ಮುಂಡಗೋಡ: ರಸ್ತೆಯ ಮೇಲೆ ನವಜಾತ ಶಿಶುವಿನ ಕಳೆಬರಹ ಪತ್ತೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 21, 2023 | 2:27 PM

ಜಿಲ್ಲೆಯ ಮಂಡಗೋಡ ಪಟ್ಟಣದ ಹುಬ್ಬಳ್ಳಿ ಮಾರ್ಗದ ರಸ್ತೆಯ ಮೇಲೆ ನವಜಾತ ಶಿಶುವಿನ ಕಳೆಬರಹ ಪತ್ತೆಯಾಗಿದ್ದು, ನಾಯಿಗಳು ಬಹುತೇಕ ಭಾಗವನ್ನ ತಿಂದಿವೆ.

ಮುಂಡಗೋಡ: ರಸ್ತೆಯ ಮೇಲೆ ನವಜಾತ ಶಿಶುವಿನ ಕಳೆಬರಹ ಪತ್ತೆ
ಮಗುವಿನ ಕಳೆಬರಹ ಪತ್ತೆ
Follow us on

ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡದ ಹುಬ್ಬಳ್ಳಿ ಮಾರ್ಗದ ರಸ್ತೆಯ ಮೇಲೆ ನವಜಾತ ಶಿಶುವಿನ ಕಳೆಬರಹ ಪತ್ತೆಯಾಗಿದೆ. ಶಿಶುವಿನ ಕಳೆಬರಹ ಕಂಡು ನೆರೆದಿದ್ದ ಜನ ಮರುಗಿದ್ದಾರೆ. ರಟ್ಟಿನ ಬಾಕ್ಸ್​ನಲ್ಲಿ ಪತ್ತೆಯಾದ ಈ ಕಳೆಬರಹವನ್ನ ಬೀದಿ ನಾಯಿಗಳು ಎಳೆದು ತಂದು ರಸ್ತೆಯ ಮೇಲೆ ಹಾಕಿದ್ದು, ಶಿಶುವಿನ ದೇಹದ ಬಹುತೇಕ ಭಾಗವನ್ನ ತಿಂದು ಹಾಕಿವೆ. ಗಂಡು ಶಿಶುವಿನ ಕಳೆಬರಹ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ಕುರಿತು ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಇಂತಹ ಘಟನೆ ಇದೇ ಮೊದಲಲ್ಲ ಈ ಘಟನೆಯು ಸೇರಿ ತಿಂಗಳಿನಲ್ಲಿ ಎರಡನೇ ಘಟನೆ ಇದಾಗಿದೆ. ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ರಾಮಪಟ್ಟಣ ಸರ್ಕಲ್​ರಸ್ತೆಯ ಪುಟ್ ಪಾತ್ ಮೇಲೆ ಆಗತಾನೆ ಹೆರಿಗೆ ಆಗಿರುವ ನವಜಾತ ಶಿಶುವಿನ ಕಳೆ ಬರಹ ಪತ್ತೆಯಾಗಿತ್ತು. ಶುಕ್ರವಾರ ಬೆಳಿಗ್ಗೆ ಗುಡಿಬಂಡೆ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ಪಟ್ಟಣದಲ್ಲಿ ಕಸ ಗುಡಿಸಲು ಹೋದಾಗ ಶಿಶುವಿನ ಕಳೆ ಬರಹ ಪತ್ತೆಯಾಗಿದೆ. ಮೊದಲು ಕೋತಿ ಸತ್ತಿರಬಹುದು ಎಂದು ಕೊಂಡಿದ್ದರು. ನಂತರ ನೋಡಿದಾಗ ಅದು ನವಜಾತ ಹೆಣ್ಣು ಶಿಶು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ:ವಿಜಯಪುರ: ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಸಂಬಂಧಿಯನ್ನೇ ಕೊಲೆ ಮಾಡಿದ ಗಂಡ

ನವಜಾತ ಹೆಣ್ಣುಮಗುವನ್ನು ಕಂಡ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಗುಡಿಬಂಡೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು, ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ನವಜಾತ ಹೆಣ್ಣು ಶಿಶು ಪರಿಶೀಲನೆ ನಡೆಸಿದರು. ಆದರೆ ಶಿಶು ಸ್ಥಳದಲ್ಲಿ ಮೃತಪಟ್ಟಿದ್ದು, ಸ್ಥಳದಲ್ಲಿ ಹೆರಿಗೆ ಮಾಡಿ ಬಿಸಾಡಿರುವ ಶಂಕೆ ವ್ಯಕ್ತವಾಗಿತ್ತು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ