ಕಾರವಾರ: ಸೀಬರ್ಡ್ ನಿರಾಶ್ರಿತ ಮಹಿಳೆಗೆ ಪರಿಹಾರ ನೀಡದ ಸತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಯ ಚರಾಸ್ತಿ ಜಪ್ತಿ ಮಾಡಲು ಉತ್ತರ ಕನ್ನಡ ಜಿಲ್ಲೆ ಕಾರವಾರ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಶೇಷ ಭೂ ಸ್ವಾಧೀನ ಕಚೇರಿಯ ಚರಾಸ್ತಿ ಜಪ್ತಿ ಮಾಡಲು ಇಂದು(ಸೆಪ್ಟೆಂಬರ್. 30) ಕೋರ್ಟ್ ಆದೇಶಿಸಿದೆ. ನ್ಯಾಯಲಯದ ತೀರ್ಪಿನಂತೆ ಕಚೇರಿಯಲ್ಲಿದ್ದ ಟೇಬಲ್, ಚೇರ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ನಿಟ್ಟುಸಿರುಬಿಟ್ಟ ಮುರುಘಾ ಮಠದ ಸಿಬ್ಬಂದಿ; ಕಳಂಕಿತ ಆರೋಪಿ ಮುರುಘಾ ಶ್ರೀ ಸಹಿ ಹಾಕಲು ಕೋರ್ಟ್ ಅನುಮತಿ
ಇನ್ನು ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಶೀಲಾ ನಾಗೇಶ್ ದಾಂಡೇಕರ್ ಪರ ವಕೀಲ ಕೆ.ಆರ್.ದೇಶಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಮತ್ತು ಸುಪ್ರೀಂ ಕೋಟ್೯ ಆದೇಶದ ಪ್ರಕಾರ ಪರಿಹಾರ ಹಣದಲ್ಲಿ ಯಾವುದೇ ಡಿಡೆಕ್ಷನ್ ಮಾಡುವಂತಿಲ್ಲ ಎನ್ನುವುದಿದೆ.. ಆದರೆ ಕಾನೂನು ಬಾಹಿರವಾಗಿ ಹಣ ಡಿಡಕ್ಷನ್ ಮಾಡಿದೆ. ಅಲ್ಲದೇ ಡಿಡಕ್ಷನ್ ಹಣ ಮರುಪಾವತಿ ಮಾಡದೇ ಸರ್ಕಾರ ನಿರ್ಲಕ್ಷ ಮಾಡಿದೆ. ಇದರಿಂದ ಇಂದು ಕಚೇರಿಯ ಚರಾಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಆದೇಶಿಸಿದೆ ಎಂದು ಸ್ಪಷ್ಟಪಡಿಸಿದರು.
1984ರಲ್ಲಿ ಶೀಲಾ ನಾಗೇಶ್ ದಾಂಡೇಕರ್ ಕುಟುಂಬ ಮನೆ, 40 ಗುಂಟೆ ಆಸ್ತಿ ಕಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶೀಲಾ ನಾಗೇಶ್ ದಾಂಡೇಕರ್ಗೆ ನಿರಾಶ್ರತ ಮಹಿಳೆಗೆ ಒಟ್ಟು 30 ಲಕ್ಷ ಪರಿಹಾರವನ್ನ ನೀಡಬೇಕಿತ್ತು. ಆದ್ರೆ, ಇಲಾಖೆ ಕಾನೂನು ಬಾಹಿರವಾಗಿ 9 ಲಕ್ಷ ಡಿಡಕ್ಷನ್ ಮಾಡಿತ್ತು, ಡಿಡಕ್ಷನ್ ಹಣ ಮರುಪಾವತಿ ಮಾಡದೇ ಸರ್ಕಾರ ನಿರ್ಲಕ್ಷಿಸಿತ್ತು. ಇದರಿಂದ ಬೇಸತ್ತ ಮಹಿಳೆ ನ್ಯಾಯಾಲಯ ಮೊರೆ ಹೋಗಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ