IT Raid on BY Vijayendra classmate: ಯಡಿಯೂರಪ್ಪ ಆಪ್ತನ ಬಳಿಕ ವಿಜಯೇಂದ್ರ ಆಪ್ತ ಗೆಳೆಯನ ಮನೆ ಮೇಲೆ ಐಟಿ ದಾಳಿ

ಬಿ ವೈ ವಿಜಯೇಂದ್ರ ಆಪ್ತ ಹಾಗೂ ಗೆಳೆಯ ಅರವಿಂದ ಮನೆ ಮೇಲೆ ಐಟಿ ದಾಳಿ ನಿನ್ನೆ ದಾಳಿ ನಡೆದಿದೆ. ಅರವಿಂದ್ ಮತ್ತು ವಿಜಯೇಂದ್ರ ಕ್ಲಾಸ್ ಮೇಟ್ಸ್​​. ವಸಂತ ನಗರದಲ್ಲಿ ವಾಸವಿರುವ ಅರವಿಂದ ಮನೆ ಮೇಲೆ ಐಟಿ ರೇಡ್​ ನಡೆದಿತ್ತು. ಅರವಿಂದ್​ ಜಯನಗರದಲ್ಲಿ ಸ್ವಂತ ಮನೆ ಹೊಂದಿದ್ದಾರೆ.

IT Raid on BY Vijayendra classmate: ಯಡಿಯೂರಪ್ಪ ಆಪ್ತನ ಬಳಿಕ ವಿಜಯೇಂದ್ರ ಆಪ್ತ ಗೆಳೆಯನ ಮನೆ ಮೇಲೆ ಐಟಿ ದಾಳಿ
ಯಡಿಯೂರಪ್ಪ ಆಪ್ತನ ಬಳಿಕ ವಿಜಯೇಂದ್ರ ಆಪ್ತ ಗೆಳೆಯನ ಮನೆ ಮೇಲೆ ಐಟಿ ದಾಳಿ


ಬೆಂಗಳೂರು: ನಿನ್ನೆ ಗುರುವಾರ ಮಾಜಿ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಆಪ್ತ ಎಂಆರ್ ಉಮೇಶ್​ ನಿವಾಸದ ಮೇಲೆ ಕರ್ನಾಟಕ-ಗೋವಾ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಐಟಿ ರೇಡ್​ ಮಾಡಿದ ಸಂದರ್ಭದಲ್ಲಿಯೇ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಆಪ್ತ ಗೆಳೆಯನ ಮನೆಯ ಮೇಲೆಯೂ ಐಟಿ ದಾಳಿ ನಡೆದಿತ್ತು.

ಬಿ ವೈ ವಿಜಯೇಂದ್ರ ಆಪ್ತ ಹಾಗೂ ಗೆಳೆಯ ಅರವಿಂದ ಮನೆ ಮೇಲೆ ಐಟಿ ದಾಳಿ ನಿನ್ನೆ ದಾಳಿ ನಡೆದಿದೆ. ಅರವಿಂದ್ ಮತ್ತು ವಿಜಯೇಂದ್ರ ಕ್ಲಾಸ್ ಮೇಟ್ಸ್​​. ವಸಂತ ನಗರದಲ್ಲಿ ವಾಸವಿರುವ ಅರವಿಂದ ಮನೆ ಮೇಲೆ ಐಟಿ ರೇಡ್​ ನಡೆದಿತ್ತು. ಅರವಿಂದ್​ ಜಯನಗರದಲ್ಲಿ ಸ್ವಂತ ಮನೆ ಹೊಂದಿದ್ದಾರೆ.

ಹೊಸ ಮನೆ ಕಟ್ಟುವ ಕಾರಣಕ್ಕೆ ಅರವಿಂದ್​ ವಸಂತ ನಗರ ಮನೆಗೆ ಶಿಫ್ಟ್​ ಆಗಿದ್ದರು. ಪ್ರಸ್ತುತ ಅರವಿಂದ್ ದುಬೈಗೆ ತೆರಳಿದ್ದರು. ಆದರೆ ಇಂದು ದುಬೈನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ವಸಂತ ನಗರದ ಅರವಿಂದ್ ಫ್ಲಾಟ್ ನಲ್ಲಿ ಅವರ ತಂದೆ ಮತ್ತು ತಾಯಿ ಇದ್ದರು. ಇಂದು ಅರವಿಂದ ಸಮ್ಮಖದಲ್ಲಿ ಐಟಿ ಅಧಿಕಾರಿಗಳ ತಂಡ ಮನೆಯನ್ನು ಸರ್ಚ್ ಮಾಡಲಿದೆ.

ಕೇಂದ್ರದ ಮಿನಿಸ್ಟಿರಿ ಆಫ್ ಫಿನಾನ್ಸ್ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ:

ಇನ್ನು, ರಾಜ್ಯದಲ್ಲಿ ನಡೆಯುತ್ತಿರೊ ಐಟಿ ದಾಳಿ ಈ ಹಿಂದೆ ನಡೆದಿರೊ ದಾಳಿಗಳಿಗಿಂತ ಭಿನ್ನವಾಗಿದೆ ಎನ್ನಲಾಗಿದೆ. ಇದು ಸಂಪೂರ್ಣವಾಗಿ ಸೆಂಟ್ರಲೈಜಡ್ ( centralised) ದಾಳಿಯಾಗಿ ನಡೆಯುತ್ತಿದೆ. ಹೆಸರಿಗೆ ಬೆಂಗಳೂರು ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ದಾಳಿ ನಡೆಯುತ್ತಿರೊ ಪ್ರತಿಯೊಂದು ತಂಡವನ್ನೂ ಲೀಡ್ ಮಾಡ್ತಿರೋದು ದೆಹಲಿ ಅಫೀಸರ್ಸ್.

ಇಲ್ಲಿಂದ ದಾಳಿ ವಿವರಗಳು ಸಂಪೂರ್ಣ ನೇರವಾಗಿ ದೆಹಲಿಗೆ ರವಾನೆಯಾಗುತ್ತಿದೆ. ಮಿನಿಸ್ಟರಿ ಆಫ್ ಫಿನಾನ್ಸ್ ಗೆ ಐಟಿ ಅಧಿಕಾರಿಗಳು ವರದಿ ನೀಡ್ತಿದಾರೆ. ಅಂದರೆ ಮಿನಿಸ್ಟಿರಿ ಆಫ್ ಫಿನಾನ್ಸ್ ಈ ದಾಳಿಯನ್ನು ನೇರವಾಗಿ ಮಾನಿಟರ್ ಮಾಡ್ತಿದೆ. ದಾಳಿ ಅಂತ್ಯದ ಬಳಿಕ ಮಿನಿಸ್ಟರಿ ಆಫ್ ಫಿನಾನ್ಸ್ ದೆಹಲಿ ಕೇಂದ್ರ ಕಚೇರಿಯಿಂದಲೇ ಪತ್ರಿಕ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:
ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿ ಪ್ರಯಾಣ

ಇದನ್ನೂ ಓದಿ:
ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

Vijayendra ಆಪ್ತ, ಗೆಳೆಯ Aravind ಮನೆ ಮೇಲೆ IT ದಾಳಿ! Bengaluruನ Vasanthanagarದಲ್ಲಿ ವಾಸವಿರುವ Aravind

Read Full Article

Click on your DTH Provider to Add TV9 Kannada