Crime News: ಕಾರವಾರದ ಕೆರೆಯೊಂದರಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

| Updated By: ಆಯೇಷಾ ಬಾನು

Updated on: Nov 14, 2022 | 11:42 AM

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಾಬುಸಾಬ್ ಅತ್ತಿವೇರಿ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮಾಬುಸಾಬ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Crime News: ಕಾರವಾರದ ಕೆರೆಯೊಂದರಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಹೊರವಲಯದ ಕೆರೆಯಲ್ಲಿ, ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಮಾಬುಸಾಬ್ ಅತ್ತಿವೇರಿ (47) ಮೃತ ವ್ಯಕ್ತಿ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಾಬುಸಾಬ್ ಅತ್ತಿವೇರಿ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮಾಬುಸಾಬ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಅರೆಸ್ಟ್

ಬೆಂಗಳೂರಿನಲ್ಲಿ ಯುವಕನ ಮೇಲೆ ಮಾರಣಾಂತಿಕ‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯೇಸುದಾಸ್@ಕ್ರಿಶ್, ಮನೋಜ್ ಬಂಧಿತ ಆರೋಪಿಗಳು. ನವಂಬರ್ 8 ರ ಮಧ್ಯರಾತ್ರಿ 1 ಗಂಟೆಗೆ ಬ್ಯಾಟರಾಯನಪುರ ವಿದ್ಯಾನಿಕೇತನ ಶಾಲೆ ಮುಂಭಾಗ ಆರೋಪಿಗಳು ಯುವಕನ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿದ್ದರು.

ಸ್ನೇಹಿತರಾದ ಪ್ರವೀಣ್, ದರ್ಶನ್ ಜೊತೆಗೆ ನಿಂತಿದ್ದ ಸಂದೀಪ್ ಮೇಲೆ ಆರೋಪಿಗಳಾದ ಯೇಸ್ ದಾಸ್ ಮತ್ತು ಮನೋಜ್ ಏಕಾ ಏಕಿ ಎರಗಿದ್ದರು. ಇದರಿಂದ ಸಂದೀಪ್ ಗಾಯಗೊಂಡಿದ್ದರು. ಹಲ್ಲೆ ಬಳಿಕ‌ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ

ನೆಲಮಂಗಲ: ತಡರಾತ್ರಿ ಬೂದಿಹಾಳ್​​ ಗೇಟ್​​ ಬಳಿ ವಾಹನ ಡಿಕ್ಕಿಯಾಗಿ ಸುಮಾರು 35 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.