ಮಾರುತಿ ನಾಯ್ಕ್ ಆತ್ಮಹತ್ಯೆ ಕೇಸ್​: ಮೂವರು ಪೊಲೀಸ್ ಸಿಬ್ಬಂದಿ ಅಮಾನತು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 26, 2023 | 2:51 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾರುತಿ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಕಾರವಾರ ಪೊಲೀಸ್​​ ಠಾಣಾ ಇನ್ಸ್​ಪೆಕ್ಟರ್​​​ ಕೆ.ಕುಸುಮಾಧರ, ಪಿಎಸ್​ಐ ಶಾಂತಿನಾಥ ಮತ್ತು ಕಾನ್ಸ್​ಟೇಬಲ್​​​​​ ದೇವರಾಜ್​ರನ್ನು ಅಮಾನತು ಮಾಡಿ ಎಸ್​ಪಿ ವಿಷ್ಣುವರ್ಧನ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಮಾರುತಿ ನಾಯ್ಕ್ ಆತ್ಮಹತ್ಯೆ ಕೇಸ್​: ಮೂವರು ಪೊಲೀಸ್ ಸಿಬ್ಬಂದಿ ಅಮಾನತು
ಇನ್ಸ್​ಪೆಕ್ಟರ್​​​ ಕೆ.ಕುಸುಮಾಧರ, ಪಿಎಸ್​ಐ ಶಾಂತಿನಾಥ,
Follow us on

ಉತ್ತರ ಕನ್ನಡ, ಅಕ್ಟೋಬರ್​​​​​ 26: ಜಿಲ್ಲೆಯ ಕಾರವಾರದಲ್ಲಿ ಮಾರುತಿ ನಾಯ್ಕ್ (Maruti Naik) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಕಾರವಾರ ಪೊಲೀಸ್​​ ಠಾಣಾ ಇನ್ಸ್​ಪೆಕ್ಟರ್​​​ ಕೆ.ಕುಸುಮಾಧರ, ಪಿಎಸ್​ಐ ಶಾಂತಿನಾಥ ಮತ್ತು ಕಾನ್ಸ್​ಟೇಬಲ್​​​​​ ದೇವರಾಜ್​ರನ್ನು ಅಮಾನತು ಮಾಡಿ ಎಸ್​ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧ ದಲಿತ ಮುಖಂಡ ಎಲಿಷಾ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿದ್ದಕ್ಕೆ ಮಾರುತಿ ನಾಯ್ಕ್ ಮೇಲೆ ಹಲ್ಲೆ ಮಾಡಲಾಗಿತ್ತು.

ದಲಿತ ಮುಖಂಡ ಎಲಿಷಾ ಎಲಕಪಾಟಿ ಕುಟುಂಬದ ವಿರುದ್ಧ ಹಲ್ಲೆ ಆರೋಪ ಮಾಡಿದ್ದು, ಈ ಬಗ್ಗೆ ಕಾರವಾರ ಠಾಣೆಯಲ್ಲಿ ಮಾರುತಿ ನಾಯ್ಕ್ ದೂರು ನೀಡಿದ್ದ.​​​ ಆದರೆ ಪೊಲೀಸರು ಆರೋಪಿಗಳ ಪರ ಕೆಲಸ ಮಾಡಿ, ಕಿರುಕುಳ ಆರೋಪ ಮಾಡಲಾಗಿದೆ. ಹಾಗಾಗಿ ಡೆತ್​ನೋಟ್​​ ಬರೆದು ಮಾರುತಿ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದ.

ಇದನ್ನೂ ಓದಿ: ಹಿಂದೂ ದೇವತೆಗಳನ್ನು ನಿಂದಿಸಿದ್ದ ವ್ಯಕ್ತಿಯ ವಿಡಿಯೋ ರೆಕಾರ್ಡ್ ಮಾಡಿದ್ದ ಮಾರುತಿ ಆತ್ಮಹತ್ಯೆ

ಪೊಲೀಸರು, ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಸೇರಿದಂತೆ ಹಲವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕರಣದ ಗಂಭೀರತೆ ಹಿನ್ನೆಲೆ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ತನ್ನ ಪುತ್ರನ ಚಡ್ಡಿಯ ಕಿಸೆಯಲ್ಲಿ ಸುಸೈಡ್ ನೋಟ್ ಇಟ್ಟು ಪತ್ನಿಗೆ ನೀಡುವಂತೆ ಮಾರುತಿ ಹೇಳಿದ್ದರು. ಡೆತ್ ನೋಟ್‌ನಲ್ಲಿ ನನ್ನ ಆತ್ಮಹತ್ಯೆಗೆ ಪೊಲೀಸರು ಹಾಗೂ ಎಲಿಷಾ ಕುಟುಂಬಸ್ಥರು ಕಾರಣ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Chikkaballapur Accident: ಚಿಕ್ಕಬಳ್ಳಾಪುರ ಅಪಘಾತ: ಶಾಸಕ ಪ್ರದೀಪ್ ಈಶ್ವರ್ ಭಾವುಕ, ಮೃತ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಡೆತ್ ನೋಟ್‌ನಲ್ಲಿ ಪೊಲೀಸ್ ಸಿಬ್ಬಂದಿ ದೇವರಾಜ, ಎಲಿಷಾ ಕುಟುಂಬಸ್ಥ ಬಸವರಾಜ, ಸುರೇಶ್, ನಾಗಮ್ಮ ಹೆಸರು ಬರೆದಿದ್ದರು. ಇತ್ತ ಪತಿಯನ್ನು ಕಳೆದುಕೊಂಡ ಮಾರುತಿ ಪತ್ನಿ ರಾಧಾ, ಕಣ್ಣೀರು ಹಾಕಿದ್ದು, ಪತಿಯ ಸಾವಿಗೆ ನ್ಯಾಯ ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಆನೇಕಲ್: ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಆಗಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಮುಗಳೂರಿನಲ್ಲಿ ನಡೆದಿದೆ. ದುಷ್ಕರ್ಮಿಗಳು ವ್ಯಕ್ತಿಯನ್ನ ಕೊಲೆಗೈದು ಹೊಳೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಬ್ರಿಡ್ಜ್​ ​ಮೇಲೆ ರೈಡಿಂಗ್ ಕನ್ನಡಕ, ಪಿನಾಕಿನಿ ಹೊಳೆಯಲ್ಲಿ ಬೈಕ್ ಪತ್ತೆಯಾಗಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.