ಉತ್ತರ ಕನ್ನಡ: ತಮಿಳುನಾಡಿನಿಂದ (Tmilnadu) ಕಾರವಾರಕ್ಕೆ ಓಡಿ ಬಂದ ಪ್ರೇಮಿಗಳನ್ನು (Lovers) ಕಾರವಾರ (Karwar) ಪೊಲೀಸರು ಟ್ರ್ಯಾಕ್ ಮಾಡಿ ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆ ಅಯಿಸಾ ರೆಹಮತ್‌ವುಲ್ಲಾ (24), ಯುವಕ ಬೀರ್ ಮೈದಿನ್ (27) ಓಡಿ ಬಂದ ಪ್ರೇಮಿಗಳು. ಮಹಿಳೆ ಅಯಿಸಾ ರೆಹಮತ್‌ವುಲ್ಲಾ ಮತ್ತು ಯುವಕ ಬೀರ್ ಮೈದಿನ್ ಬಾಲ್ಯ ಸ್ನೇಹಿತರಾಗಿದ್ದು, ಇಬ್ಬರೂ ಪ್ರೀತಿಸುತ್ತಿದ್ದರು. ಪ್ರೇಮಿಗಳು ತಮಿಳುನಾಡಿನ ಪುದುಕೋಟೆ ಜಿಲ್ಲೆಯ ಗಣೇಶ್ ನಗರದಲ್ಲಿ ವಾಸಿಸುತ್ತಿದ್ದರು
ಆದರೆ ಮಹಿಳೆ ಆಯಿಸಾ ತನಗೆ ಇಷ್ಟವಿಲ್ಲದೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಳು. ಬಳಿಕ ಯುವಕ ತನ್ನ ಬಾಲ್ಯದ ಗೆಳತಿ ಅಯಿಸಾಳನ್ನು ಕರೆದುಕೊಂಡು ಕಾರವಾರಕ್ಕೆ ಬಂದಿದ್ದನು. ಆರು ತಿಂಗಳಿನಿಂದ ಕಾರವಾರದ ಸೋನಾರವಾಡದಲ್ಲಿ ಪ್ರೇಮಿಗಳು ವಾಸವಾಗಿದ್ದರು.
ಯುವಕ ಬೀರ್ ಮೈದುನ್ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ಗಾರೆ ಕೆಲಸ ಮಾಡಿ ತನ್ನ ಪ್ರೇಮಿಯೊಂದಿಗೆ ಜೀವನ ನಡೆಸುತ್ತಿದ್ದನು. ಯುವತಿ ಈಗ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಪ್ರಸ್ತುತ ಕಾರವಾರ ಪೊಲೀಸರು ಪ್ರೇಮಿಗಳನ್ನು ಪತ್ತೆ ಮಾಡಿ ತಮಿಳಿನಾಡಿನ ಪೊಲೀಸರಿಗೆ ಮತ್ತು ಯುವತಿ ಮಾವನಿಗೆ ಒಪ್ಪಿಸಿದ್ದಾರೆ. ಕಾರವಾರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 5:10 pm, Sat, 27 August 22