ಯಲ್ಲಾಪುರ: ಪರವಾನಗಿ ಇಲ್ಲದೆ ಒಂಟೆಗಳ ಸಾಗಾಟ, 3 ಆರೋಪಿಗಳ ಬಂಧನ

| Updated By: ನಯನಾ ರಾಜೀವ್

Updated on: Jul 10, 2022 | 5:05 PM

ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಒಂಟೆಗಳ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ, ಅವರಿಂದ 6 ಒಂಟೆಗಳನ್ನು ರಕ್ಷಣೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಜೋಡಿಕೆರೆ ಚೆಕ್​ಪೋಸ್ಟ್​ನ ಸಂಕಲ್ಪ ಕ್ರಾಸ್ ಬಳಿ 6 ಒಂಟೆಗಳ ರಕ್ಷಣೆ ಮಾಡಲಾಗಿದೆ,

ಯಲ್ಲಾಪುರ: ಪರವಾನಗಿ ಇಲ್ಲದೆ ಒಂಟೆಗಳ ಸಾಗಾಟ, 3 ಆರೋಪಿಗಳ ಬಂಧನ
Camel
Follow us on

ಕಾರವಾರ: ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಒಂಟೆಗಳ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ, ಅವರಿಂದ 6 ಒಂಟೆಗಳನ್ನು ರಕ್ಷಣೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಜೋಡಿಕೆರೆ ಚೆಕ್​ಪೋಸ್ಟ್​ನ ಸಂಕಲ್ಪ ಕ್ರಾಸ್ ಬಳಿ 6 ಒಂಟೆಗಳ ರಕ್ಷಣೆ ಮಾಡಲಾಗಿದೆ,

ಬಂಧಿತರು ಕಾಂತೇಶ್, ಪ್ರಕಾಶ್, ಈಶ್ವರಪ್ಪ ಎಂದು ಗುರುತಿಸಲಾಗಿದೆ, ಇವರೆಲ್ಲರೂ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದವರು ಎನ್ನಲಾಗಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಅಂದಾಜು ಮೂರು ಲಕ್ಷ ಮೌಲ್ಯದ ಒಂಟೆ ಸಾಗಾಟ ಮಾಡುತಿದ್ದರು,

ಜಿಂಕೆ ಕೊಂಬು ಸಾಗಿಸುತ್ತಿದ್ದವರ ಬಂಧನ: ಜಿಂಕೆ‌ ಕೊಂಬು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳ ಬಂಧಿಸಲಾಗಿದೆ. ಮಾಸ್ತಿಕಟ್ಟಾ ಹೆದ್ದಾರಿ ಬಳಿ ಶೌಕತ್ ಸಾಬ್, ಪ್ರಸಾದ ದೇಸಾಯಿ,

ಸೂರಜ್ ಭಂಡಾರಿ, ಸಂದೀಪ್ ಭಂಡಾರಿಯನ್ನು ಪೊಲೀಸರು ಬಂಧಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾ ಗ್ರಾಮ
ಕಾರನಲ್ಲಿ 2 ಜಿಂಕೆ ಕೊಂಬು ಸಾಗಿಸುತ್ತಿದ್ದಾಗ ದಾಳಿ ನಡೆಸಲಾಗಿದೆ.

ಜಿಂಕೆ‌ ಕೊಂಬು ಸಾಗಿಸುತ್ತಿದ್ದ ಶೌಕತ್ ಸಾಬ್, ಪ್ರಸಾದ ದೇಸಾಯಿ, ಸೂರಜ್ ಭಂಡಾರಿ, ಸಂದೀಪ್ ಭಂಡಾರಿ ಬಂಧಿಸಿದ ಪೊಲೀಸರು; ಕಾರನಲ್ಲಿ ಎರಡು ಜಿಂಕೆ ಕೊಂಬು ಸಾಗಿಸುತ್ತಿದ್ದಾಗ ದಾಳಿ ಮಾಡಿ ಆರೋಪಿಗಳ ಬಂಧಿಸಲಾಗಿದೆ.

ಕಾರಿನಲ್ಲಿ ಎರಡು ಜಿಂಕೆ ಕೊಂಬು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Published On - 5:05 pm, Sun, 10 July 22