ಲೋಕಸಭೆಗೆ ಸ್ಪರ್ಧಿಸಲು ಧಮ್ ಇದ್ದರೆ ಮುಂದೆ ಬನ್ನಿ: ಸವಾಲು ಹಾಕಿದ ಅನಂತ್ ಕುಮಾರ್ ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಬೆಳಕೆ ಮಹಾಶಕ್ತಿ ಕೇಂದ್ರದ ಕಾರ್ಯರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಚುನಾವಣೆಗೆ ಸ್ಪರ್ದಿಸಲು ಯಾರಾದರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ. ಇಂದೆ ಖುರ್ಚಿ ಮುಂದೆ ಇಟ್ಟು ಹೊಗುತ್ತೇನೆ.‌ ದಮ್ ಇದ್ದರೆ ಮುಂದೆ ಬನ್ನಿ ಎಂದು ಆಹ್ವಾನಿಸಿದರು. ಅಲ್ಲದೆ, ತಾವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನಿವಾರ್ಯವಾಗಿದೆ ಎಂದರು.

ಲೋಕಸಭೆಗೆ ಸ್ಪರ್ಧಿಸಲು ಧಮ್ ಇದ್ದರೆ ಮುಂದೆ ಬನ್ನಿ: ಸವಾಲು ಹಾಕಿದ ಅನಂತ್ ಕುಮಾರ್ ಹೆಗಡೆ
ಲೋಕಸಭೆಗೆ ಸ್ಪರ್ಧಿಸಲು ದಮ್ ಇದ್ದರೆ ಮುಂದೆ ಬನ್ನಿ: ಯುವಕರಿಗೆ ಸವಾಲೆಸೆದ ಅನಂತ್ ಕುಮಾರ್ ಹೆಗಡೆ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: Rakesh Nayak Manchi

Updated on:Mar 05, 2024 | 5:42 PM

ಕಾರವಾರ, ಮಾ.5: ಲೋಕಸಭೆ ಚುನಾವಣೆಗೆ (Lok Sabha Elections) ಸ್ಪರ್ದಿಸಲು ಯಾರಾದರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ. ಇಂದೆ ಖುರ್ಚಿ ಮುಂದೆ ಇಟ್ಟು ಹೊಗುತ್ತೇನೆ.‌ ದಮ್ ಇದ್ದರೆ ಮುಂದೆ ಬನ್ನಿ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegade) ಸವಾಲು ಹಾಕಿದರು. ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಸುಮಾರು ನಾಲ್ಕೂವರೆ ವರ್ಷ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಹೆಗಡೆ, ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳ ನಡುವೆ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಕಾರ್ಯಕರ್ತರನ್ನು ಆಕರ್ಷಿಸುತ್ತಿದ್ದಾರೆ.

ಭಟ್ಕಳ್ ತಾಲೂಕಿನ ಬೆಳಕೆ ಮಹಾಶಕ್ತಿ ಕೇಂದ್ರದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅನಂತ ಕುಮಾರ ಹೆಗಡೆ, ಅನಿವಾರ್ಯವಾಗಿ ನಾನು ಈ ಬಾರಿ ಇಲ್ಲಿ ಚುನಾವಣೆಗೆ ಸ್ಪರ್ದೆ ಮಾಡಬೇಕಿದೆ. ನನಗೆ ರಾಜಕೀಯ ಬೇಡ, ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಅಂತಾ ನೇರವಾಗಿ ಹೇಳಿದ್ದೆ. ಆದರೂ ಕೇಲವರು ನನ್ನ ಬಳಿ ಬಂದೂ ಸ್ಪರ್ಧೆ ಮಾಡಲು ಒತ್ತಾಯ ಮಾಡಿದರು. ಹೇಗೋ ಯು ಟರ್ನ್ ಮಾಡಿಕೊಂಡು ಮತ್ತೆ ರಾಜಕೀಯದಲ್ಲಿ ಮುಂದುವರೆಯುತ್ತಿದ್ದೇನೆ ಎಂದು ಹೇಳುವ ಮೂಲಕ ತಾನು ಈ ಬಾರಿ ಟಿಕೆಟ್ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು.s

ಇದನ್ನೂ ಓದಿ: ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡ್ತಿದ್ದಾರೆ: ಸ್ವಪಕ್ಷದ ನಾಯಕರಿಗೆ ಹೆಗಡೆ ಟಾಂಗ್

ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ನಾನು ರಾಜಕಾರಣಿಯಾಗಿ ಸಾಯುವುದಿಲ್ಲ. ರಾಜಕಾರಣದಲ್ಲಿ ಮುಂದುವರೆಯುವ ಅನಿವಾರ್ಯತೆಯೂ ನಮಗಿಲ್ಲ. ರಾಜಕಾರಣ ಮಾಡುವುದು ಅಷ್ಟು ಸುಲಭದ ಕೆಲಸ ಅಲ್ಲ. ಹಾಗಾಗಿದ್ದರೆ ಎಲ್ಲರೂ ರಾಜಕಾರಣ ಮಾಡುತ್ತಿದ್ದರು. ಯಾರಾದರೂ ಉತ್ತರ ಕುಮಾರರು ಸ್ಪರ್ಧೆಗೆ ರೆಡಿ ಇದ್ದರೆ ಬನ್ನಿ ಎಂದು ಸವಾಲು ಹಾಕಿದರು.

ಅಲ್ಲದೆ, ಈ ಕ್ಷೇತ್ರದ ಅರಿವೇ ಇಲ್ಲದವರು ಪಾರ್ಲಿಮೆಂಟ್ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎಷ್ಟೊ ಜನರಿಗೆ ಕಿತ್ತೂರು, ಖಾನಾಪೂರ ನಕ್ಷೆಯಲ್ಲಿ ಎಲ್ಲಿ ಬರುತ್ತದೆ ಅನ್ನೊದೆ ಗೊತ್ತಿಲ್ಲ. ಚುನಾವಣೆಗೆ ಸ್ಪರ್ದಿಸಲು ಯಾರಾದರೂ ಯುವಕರು ತುಂಬ ಸಶಕ್ತರಾಗಿದ್ದರೆ ಬನ್ನಿ. ಇಂದೆ ಖುರ್ಚಿ ಮುಂದೆ ಇಟ್ಟು ಹೊಗುತ್ತೇನೆ.‌ ದಮ್ ಇದ್ದರೆ ಮುಂದೆ ಬನ್ನಿ ಎಂದು ಹೇಳಿ ಸಭೆಯಲ್ಲಿ ಟೆಬಲ್ ಮೇಲೆ ಖುರ್ಚಿ ಇಟ್ಟು ಯುವಕರಿಗೆ ಅಹ್ವಾನ ಕೊಟ್ಟರು.

ಭಟ್ಕಳದ ಇವತ್ತಿನ ರಾಜಕೀಯ ಪರಿಸ್ಥಿತಿ ಕಪ್ಪೆ ತುಲಾಭಾರ ಆಗಿದೆ. ಯಾರಾದರೂ ಮುಂದೆ ಹೊರಟರೆ ಕಾಲು ಹಿಡಿದು ಎಳೆಯಲಾಗುತ್ತದೆ. ಆಷಾಡ ಭೂತದಿಂದ ನಾವೇಲ್ಲರೂ ಹೋರಬರಬೇಕಿದೆ. ಚುನಾವಣೆ ಎಂಬುವುದು ಪ್ರಜಾಪ್ರಭುತ್ವದ ಯುದ್ಧ ಇದ್ದ ಹಾಗೆ. ನಾನು ಸೋಲಲು ಒಂದೇ ಒಂದು‌ ಮತ ಸಾಕು. ಅವನ್ಯಾರು ಅವನ ಬಳಿ ಎಷ್ಟು ಮತ ಇದೆ ಅಂತಾ ಮನಸಿನಲ್ಲಿಟ್ಟು ಚುನಾವಣೆ ಮಾಡಿದರೆ ಕಷ್ಟ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Tue, 5 March 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ