BY Raghavendra: ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣ ಪ್ರವೇಶಿಸುವೆ: ಸಂಸದ ಬಿ.ವೈ.ರಾಘವೇಂದ್ರ

| Updated By: guruganesh bhat

Updated on: Oct 11, 2021 | 2:28 PM

Karnataka Politics: ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ರಾಜ್ಯ ರಾಜಕಾರಣವನ್ನು ಈಗಾಗಲೇ ಪ್ರವೇಶಿಸಿದ್ದಾರೆ. ಆದರೆ ಸಂಸದರಾಗಿರುವ ಬಿ ವೈ ರಾಘವೇಂದ್ರ ಅವರೂ ಕರ್ನಾಟಕ ರಾಜಕಾರಣಕ್ಕೆ ಜಿಗಿಯಲಿದ್ದಾರೆಯೇ? ಅವರೇ ಉತ್ತರಿಸಿದ್ದಾರೆ ಓದಿ.

BY Raghavendra: ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣ ಪ್ರವೇಶಿಸುವೆ: ಸಂಸದ ಬಿ.ವೈ.ರಾಘವೇಂದ್ರ
ಬಿ ವೈ ರಾಘವೇಂದ್ರ
Follow us on

ಶಿರಸಿ: ವರಿಷ್ಠರು ಮತ್ತು ಸಂಘಟನೆ ಒಪ್ಪಿದರೆ ರಾಜ್ಯ ರಾಜಕಾರಣ ಪ್ರವೇಶಿಸುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಬೆಳೆಸಿದೆ. ಪಕ್ಷ ಎಂದಿಗೂ ನಮಗೆ ತಾಯಿಯಂತೆ. ಪಕ್ಷ ಮತ್ತು ವರಿಷ್ಠರು ಒಪ್ಪಿಗೆ ನೀಡಿ ಸೂಚಿಸಿದರೆ ರಾಜ್ಯ ರಾಜಕಾರಣಕ್ಕೆ ಬರುವುದಾಗಿ ಅವರು ಈ ಹೇಳಿಕೆಯ ಮೂಲಕ ತಿಳಿಸಿದರು. ಅಲ್ಲದೇ ರಾಜ್ಯ ರಾಜಕಾರಣದಲ್ಲೂ ತಮಗೆ ಆಸಕ್ತಿ ಇರುವುದನ್ನು ಈಮೂಲಕ ಸುಳಿವು ನೀಡಿದರು.

ಯಡಿಯೂರಪ್ಪರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲ್ಲಲಿದೆ. ತಂದೆಯವರ ಆಪ್ತರ ಮೇಲೆ ಐಟಿ ದಾಳಿ ನಡೆದಿರುವುದು ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾದಳಗಳ ಸಹಜ ಪ್ರಕ್ರಿಯೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಸತ್ಯಕ್ಕೆ ದೂರ. ಉಮೇಶ್ ಯಡಿಯೂರಪ್ಪ ಅವರ ಕಚೇರಿಯಲ್ಲಿ ಹಲವು ವರ್ಷ ಕೆಲಸ ಮಾಡಿದ್ದು ನಿಜ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: 

Siddaramaiah: ಬಿ.ಎಸ್.ಯಡಿಯೂರಪ್ಪ ಅವರಲ್ಲಿ ನನಗೆ ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲ: ಸಿದ್ದರಾಮಯ್ಯ

IT Raid on BY Vijayendra classmate: ಯಡಿಯೂರಪ್ಪ ಆಪ್ತನ ಬಳಿಕ ವಿಜಯೇಂದ್ರ ಆಪ್ತ ಗೆಳೆಯನ ಮನೆ ಮೇಲೆ ಐಟಿ ದಾಳಿ