ಉತ್ತರ ಕನ್ನಡ, ಆ.9: ಜಿಲ್ಲೆಯು ಭೌಗೋಳಿಕವಾಗಿ ಅತೀ ವಿಸ್ತಾರವಾಗಿದೆ. ಜೊತೆಗೆ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಹೀಗಾಗಿ ಅಲ್ಲಿಯ ಜನ ಜಾನುವಾರಗಳನ್ನು ಹೆಚ್ಚು ಸಾಕಾಣಿಕೆ ಮಾಡುತ್ತಾರೆ. ವಿಪರ್ಯಾಸವೆಂದರೆ ಅತೀ ಹೆಚ್ಚು ಜಾನುವಾರಗಳಿರುವ ಜಿಲ್ಲೆಗೆ ಪಶು ವೈದ್ಯರ(Veterinarian)ಕೊರತೆ ಎದುರಾಗಿದೆ. ಹೌದು, ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ ಒಟ್ಟು 4 ಲಕ್ಷ 10 ಸಾವಿರ ಜಾನುವಾರಗಳಿವೆ. ಅದರಲ್ಲಿ 3 ಲಕ್ಷ 36 ಸಾವಿರ ದನಕರುಗಳು, 73 ಸಾವಿರ ಎಮ್ಮೆಗಳು, 20 ಸಾವಿರ ಕುರಿಗಳು, 5 ಲಕ್ಷ ಕೋಳಿಗಳಿವೆ. ಇಷ್ಟೊಂದು ಜಾನುವಾರಗಳಿರುವ ಜಿಲ್ಲೆಗೆ ವೈದ್ಯರು ಮಾತ್ರ ಬೆರಳೆಣಿಕೆಯಷ್ಟು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 133 ಪಶು ವೈದ್ಯ ಸಂಸ್ಥೆಗಳಿವೆ, ಅದರಲ್ಲಿ ಗ್ರಾಮೀಣ ಪಶು ಚಿಕಿತ್ಸಾಲಯ, ತಾಲೂಕು ಪಶು ಆಸ್ಪತ್ರೆ, ಜಿಲ್ಲಾ ಪಶು ಆಸ್ಪತ್ರೆಗಳು ಸೇರಿವೆ. ಇನ್ನು ಜಿಲ್ಲೆಗೆ 129 ಪಶುವೈದ್ಯರ ಹುದ್ದೆ ಮಂಜೂರುಯಿದೆ. ಆದರೆ, ಇದರಲ್ಲಿ ಕೇವಲ18 ವೈದ್ಯರು ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ಹುದ್ದೆಗೆಳು ಕಳೆದ ಐದಾರು ವರ್ಷಗಳಿಂದ ಖಾಲಿ ಇವೆ. ಇನ್ನು ಪಶುವೈದ್ಯರನ್ನ ಹೊರತು ಪಡಿಸಿ, ತಾಂತ್ರಿಕ ಹುದ್ದೆಗಳು 215 ಇವೆ. ಅದರಲ್ಲಿ 74 ಹುದ್ದೆಗಳು ಮಾತ್ರ ಭರ್ತಿ ಆಗಿದ್ದು, ಉಳಿದ 143 ಹುದ್ದೆಗಳು ಖಾಲಿ ಇವೆ. ಹೀಗಾಗಿ ಒಂದು ಕಡೆ ವೈದ್ಯರ ಕೊರತೆ, ಮತ್ತೊಂದು ಕಡೆ ಜಾನುವಾರಗಳಿಗೆ ಮಳೆಗಾಲದಲ್ಲಿ ಹೆಚ್ಚಾಗುತ್ತಿರುವ ರೋಗದ ಭಾದೆ. ಇದರಿಂದ ಜಾನುವಾರಗಳಿಗೆ ವೈದ್ಯಕೀಯ ಸೇವೆ ಸಲ್ಲಿಸುವುದು ಕಷ್ಟ ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಪಶು ಆಸ್ಪತ್ರೆ ಉಪನಿರ್ದೇಕ ರಾಕೇಶ ಬಂಗ್ಲೆ ಹೇಳಿದರು.
ಇದನ್ನೂ ಓದಿ:Vascular diseases rising: ಪ್ರತಿ ವರ್ಷ ರಕ್ತನಾಳದ ಕಾಯಿಲೆ ಶೇ.10ರಷ್ಟು ಏರಿಕೆ, ಇಲ್ಲಿದೆ ವೈದ್ಯರ ಸಲಹೆ
ಒಟ್ಟು 12 ತಾಲೂಕುಗಳನ್ನು ಹೊಂದಿರುವ ಜಿಲ್ಲೆಗೆ ಪ್ರತಿ ತಾಲೂಕಾ ಪಶು ಆಸ್ಪತ್ರೆ ಕೇಂದ್ರಗಳಿಗೆ ಒಟ್ಟು 236 ಡಿ ದರ್ಜೆ ನೌಕರರ ಅವಶ್ಯಕತೆ ಇದೆ. ಅದರಲ್ಲಿ ಕೇವಲ 20 ಹುದ್ದೆಗಳು ಮಾತ್ರ ಭರ್ತಿ ಆಗಿವೆ. ಉಳಿದ 215 ಹುದ್ದೆಗಳು ಖಾಲಿ ಇವೆ. ಇನ್ನು ಜಿಲ್ಲೆಯಲ್ಲಿ ಪಶು ಆಸ್ಪತ್ರೆ ಬಿಲ್ಡಿಂಗ್ ವ್ಯವಸ್ಥೆ ಇದೆ. ಔಷಧಿಗಳ ಕೊರತೆಯು ಇಲ್ಲ. ಆದರೆ, ವೈದ್ಯರ ಕೊರತೆ ಬಹಳಷ್ಟಿದೆ. ಹೀಗಾಗಿ ಚಿಕಿತ್ಸೆ ಸಿಗದೆ ಪಶುಗಳು ಸಾವನ್ನಪ್ಪುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಪಶು ಸಂಜೀವಿನಿ ಅಂಬ್ಯುಲೆನ್ಸ್ ಯೋಜನೆ ಕೂಡ ವೈದ್ಯರ ಮತ್ತು ಚಾಲಕರ ಕೊರತೆಯಿಂದ ಹಳ್ಳ ಹಿಡಿದೆ.
ಹೌದು, ಜಿಲ್ಲೆಗೆ ಬಂದ 13 ಪಶು ಸಂಜೀವಿನಿ ಅಂಬ್ಯುಲೆನ್ಸ್ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ವೈದ್ಯರ ಕೊರತೆಯಿಂದ ಪಶು ಆಸ್ಪತ್ರೆಯ ವ್ಯವಸ್ಥೆಗಳು ಹದಗೆಟ್ಟಿದ್ದು, ಇನ್ನು ಜಾನುವಾರಗಳನ್ನು ದೇವರಂತೆ ಪೂಜಿಸುವ ಜನರಿಗೆ ಅನಾರೋಗ್ಯವಾದಾಗ ಕನಿಷ್ಠ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲವೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಅನಾರೋಗ್ಯ ಪಿಡೀತ ಜಾನುವಾರಗಳು ಸಾವನ್ನಪ್ಪುತ್ತಿವೆ. ಇನ್ನಾದರೂ ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಬಗೆ ಹರಿಸುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:43 am, Wed, 9 August 23