ರಾಷ್ಟ್ರೀಯ ಹೆದ್ದಾರಿ 34 ಅಣಶಿ ಘಟ್ಟದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಆದ್ರೆ ಇದಕ್ಕೆ ಇದೆ ಸಮಯದ ಕಡಿವಾಣ

| Updated By: ಆಯೇಷಾ ಬಾನು

Updated on: Jul 18, 2022 | 9:30 PM

ನಿರಂತರ ಮಳೆಯಿಂದ ಗುಡ್ಡ ಕುಸಿಯುವ ಆತಂಕದಿಂದ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸದ್ಯ ಈಗ ಮಳೆ ಕಡಿಮೆಯಾದ ಹಿನ್ನೆಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 34 ಅಣಶಿ ಘಟ್ಟದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ: ಆದ್ರೆ ಇದಕ್ಕೆ ಇದೆ ಸಮಯದ ಕಡಿವಾಣ
ಅಣಶಿ ಘಟ್ಟ
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 34 ಅಣಶಿ ಘಟ್ಟದಲ್ಲಿ(Anashi Ghat) ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಾರವಾರದಿಂದ ಜೋಯಿಡಾಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 34 ರಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿರಂತರ ಮಳೆಯಿಂದ ಗುಡ್ಡ ಕುಸಿಯುವ ಆತಂಕದಿಂದ ರಾಷ್ಟ್ರೀಯ ಹೆದ್ದಾರಿ 34ರಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸದ್ಯ ಈಗ ಮಳೆ ಕಡಿಮೆಯಾದ ಹಿನ್ನೆಲೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಮಳೆಯಿಂದಾಗಿ ಜಲಪಾತಗಳಿಗೆ ಜೀವ ಕಳೆ

ಇನ್ನು ಕರುನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಜಲಪಾತಗಳಿಗೆ ಜೀವ ಕಳೆ ಬಂದಿದೆ. ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಗೆ ಜೋಯಿಡಾ ತಾಲೂಕಿನ ಅಣಶಿ ಘಾಟ್‌ನಲ್ಲಿ ಜಲಪಾತಗಳು ಭೋರ್ಗರೆಯುತ್ತಿವೆ. ಅಣಶಿ ಘಾಟ್‌ನಲ್ಲಿ ಗುಡ್ಡಕುಸಿತದ ಆತಂಕ ಇರೋದ್ರಿಂದ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಆದ್ರೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಈ ರುದ್ರರಮಣೀಯ ದೃಶ್ಯವನ್ನ ಪ್ರವಾಸಿಗರು ಎಂಜಾಯ್ ಮಾಡಬಹುದು.

ಬ್ಯಾರೇಜ್ ಗೇಟ್ ಬಂದ್, ನಾಲ್ಕೈದು ಗ್ರಾಮಗಳಿಗೆ ಮುಳುಗಡೆ ಭೀತಿ

ರಾಯಚೂರು ಜಿಲ್ಲೆಯಲ್ಲಿ ಕೃಷ್ಣೆಯ ಕೋಪದಿಂದಾಗಿ ನಾಲ್ಕೈದು ಗ್ರಾಮದ ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ನ ಗೇಟ್ಗಳ ಸ್ಟ್ರಕ್ ಆಗಿರೋದ್ರಿಂದ, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. 194 ಗೇಟ್ಗಳಲ್ಲಿ ಇನ್ನು 96 ಗೇಟ್ಗಳು ಓಪನ್ ಆಗಿಲ್ಲ. ಹೀಗಾಗಿ ಈ ನದಿ ಪಾತ್ರ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಇಷ್ಟೇ ಅಲ್ಲ ಯಾದಗಿರಿ ಜಿಲ್ಲೆಯ ಕೆಲ ಗ್ರಾಮಗಳಿಗೂ ಕಂಟಕ ಶುರುವಾಗಿದೆ.

ಖಾನಾಪುರದಲ್ಲಿ ಎರಡು ಗ್ರಾಮಗಳ ಸಂಪರ್ಕ ಕಟ್

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಳ್ಳ, ಕೊಳ್ಳಗಳಂತೂ ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಖಾನಾಪುರ ತಾಲೂಕಿನ ಸಾತ್ನಾಳಿ, ಮಾಚಾಳಿ ಸಂಪರ್ಕಿಸುವ ಸೇತುವೆ ಮುಳುಗಡೆ ಆಗಿದ್ರಿಂದ ಜನರು ಪರದಾಡುತ್ತಿದ್ದಾರೆ.

Published On - 9:30 pm, Mon, 18 July 22