು ವಸತಿ ಕಟ್ಟಡಗಳು ಇರಲಿದ್ದು, ನೌಕಾ ಅಧಿಕಾರಿಗಳು ಮತ್ತು ರಕ್ಷಣಾ ನಾಗರಿಕ ಸಿಬ್ಬಂದಿಗೆ 320 ಮನೆಗಳು ಮತ್ತು 149 ಏಕ ಅಧಿಕಾರಿಗಳ ವಸತಿ ಸೌಕರ್ಯಗಳನ್ನು ಒಳಗೊಂಡಿದೆ ಎಂದು ‘ಐಎಎನ್​​ಎಸ್​’ ವರದಿ ಮಾಡಿದೆ.

10 ಹಡಗುಗಳಿಗಾಗಿ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ಸೀಬರ್ಡ್‌ನ ಹಂತ-I ಕಾಮಗಾರಿ 2011 ರಲ್ಲಿ ಯಶಸ್ವಿಯಾಗಿ ಮುಕ್ತಾಯವಾಗಿತ್ತು. ಈ ಮೂಲಸೌಕರ್ಯವು ಬ್ರೇಕ್‌ವಾಟರ್ ಅನ್ನು ಒಳಗೊಂಡಿದ್ದು, 10 ಹಡಗುಗಳನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲದೆ 10,000 ಟನ್ ಹಡಗು ಎತ್ತಬಲ್ಲ, ನೌಕಾಪಡೆ ಹಡಗು ದುರಸ್ತಿ ಲಾಜಿಸ್ಟಿಕ್ಸ್ ಮತ್ತು ಶಸ್ತ್ರಾಸ್ತ್ರ ಸಂಗ್ರಹ ಸೌಲಭ್ಯಗಳನ್ನು ಒಳಗೊಂಡಿದೆ. 1000 ಸಿಬ್ಬಂದಿಗೆ ವಸತಿ, 141 ಹಾಸಿಗೆಗಳ ನೌಕಾ ಆಸ್ಪತ್ರೆ ಒಳಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯೋಜನೆಯ ಹಂತ-IIಎ ಗಾಗಿ ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿಯು 23 ಯಾರ್ಡ್‌ಕ್ರಾಫ್ಟ್‌ಗಳ ಜೊತೆಗೆ 32 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಬರ್ತಿಂಗ್ ಅನ್ನು ನೀಡಿದೆ.

ಕುತುಬ್ ಮಿನಾರ್‌ಗಿಂತ ಎತ್ತರವಾಗಿದೆ ‘ಕವರ್ಡ್ ಡ್ರೈ ಬರ್ತ್’

ಹಂತ-IIಎ ಕೇಂದ್ರಭಾಗವಾಗ ಐಕಾನಿಕ್ ‘ಕವರ್ಡ್ ಡ್ರೈ ಬರ್ತ್’ ಸುಮಾರು 75 ಮೀಟರ್ ಎತ್ತರದಲ್ಲಿದ್ದು, ದೆಹಲಿಯ ಕುತುಬ್ ಮಿನಾರ್‌ಗಿಂತ ಎತ್ತರವಾಗಿದೆ. ಇದು 33000 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ. ಈ ಡ್ರೈ ಬರ್ತ್ ಅನ್ನು ಏಕಕಾಲದಲ್ಲಿ ಡಾಕಿಂಗ್ ಮಾಡಲು ಮತ್ತು ನಾಲ್ಕು ಹಡಗುಗಳವರೆಗೆ ಸಮಗ್ರ ನಿರ್ವಹಣೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡ್ತಿದ್ದಾರೆ: ಸ್ವಪಕ್ಷದ ನಾಯಕರಿಗೆ ಹೆಗಡೆ ಟಾಂಗ್

ಹಂತ-IIಎ ಇದರಲ್ಲಿ, ಅಧಿಕಾರಿಗಳು, ಹಿರಿಯ ಮತ್ತು ಕಿರಿಯ ನಾವಿಕರು ಮತ್ತು ರಕ್ಷಣಾ ನಾಗರಿಕ ಸಿಬ್ಬಂದಿಗೆ ಎಲ್ಲಾ ರೀತಿಯ ಸುಮಾರು 10,000 ವಸತಿ ಘಟಕಗಳೊಂದಿಗೆ ವಸತಿ ಸೌಕರ್ಯಗಳನ್ನು ಒಳಗೊಂಡಿರುವ ನಾಲ್ಕು ವಿಭಿನ್ನ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುತ್ತಿದೆ.

7000 ಉದ್ಯೋಗಾವಕಾಶ

ಕಾರವಾರದ ನೌಕಾ ನೆಲೆಯಲ್ಲಿ ನಡೆಯುತ್ತಿರುವ ನಿರ್ಮಾಣ ಚಟುವಟಿಕೆಗಳು ನೇರವಾಗಿ ಸುಮಾರು 7,000 ಸಿಬ್ಬಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಮತ್ತು ಪರೋಕ್ಷವಾಗಿ ರಾಷ್ಟ್ರದಾದ್ಯಂತ ಸುಮಾರು 20,000 ಉದ್ಯೋಗಗಳಿಗೆ ಕಾರಣವಾಗಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ