ಯಾವುದಾದರೂ ಉತ್ತರಕುಮಾರನಿಗೆ ಧಮ್ಮಿದ್ರೆ ಬಂದು ನನ್ನ ಕುರ್ಚಿ ಮೇಲೆ ಕೂರಲಿ: ಅನಂತಕುಮಾರ್ ಹೆಗಡೆ, ಸಂಸದ

ಯಾವುದಾದರೂ ಉತ್ತರಕುಮಾರನಿಗೆ ಧಮ್ಮಿದ್ರೆ ಬಂದು ನನ್ನ ಕುರ್ಚಿ ಮೇಲೆ ಕೂರಲಿ: ಅನಂತಕುಮಾರ್ ಹೆಗಡೆ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 05, 2024 | 6:52 PM

ಕ್ಷೇತ್ರದ ಬಗ್ಗೆ ಕಿಂಚಿತ್ತೂ ಅರಿವಿಲ್ಲದ್ದವರು ಪಾರ್ಲಿಮೆಂಟ್ ಕುರಿತು ಮಾತಾಡುತ್ತಿದ್ದಾರೆ, ಕಿತ್ತೂರು, ಖಾನಾಪುರ ಎಲ್ಲಿವೆ ಅಂತಲೂ ಅವರಿಗೆ ಗೊತ್ತಿಲ್ಲ ಅಂತ ಗೇಲಿ ಮಾಡುತ್ತಾರೆ. ರಾಜಕಾರಣ ಅಷ್ಟು ಸುಲಭವಲ್ಲ, ಅದು ಸುಲಭವಾಗಿದ್ರೆ ಎಲ್ಲರೂ ರಾಜಕಾರಣಿಗಳಾಗಿರುತ್ತಿದ್ದರು ಎನ್ನುತ್ತಾ ಟಿಕೆಟ್ ಆಕಾಂಕ್ಷಿಗಳನ್ನು ನಯವಾಗಿ ಹೆದರಿಸುತ್ತಾರೆ.

ಕಾರವಾರ: ಇದುವರೆಗೆ ಕೇವಲ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಈಗ ತಮ್ಮ ಪಕ್ಷದ ಅದರಲ್ಲೂ ತಮ್ಮ ಕ್ಷೇತ್ರದ ನಾಯಕರ ವಿರುದ್ಧ ಹರಿಹಾಯಲು ಅರಂಭಿಸಿದ್ದಾರೆ. ಅವರ ಹತಾಷೆ ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಕ್ಷೇತ್ರದ ಕಾರ್ಯಕರ್ತರು (party workers) ಅವರಿಗೆ ಟಿಕೆಟ್ ನೀಡಬಾರದೆಂದು ಬಹಿರಂಗವಾಗೇ ಮಾತಾಡಿಕೊಳ್ಳುತ್ತಿದ್ದಾರೆ. ಕೆಲವರು ಟಿಕೆಟ್ ಗೋಸ್ಕರ ಲಾಬಿ ಶುರುಮಾಡುತ್ತಿರುವುದು ಸಹ ಹೆಗಡೆ ಗಮನಕ್ಕೆ ಬಂದಿದ್ದು ಅಂಥವರ ವಿರುದ್ಧವೇ ಈ ಆಕ್ರೋಶ! ಟಿಕೆಟ್ ಆಕಾಂಕ್ಷಿಗಳನ್ನು ಹೆಗಡೆ ಉತ್ತರ ಕುಮಾರನಿಗೆ ಹೋಲಿಸುತ್ತಾರೆ ಮತ್ತು ಅವರಲ್ಲಿ ತಾಕತ್ತಿದ್ದರೆ ತಮ್ಮ ಚೇರ್ ಮೇಲೆ ಕೂರಲಿ ಅಂತ ಹೇಳಿ ತಮ್ಮ ಹಿಂದಿದ್ದ ಕುರ್ಚಿಯೊಂದನ್ನು ಎತ್ತಿ ಟೇಬಲ್ ಮೇಲಿಡುತ್ತಾರೆ! ಕ್ಷೇತ್ರದ ಬಗ್ಗೆ ಕಿಂಚಿತ್ತೂ ಅರಿವಿಲ್ಲದ್ದವರು ಪಾರ್ಲಿಮೆಂಟ್ ಕುರಿತು ಮಾತಾಡುತ್ತಿದ್ದಾರೆ, ಕಿತ್ತೂರು, ಖಾನಾಪುರ ಎಲ್ಲಿವೆ ಅಂತಲೂ ಅವರಿಗೆ ಗೊತ್ತಿಲ್ಲ ಅಂತ ಗೇಲಿ ಮಾಡುತ್ತಾರೆ. ರಾಜಕಾರಣ ಅಷ್ಟು ಸುಲಭವಲ್ಲ, ಅದು ಸುಲಭವಾಗಿದ್ರೆ ಎಲ್ಲರೂ ರಾಜಕಾರಣಿಗಳಾಗಿರುತ್ತಿದ್ದರು ಎನ್ನುತ್ತಾ ಟಿಕೆಟ್ ಆಕಾಂಕ್ಷಿಗಳನ್ನು ನಯವಾಗಿ ಹೆದರಿಸುತ್ತಾರೆ. ಧಮ್ಮಿದ್ದವರು, ತಾಕತ್ತಿದ್ದವರು ಮುಂದೆ ಬಂದರೆ ತಾನು ಯು-ಟರ್ನ್ ತೆಗೆದುಕೊಂಡು ಹೋಗೋದಾಗಿ ಅನಂತಕುಮಾರ ಹೆಗಡೆ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಒಂದು ಕೆನ್ನೆಗೆ ಹೊಡೆದ್ರೆ ತಲೆಯನ್ನೇ ತೆಗೆಯುವ ಸಂತಾನದವರು ನಾವು: ಮತ್ತೆ ವಿವಾದದ ಕಿಡಿ ಹೊತ್ತಿಸಿದ ಅನಂತಕುಮಾರ್ ಹೆಗಡೆ