ಉತ್ತರ ಕನ್ನಡ: ಮುಖ್ಯಮಂತ್ರಿಯಾಗಿದ್ದ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಸ್ಪರ್ಧಿಸಲು ಕ್ಷೇತ್ರ ಇಲ್ಲ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಜನರು ಓಡಿಸಿದ್ದಾರೆ. ಇತ್ತ ಕೋಲಾರ ಕ್ಷೇತ್ರದ ಜನರು ಸಿದ್ದರಾಮಯ್ಯಗೆ ಜಾಡಿಸಿದ್ದಾರೆ. ವರುಣಾ ಕ್ಷೇತ್ರದ ಜನ ಬರಬೇಡಿ ಅಂತ ಕಲ್ಲು ಹಿಡಿದು ನಿಂತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಜಿಲ್ಲೆಯ ಕಾರವಾರದಲ್ಲಿ ನಡೆದ ಮ ಅಭಿಯಾನ, ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾತನಾಡಿದ ಅವರು ವಿರೋಧಿಗಳಾಗಿದ್ದ ಸಿದ್ದರಾಮಯ್ಯ, ಮಾಜಿ ಮುಖ್ಯ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸೇರಿ ಮೈತ್ರಿ ಸರ್ಕಾರ ರಚಿಸಿದರು. ಆದರೆ ಸಮ್ಮಿಶ್ರ ಸರ್ಕಾರ ರಚಿಸಿದ್ರೂ ಉಳಿಲಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಸಿಎಂ ಆಗಬಾರದು ಎಂದು ಹೇಳಿಲ್ಲ, ಅವರ ಹಿನ್ನೆಲೆ ಹೇಳಿದ್ದೇನೆ ಅಷ್ಟೇ: ಕುಮಾರಸ್ವಾಮಿ ಸ್ಪಷ್ಟನೆ
ರಾಜ್ಯದಲ್ಲಿ ನರಹಂತಕ ಮುಖ್ಯಮಂತ್ರಿಯಾದದ್ದು ಒಬ್ಬರೇ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆಯಾದರೂ ಅವರಿಗೆ ಕಣ್ಣೀರು ಬರಲಿಲ್ಲ. ಪಿಎಫ್‌ಐಗೆ ಬೆಂಬಲ ನೀಡಿ ಹಿಂದೂಗಳ ಕೊಲೆಗೆ ಕಾರಣವಾದರು. ರಾಜ್ಯದಲ್ಲಿ ಕಾಂಗ್ರೆಸ್‌ನಿಂದಲೇ ಭಯೋತ್ಪಾದನೆ ಪ್ರಾರಂಭವಾಗಿದೆ. ಕಾಂಗ್ರೆಸ್ ಉಗ್ರ ಪಕ್ಷ ಎಂದು ಆರೋಪ ಮಾಡಿದರು.
ಸಿದ್ದರಾಮಯ್ಯ ಕಾಲದಲ್ಲಿ 3,000 ರೈತರು ಆತ್ಮಹತ್ಯೆಗೆ ಶರಣಾದರು. ರೈತರಿಗೆ, ಹಿಂದೂ ರಾಷ್ಟ್ರಭಕ್ತರಿಗೆ, ಜನಸಾಮಾನ್ಯರಿಗೆ ಮಾತ್ರವಲ್ಲದೇ, ಡಿ.ಕೆ.ರವಿ, ಡಿವೈಎಸ್ಪಿ ಗಣಪತಿಯಂಥ ಅಧಿಕಾರಿಗಳಿಗೆ ಸುರಕ್ಷತೆ ಇರಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಯಾತ್ರೆ ವೇಳೆ ಪಂಚರ್ ಆಗುತ್ತಿದೆ. ಪ್ರಜಾಧ್ವನಿ ಮಾಡುತ್ತಿದ್ದರೂ ಕಾರ್ಯಕರ್ತರ ಧ್ವನಿಗಳನ್ನು ಅಡಗಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಧ್ವನಿ ಮಾತ್ರವಿದೆ ಎಂದರು.
ಇದನ್ನೂ ಓದಿ: ಬಿಜೆಪಿಯವರು ದುಡ್ಡು ಕೊಟ್ಟು ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದಾರೆ: ಜಮೀರ್ ಅಹ್ಮದ್
ಕಣ್ಣೀರು ಹಾಕುವ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಾಡಿನ ಜನರನ್ನು ಕಣ್ಣೀರು ತರಿಸಿದ್ದ ಸಿದ್ದರಾಮಯ್ಯ ಸಿಎಂ ಆಗಿದ್ದರು. ಮತ್ತೊಬ್ಬರು ಮುಖ್ಯಮಂತ್ರಿಯಾಗಿ (ಬಿ.ಎಸ್ ಯಡಿಯೂರಪ್ಪ) (BS Yadiyurappa) ನಾಡಿನ ಜನರ ಕಣ್ಣೀರು ಒರೆಸಿದರು ಎಂದು ಹೇಳಿದರು.
ತಾಜ್ ಹೋಟೆಲ್‌ನಲ್ಲಿ ಕುಳಿತುಕೊಂಡು ಆಡಳಿತ ನಡೆಸಿದ್ದರಿಂದ ಕುಮಾರಸ್ವಾಮಿಗೆ ಸಂವಿಧಾನ ಅರ್ಥವಾಗಿಲ್ಲ. ಸಂವಿಧಾನವನ್ನ ಅರಿತಿದ್ದರೇ ಅವರು ಬ್ರಾಹ್ಮಣ ಸಮಾಜವನ್ನು ಅವಹೇಳನ ಮಾಡುತ್ತಿರಲಿಲ್ಲ. ತಾಜ್ ಹೋಟೆನಲ್ಲಿ, ಕೃಷ್ಣಾದಲ್ಲಿ ಕುಳಿತ ಆಡಳಿತ ಮಾಡಿದ್ದರಿಂದ ಬ್ರಾಹ್ಮಣ ಸಮಾಜವನ್ನ ಅವಹೇಳನ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಆಗಿ ಎಲ್ಲ ಸಮುದಾಯವನ್ನ ಗೌರವ ಕೊಡಬೇಕು ಆದರೆ ಇವರು ಸಮಾಜವನ್ನು ಒಡೆದು ಆಳುತ್ತಿದ್ದಾರೆ. ಕುಮಾರಣ್ಣ ಒಂದು ಸಮಾಜಕ್ಕೆ ಕೊಲೆಗಡುಕ ಪಟ್ಟಿಯನ್ನ ಕಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ, ಸಿದ್ಧರಾಮಯ್ಯ ಅವರ ನಾಟಕ ನೋಡಿ ಆಡಳಿತ ಪಕ್ಷದ ಶಾಸಕರು ಬಿಟ್ಟು ಬಂದರು. ಕಾಂಗ್ರೆಸ್‌ನಲ್ಲಿ ಇಬ್ಬರು ಮುಖ್ಯಮಂತ್ರಿಯಾಗಲು ಪ್ಯಾಂಟ್, ಶರ್ಟ್ ಹೊಲಿಸಿದ್ದರು. ಆದರೆ, ಇಂದು ಅವರ ಪ್ಯಾಂಟ್ ಹರಿಯುತ್ತಿದೆ ಎಂದು ಕುಹಕವಾಡಿದರು.
ಕುಕ್ಕರ್ ಬ್ಲಾಸ್ಟ್ ಆರೋಪಿ ಬಂಧನವಾದಾಗ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದರು. ಅದಕ್ಕಾಗಿಯೇ ಡಿಕೆ ಶಿವಕುಮಾರ್ (DK Shivakumar) ಬೆಳಗಾವಿ ಕುಕ್ಕರ್ ಹಾಗೂ ತೀರ್ಥಹಳ್ಳಿ ಕುಕ್ಕರ್ ಮೇಲೆ ಭಾರೀ ಪ್ರೀತಿ ಅಂದಿದ್ದೆ. ಬೆಳಗಾವಿ ಕುಕ್ಕರ್ ಬ್ಲಾಸ್ಟ್ ಆದರೆ ಕೇವಲ ಡಿಕೆ ಶಿವಕುಮಾರ್ ಮನೆ ಒಡೆಯುತ್ತೆ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಆದರೆ ದೇಶ ಒಡೆಯುತ್ತೆ . ಭಯೋತ್ಪಾದಕರ ಬೆಂಬಲ ನೀಡುವ ಪಾರ್ಟಿಯಂದರೆ ಅದು ಕಾಂಗ್ರೆಸ್ ಎಂದು ಹೇಳಿದ್ದಾರೆ.
ಈ ಚುನಾವಣೆ ರಾಷ್ಟ್ರಭಕ್ತ ಹಾಗೂ ರಾಷ್ಟ್ರ ವಿರೋಧಿಗಳ ನಡುವಿನ ಚುನಾವಣೆ. ಟಿಪ್ಪು ಸುಲ್ತಾನ್ ಹಾಗೂ ವೀರ ಸಾವರ್ಕರ್ ನಡುವೆ ನಡೆಯುತ್ತಿರುವ ಚುನಾವಣೆ. ಜನ ನೀವು ಯಾವುದಕ್ಕೆ ಬೆಂಬಲ ನೀಡುತ್ತಿರಾ ಯೋಚನೆ ಮಾಡಿ ಎಂದು ಮಾತನಾಡಿದರು.
ದೇಶದ ರೈತರಿಗೆ ವಿವಿಧ ರೀತಿಯ ಸೌಲಭ್ಯ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ. ವೈರಿ ರಾಷ್ಟ್ರ ಪಾಕಿಸ್ತಾನ, ಚೀನಾಗೆ ತಕ್ಕ ಏದುರೇಟು ನೀಡಿದ್ದಾರೆ. ದೇಶ ಉತ್ಕೃಷ್ಟ ಮಟ್ಟಕ್ಕೆ ಏರಬೇಕಂದರೆ ಬಿಜೆಪಿಯ ಆಡಳಿತ ಬೇಕು. ಕೇಂದ್ರ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ 23,000 ಕೋಟಿ ರೂ. ಅನುದಾನ ನೀಡಲಾಗಿದೆ ನೀಡಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕುತ್ತೇನೆ, ಚರ್ಚೆಗೆ ಬನ್ನಿ ಕಾಂಗ್ರೆಸ್ ಆಡಳಿತದ ವೇಳೆ ಬಿಡುಗಡೆಯಾದ ಅನುದಾನ ಎಷ್ಟು? ಈಗ ಬಿಡುಗಡೆಯಾದ ಅನುದಾನ ಎಷ್ಟು ಅಂತಾ. ಸವಾಲು ಹಾಕಿದರು.
ಕೊರೋನಾ ಬಂದಾಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೇ, ಲಸಿಕೆ ಜನರಿಗೆ ಸಿಗುತ್ತಿರಲಿಲ್ಲ. ಮೊದಲ ಲಸಿಕೆ ಸೋನಿಯಾ ಗಾಂಧಿ, ಎರಡನೇಯದ್ದು ಪ್ರಿಯಾಂಕಾ ಗಾಂಧಿ, ಮೂರನೇಯದ್ದು ರಾಹುಲ್ ಗಾಂಧಿ, ನಾಲ್ಕನೇಯದ್ದು ರಾಬರ್ಟ್ ವಾದ್ರಾಗೆ ಸಿಗುತ್ತಿತ್ತು. ಉಳಿದದ್ದು ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರಿಗೆ ದೊರೆಯುತ್ತಿತ್ತು. ರಾಹುಲ್ ಗಾಂಧಿ, ಸಿದ್ಧರಾಮಯ್ಯ ಲಸಿಕೆ ಹಾಕಬೇಡಿ, ಮಕ್ಕಳಾಗಲ್ಲ ಅಂದಿದ್ದರು. ಆದರೆ, ರಾಹುಲ್ ಗಾಂಧಿ ಎರಡು ಡೋಸ್‌ಗಳನ್ನು ಹಾಕಿಕೊಂಡಿದ್ದಾರೆ. ಅವರಿನ್ನು ಮದುವೆಯಾಗಲ್ಲ ಎಂದು ನಿರ್ಧರಿಸಿದ್ದಾರೆ. ಯಾಕಂದರೆ ಅವರಿಗೆ ಮಕ್ಕಳಗಾಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 pm, Tue, 7 February 23