2022 ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟ: ತಮ್ಮಣ್ಣ ಬೀಗಾರ್​​ಗೆ ಬಾಲ ಸಾಹಿತ್ಯ, ದಾದಾಪೀರ್ ಜೈಮನ್​​ಗೆ ಯುವ ಸಾಹಿತ್ಯ ಪ್ರಶಸ್ತಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 24, 2022 | 6:18 PM

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಮ್ಮಣ್ಣ ಬೀಗಾರ್ ಗೆ ಬಾವಲಿ ಗುಹೆ ಎನ್ನುವ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯಕ್ಕೆ ಈ ಪ್ರಶಸ್ತಿ ದೊರೆತಿದ್ದು, ಇನ್ನು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ದಾದಾಪೀರ್ ಜೈಮನ್​​ ಅವರ ನೀಲಕುರಂಜಿ ಕಥಾ ಸಂಕಲನಕ್ಕೆ ಕೇಂದ್ರ ಯುವ ಸಾಹಿತ್ಯ ಪ್ರಶಸ್ತಿ ದೊರೆತಿದೆ.

2022 ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟ: ತಮ್ಮಣ್ಣ ಬೀಗಾರ್​​ಗೆ ಬಾಲ ಸಾಹಿತ್ಯ, ದಾದಾಪೀರ್ ಜೈಮನ್​​ಗೆ ಯುವ ಸಾಹಿತ್ಯ ಪ್ರಶಸ್ತಿ
ತಮ್ಮಣ್ಣ ಬೀಗಾರ್, ದಾದಪಿರ್ ಜಯ್ಮನ್
Follow us on

ಕಾರವಾರ: 2022ರ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿದ್ದು ಈ ಬಾರಿ ಇಬ್ಬರು ಕನ್ನಡಿಗರಿಗೆ ಪ್ರಶಸ್ತಿ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಮ್ಮಣ್ಣ ಬೀಗಾರ್ ಗೆ ಬಾವಲಿ ಗುಹೆ ಎನ್ನುವ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯಕ್ಕೆ ಈ ಪ್ರಶಸ್ತಿ ದೊರೆತಿದ್ದು, ಪ್ರಶಸ್ತಿ 50,000 ನಗದು ಮತ್ತು ಸನ್ಮಾನ ಹೊಂದಿದೆ. ಇನ್ನು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ದಾದಾಪೀರ್ ಜೈಮನ್  ಅವರಿಗೆ ನೀಲಕುರಂಜಿ ಕಥಾ ಸಂಕಲನಕ್ಕೆ ಕೇಂದ್ರ ಯುವ ಸಾಹಿತ್ಯ ಪ್ರಶಸ್ತಿ ದೊರೆತಿದೆ.

ಕತೆಗಾರ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.

ಇವರಿಕೆ ಚಿಕ್ಕಂದಿನಿಂದಲೇ ಸಾಹಿತ್ಯದ ಕಡೆ ಒಲವು ಜಾಸ್ತಿ. ಹೀಗಾಗಿ ಕಥೆ, ಕವನ, ಕಾದಂಬರಿ ಓದುವುದು ಬರೆಯುವುದು ಇವರ ಹವ್ಯಾಸ. ಇನ್ನೂ ಇವರು ರಚಿಸಿದ ಸಂಕಲನಗಳು ಹೀಗೆವೆ‌. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ – ಮಕ್ಕಳ ಕವನ ಸಂಕಲನ. ಮಿಂಚಿನ ಮರಿ – ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ಮಲ್ಕಾಡೆ ಮಾತಾಡು, ಅಮ್ಮನ ಚಿತ್ರ ಪುಟ್ಟನ ಕೋಳಿ – ಮಕ್ಕಳ ಕತಾ ಸಂಕಲನ

ಮಾತಾಟ ಮಾತೂಟ, ಮರಬಿದ್ದಾಗ, ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳನ್ನು, ಬಾವಲಿ ಗುಹೆ ಮಕ್ಕಳ ಕಾದಂಬರಿ ಹೊರ ತಂದಿದ್ದಾರೆ. ಅವರ ಸಾಹಿತ್ಯ ಕೃಷಿಗೆ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿಗಳು ಸಂದಿವೆ. ರಾಜ್ಯ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ವ್ಯಂಗ್ಯ ಚಿತ್ರ ರಚನೆಗಾಗಿ ರಾಜ್ಯಮಟ್ಟದ ಬಹುಮಾನ, ರಾಜ್ಯಮಟ್ಟದ ವಿಜ್ಞಾನ ಗೋಷ್ಠಿ ಬಹುಮಾನ ಹೀಗೆ ಹಲವು ಬಹುಮಾನಗಳು ಇವರಿಗೆ ಸಂದಿವೆ. ಇನ್ನೂ 2022 ರ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕರಟವಾಗಿದ್ದು ತಮ್ಮಣ್ಣ ಬೀಗಾರ ಅವರಿಗೆ ಬಾವಲಿ ಗುಹೆ ಎನ್ನುವ ಮಕ್ಕಳ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ.

Published On - 4:56 pm, Wed, 24 August 22