
ಕಾರವಾರ, ಜನವರಿ 09: ಆಂಟೋನಿಯಾ ಎಂಬ ಇಂಗ್ಲೆಂಡ್ (England) ಮೂಲದ 94 ವರ್ಷದ ವೃದ್ಧೆ. ಅವರಿಗೆ ಗೋಕರ್ಣವೆಂದರೆ (Gokarna) ಪಂಚಪ್ರಾಣ. ಇಲ್ಲಿನ ಸಮೃದ್ಧವಾದ ನಿಸರ್ಗ ಸೌಂದರ್ಯ ಸವಿಯಲು ಕಳೆದ 50 ವರ್ಷದಿಂದ ಗೋಕರ್ಣಕ್ಕೆ ಆಗಮಿಸುತ್ತಿದ್ದಾರೆ. ಹೀಗಿರುವಾಗ ಇತ್ತೀಚೆಗೆ ಗೋಕರ್ಣ ಕಡಲ ತೀರದಲ್ಲಿ ಕಸ ಕಂಡಿದ್ದಾರೆ. ವಯಸ್ಸನ್ನು ಲೆಕ್ಕಿಸದೆ ಕಳೆದ ಒಂದು ವಾರದಿಂದ ಕಡಲ ತೀರವನ್ನು ಸ್ವಚ್ಛಗೊಳಿಸಿದ್ದಾರೆ.
ಅಧ್ಯಾತ್ಮಿಕ ಮತ್ತು ಸುಂದರ ಪ್ರಾಕೃತಿಕ ಸೌಂದರ್ಯ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಗೋಕರ್ಣ ವಿದೇಶಿಗರ ನೆಚ್ಚಿನ ತಾಣ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಇಂಗ್ಲೆಂಡ್ ಮೂಲದ 94 ವರ್ಷದ ವೃದ್ಧೆ ಆಂಟೋನಿಯಾ ಮಾರು ಹೋಗಿದ್ದಾರೆ. ಕಳೆದ 50 ವರ್ಷಗಳಿಂದ ಪ್ರತಿ ವರ್ಷ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಅಡಿಕೆ ಫಸಲಿಗೆ ರೋಗದ ಜೊತೆಗೆ ಕೇಂದ್ರದ ಆಮದು ಹೊಡೆತ: ಡಬಲ್ ಶಾಕ್ಗೆ ಕರ್ನಾಟಕದ ಬೆಳೆಗಾರರು ಕಂಗಾಲು
ಗೋಕರ್ಣಕ್ಕೆ ಬಂದರೆ ವರ್ಷದಲ್ಲಿ ಕನಿಷ್ಟ ಮೂರು ತಿಂಗಳು ಇಲ್ಲಿಯೇ ನೆಲೆಸುತ್ತಾರೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಡ್ಲೆ ಬೀಚ್ ಆಂಟೋನಿಯಾ ಅವರ ನೆಚ್ಚಿನ ತಾಣ. ಇತ್ತೀಚೆಗೆ ಕುಡ್ಲೆ ಬೀಚ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ಕೊಡುತ್ತಿರುವ ಹಿನ್ನೆಲೆ ಬೀಚ್‌ನಲ್ಲಿ ಕಸ ಹೆಚ್ಚಾಗಿದೆ. ಈ ಬಗ್ಗೆ ಆಂಟೋನಿಯಾ ಬೇಸರಗೊಂಡಿದ್ದರು.
ಗೋಕರ್ಣ ಆಂಟೋನಿಯಾ ಅವರಿಗೆ ಒಂದು ನೆಮ್ಮದಿಯ ತಾಣವಾಗಿದೆ. ತಮ್ಮ ಜೀವನದ ಅತಿ ಹೆಚ್ಚು ಸಮಯ ಇಲ್ಲಿಯೇ ಕಳೆದಿದ್ದಾರೆ. ಹೀಗಾಗಿ ಕಳೆದ 15 ದಿನಗಳಿಂದ ಕುಡ್ಲೆ ಬೀಚ್ನಲ್ಲಿದ್ದ ಕಸವನ್ನ ಬೇರೆಡೆಗೆ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ. ಗೋಕರ್ಣದ ಕಡಲ ತೀರ ಸ್ವಚ್ಚಗೊಳಿಸುವುದರ ಮೂಲಕ ಸಣ್ಣ ಋಣ ಸಂದಾಯ ಮಾಡುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ
ಸದ್ಯ ಆಂಟೋನಿಯಾ ಅವರು ಗೋಕರ್ಣ ಮೇಲಿಟ್ಟ ಪ್ರೀತಿ, ಕಾಳಜಿ ಹಿನ್ನೆಲೆ ಕಳೆದ ಮೂವತ್ತು ವರ್ಷಗಳಿಂದ ನಿರಂತರ ಸಂಪರ್ಕದಲ್ಲಿರುವ ಗೋಕರ್ಣ ಮೂಲದ ಪರಮೇಶ್ವರ ಶಾಸ್ತ್ರೀ ಹಾಗೂ ತಂಡ ಆಂಟೋನಿಯಾ ಅವರನ್ನು ಸನ್ಮಾನಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.