ಹಲ್ಲು ಕಿತ್ತ ಹಾವಾಗಿದ್ಯಾ ಲೋಕಾಯುಕ್ತ?: ಚರ್ಚೆಗೆ ಗ್ರಾಸವಾದ ಉಪಲೋಕಾಯುಕ್ತರ ಹೇಳಿಕೆ

ಲೋಕಾಯುಕ್ತಕ್ಕೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಹಾಗೂ ತನಿಖೆ ನಡೆಸುವ ಹೆಚ್ಚಿನ ಅಧಿಕಾರ ಬೇಕಿದೆ ಎಂದು ಉತ್ತರ ಕನ್ನಡದ ಕಾರವಾರದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದ್ದು, ಈ ಹೇಳಿಕೆ ಹೊಸ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆ ಇದೆ. 300ರಿಂದ 400 ಪೋಸ್ಟ್​​ಗಳಿಗೆ ಜನ ಬೇಕಿದೆ ಎಂದೂ ಅವರು ಹೇಳಿದ್ದಾರೆ.

ಹಲ್ಲು ಕಿತ್ತ ಹಾವಾಗಿದ್ಯಾ ಲೋಕಾಯುಕ್ತ?: ಚರ್ಚೆಗೆ ಗ್ರಾಸವಾದ ಉಪಲೋಕಾಯುಕ್ತರ ಹೇಳಿಕೆ
ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ
Image Credit source: Tv9 Kannada
Edited By:

Updated on: Sep 30, 2026 | 12:10 PM

ಉತ್ತರ ಕನ್ನಡ, ಸೆಪ್ಟೆಂಬರ್​​ 30: ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅಡಿಯಲ್ಲಿ ಜನವರಿ 15, 1986ರಂದು ಅಧಿಕೃತವಾಗಿ ಜಾರಿಗೆ ಬಂದಿದ್ದ ಲೋಕಾಯುಕ್ತ ಸಂಸ್ಥೆ ಹಲವು ಅಡೆತಡೆಗಳ ಬಳಿಕ ಅಸ್ತಿತ್ವ ಉಳಿಸಿಕೊಂಡಿದ್ದರೂ ಹಲ್ಲು ಕಿತ್ತ ಹಾವಿನಂತಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣವಾಗಿರೋದು ಉಪಲೋಕಾಯುಕ್ತ ನ್ಯಾ. ಕೆ.ಎನ್ ಫಣೀಂದ್ರ ಅವರು ನೀಡಿರುವ ಹೇಳಿಕೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಇನ್ನೂ ಬಲ ಕೊಡಬೇಕಿದೆ. ಅಧಿಕಾರಿಗಳು ತಪ್ಪು ಮಾಡಿದ್ದು ಕಣ್ಣೆದುರೇ ಇದ್ದರೂ ಸಸ್ಪೆಂಡ್ ಮಾಡುವ ಅಧಿಕಾರ ಇರೋದಿಲ್ಲ. ಎಲ್ಲದಕ್ಕೂ ಸ್ವಾಯತ್ತತೆ ಇಲ್ಲ. ಸರ್ಕಾರಕ್ಕೆ ಶಿಫಾರಸು ಮಾಡಬೇಕು ಅಷ್ಟೇ ಎಂದಿದ್ದಾರೆ.

‘ಲೋಕಾಯುಕ್ತದಲ್ಲಿ 300-400 ಸಿಬ್ಬಂದಿ ಕೊರತೆ’

ತಾತ್ಕಾಲಿಕವಾಗಿಯಾದರೂ ಸಸ್ಪೆಂಡ್ ಮಾಡುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಕೊಡಬೇಕು. ತನಿಖೆಯ ಅಧಿಕಾರವೂ ನಮಗೆ ಸಿಗಬೇಕು. ಅಲ್ಲದೆ, ಲೋಕಾಯುಕ್ತದಲ್ಲಿ ಸಿಬ್ಬಂದಿ ಕೊರತೆ ಇದೆ. 300ರಿಂದ 400 ಪೋಸ್ಟ್​​ಗಳಿಗೆ ಜನ ಬೇಕಿದೆ. ಸಿಬ್ಬಂದಿ ಪೊಲೀಸ್ ಇಲಾಖೆಯಿಂದಲೇ ಬರಬೇಕು. ಇಂಡಿಪೆಂಡೆಂಟ್ ಆಗಿ ಹುದ್ದೆಗೆ ತೆಗೆದುಕೊಳ್ಳಲು ಅಧಿಕಾರ ಇಲ್ಲ. ಪೊಲೀಸ್ ವಿಂಗ್, ಟೆಕ್ನಿಕಲ್, ಅಡ್ಮಿನಿಸ್ಟ್ರೇಟರ್ ಸ್ಟ್ರಾಂಗ್ ಇರಬೇಕು. ನಮ್ಮಲ್ಲೇ ಲೂಪ್ ಹೋಲ್ಸ್ ಇದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಶೇ. 50ರಷ್ಟು ನಿವೃತ್ತ ಸೈನಿಕರ ನೇಮಕ ಮಾಡಿಕೊಂಡು ಅವರ ಕೆಳಗೆ ಇತರರು ಕೆಲಸ ಮಾಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದೇವೆ. ಆಗ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆಪಿಎಸ್​ಸಿ ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮದ ವಾಸನೆ: ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ, ಹಣದ ಲೆಕ್ಕ!

‘ಲೋಕಾಯುಕ್ತ ಕನ್ವಿಕ್ಷನ್ ರೇಟ್ ತುಂಬಾ‌ ಕಡಿಮೆಯಾಗಿದೆ’

ಲೋಕಾಯುಕ್ತ ಪ್ರಕರಣಗಳಲ್ಲಿ ಕೇವಲ ಶೇ. 10ರಷ್ಟು ಮಾತ್ರ ಶಿಕ್ಷೆ ಆಗಬಹುದು. ದೂರು ಕೊಟ್ಟವರೇ ಹಿಂದೆ ಸರಿಯುತ್ತಿರೋದ್ರಿಂದ ಲೋಕಾಯುಕ್ತ ಕನ್ವಿಕ್ಷನ್ ರೇಟ್ ತುಂಬಾ‌ ಕಡಿಮೆಯಾಗಿದೆ. ದೂರು ನೀಡುವಾಗ ಇರುವ ಉತ್ಸಾಹ ಎವಿಡೆನ್ಸ್  ಕೊಡುವಾಗ ಇರೋದಿಲ್ಲ ಎಂದೂ ಉಪಲೋಕಾಯುಕ್ತ ನ್ಯಾ. ಕೆ.ಎನ್ ಫಣೀಂದ್ರ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:08 pm, Wed, 30 September 26

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us