ಹೆಚ್ಡಿ ಕುಮಾರಸ್ವಾಮಿ ಹೆಲಿಕಾಪ್ಟರ್ನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಕೈ ಚಳಕ ತೋರಿಸಲು ಯತ್ನಿಸಿದ ಜೇಬುಗಳ್ಳ
ಶಿರಸಿ ನಗರ ಎಂಇಎಸ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮೈದಾನದಲ್ಲಿ ಜೆಡಿಎಸ್ ಕಾರ್ಯಕರ್ತ ಜೇಬಿಗೆ ಕನ್ನ ಹಾಕಲು ಕಳ್ಳ ಯತ್ನಿಸಿದ್ದಾನೆ.

ಕಾರವಾರ: ಹೆಚ್ಡಿ ಕುಮಾರಸ್ವಾಮಿ(HD Kumaraswamy) ಹಿಂಬಾಲಕರ ಜೇಬಿಗೆ ಕೈ ಹಾಕಲು ಯತ್ನಿಸಿದ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ(Sirsi) ನಡೆದಿದೆ. ಹೆಲಿಕಾಪ್ಟರ್ನಿಂದ ಕುಮಾರಸ್ವಾಮಿ ಕೆಳಗೆ ಇಳಿದ ತಕ್ಷಣವೇ ಶಿರಸಿ ನಗರ ಎಂಇಎಸ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮೈದಾನದಲ್ಲಿ ಜೆಡಿಎಸ್ ಕಾರ್ಯಕರ್ತ ಜೇಬಿಗೆ ಕನ್ನ ಹಾಕಲು ಕಳ್ಳ ಯತ್ನಿಸಿದ್ದಾನೆ. ಆದ್ರೆ ಕಳ್ಳನ ಕೈ ಚಳಕ ಕಂಡುಹಿಡಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗೆಜ್ಜೆಹಳ್ಳಿ ಗ್ರಾಮದವನು ಎಂದು ತಿಳಿದು ಬಂದಿದೆ. ಜೇಬುಗಳ್ಳನಿಂದ ಕೆಲ ಕಾಲ ಕುಮಾರಸ್ವಾಮಿ ಅವರು ಗಲಿಬಿಲಿಗೊಂಡಿದ್ದರು.
ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಶಿರಸಿಗೆ ಆಗಮಿಸಿದ್ದರು. ನಗರದ ಎಂಇಎಸ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮೈದಾನದ ಹೆಲಿಪ್ಯಾಡ್‌ಗೆ ಹೆಚ್ಡಿಕೆ ಬಂದು ಇಳಿಯುತ್ತಿದ್ದಂತೆ ಜೇಬುಕಳ್ಳ ಕೈ ಚಳಕ ತೋರಿಸಿದ್ದಾನೆ. ಸದ್ಯ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಪರ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಬಳಿಕ ರ್ಯಾಲಿ ಮೂಲಕ ಅಭ್ಯರ್ಥಿಯೊಂದಿಗೆ ಸಮಾವೇಶಕ್ಕೆ ತೆರಳಲಿದ್ದಾರೆ.
ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಬಳಿಕ ಕುಮಟಾಕ್ಕೆ ತೆರಳಲಿ ಕುಮಟಾ ಕ್ಷೇತ್ರದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಪರ ಪ್ರಚಾರ ನಡೆಸಲಿದ್ದಾರೆ.
ಮತ್ತಷ್ಟು ಜಿಲ್ಲಾ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ




