ಕರಾವಳಿ ಭದ್ರತಾ ಪಡೆಗೆ ಇನ್ನಷ್ಟು ಬಲ; ಡಿಜಿಟಲ್ ಕೋಸ್ಟ್​ ಗಾರ್ಡ್​ ಆಗಿ ಪರಿವರ್ತಿಸಲು ಕ್ರಮ

| Updated By: Ganapathi Sharma

Updated on: Sep 13, 2023 | 7:49 PM

ಕಾರವಾರದಲ್ಲೂ ರ್ಯಾಡರ್ ಸ್ಟೇಷನ್ ಸ್ಥಾಪನೆಯಾಗಿದ್ದು ಶೀಘ್ರದಲ್ಲಿ ಕಾರ್ಯ ನಿರ್ವಹಿಸಲಿದೆ. ಕರಾವಳಿ ಭಾಗದಲ್ಲಿ ಸಂವಹನ ಜಾಲ ಬಲಪಡಿಸಿದ್ದೇವೆ. ಕರಾವಳಿ ಕಡಲ ರಕ್ಷಣೆಗೆ 16 ಲೈಟ್ ಯುಟಿಲಿಟಿ ಹೆಲೆಕಾಪ್ಟರ್ ಅನ್ನು ಕೇಳಿದ್ದೆವು. 8 ಲೈಟ್ ಯುಟಿಲಿಟಿ ಹೆಲೆಕಾಪ್ಟರ್ ಮಂಜೂರಾಗಿದೆ ಎಂದು ಪಶ್ಚಿಮ ವಲಯ ಕಮಾಂಡೆಂಟ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ.

ಕರಾವಳಿ ಭದ್ರತಾ ಪಡೆಗೆ ಇನ್ನಷ್ಟು ಬಲ; ಡಿಜಿಟಲ್ ಕೋಸ್ಟ್​ ಗಾರ್ಡ್​ ಆಗಿ ಪರಿವರ್ತಿಸಲು ಕ್ರಮ
ಸಾಂದರ್ಭಿಕ ಚಿತ್ರ
Follow us on

ಕಾರವಾರ, ಸೆಪ್ಟೆಂಬರ್ 13: ಕರಾವಳಿ ಭದ್ರತಾ ಪಡೆಗೆ (Indian Coast Guard) ಇನ್ನಷ್ಟು ಬಲ ತುಂಬುವ ಕೆಲಸ ಆಗುತ್ತಿದ್ದು, ಡಿಜಿಟಲ್ ಕೋಸ್ಟ್ ಗಾರ್ಡ್ ಆಗಿ ಪರಿವರ್ತಿಸಲಾಗುತ್ತಿದೆ ಎಂದು ಪಶ್ಚಿಮ ವಲಯ ಕಮಾಂಡೆಂಟ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು, ಕೋಸ್ಟಲ್ ಸೆಕ್ಯುರಿಟಿ ನೆಟ್ವರ್ಕ್ ಅನ್ನು ಬಲಗೊಳಿಸಲಾಗಿದೆ. ಕರಾವಳಿಯ ಪ್ರತಿ 7500 ಕಿಲೋಮೀಟರ್ ದಡದಲ್ಲಿ ರಾಡರ್ ಸ್ಟೇಷನ್, 35 ನಾಟಿಕನ್ ಮೈಲುದೂರದಲ್ಲಿ ಕ್ಯಾಮರಾ ಕಣ್ಗಾವಲು ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಾರವಾರದಲ್ಲೂ ರ್ಯಾಡರ್ ಸ್ಟೇಷನ್ ಸ್ಥಾಪನೆಯಾಗಿದ್ದು ಶೀಘ್ರದಲ್ಲಿ ಕಾರ್ಯ ನಿರ್ವಹಿಸಲಿದೆ. ಕರಾವಳಿ ಭಾಗದಲ್ಲಿ ಸಂವಹನ ಜಾಲ ಬಲಪಡಿಸಿದ್ದೇವೆ. ಕರಾವಳಿ ಕಡಲ ರಕ್ಷಣೆಗೆ 16 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅನ್ನು ಕೇಳಿದ್ದೆವು. 8 ಲೈಟ್ ಯುಟಿಲಿಟಿ ಹೆಲೆಕಾಪ್ಟರ್ ಮಂಜೂರಾಗಿದೆ. ಇನ್ನು 8 ಲೈಟ್ ಯುಟಿಲಿಟಿ ಹೆಲೆಕಾಪ್ಟರ್ ಬರಬೇಕಿದೆ ಎಂದು ಪಶ್ಚಿಮ ವಲಯ ಕಮಾಂಡೆಂಟ್ ಮನೋಜ್ ಬಾಡ್ಕರ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ