ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದ ಸಾಗಿಸುತ್ತಿದ್ದ ಕಂತೆ ಕಂತೆ ಹಣ ಕಾರವಾರದಲ್ಲಿ ಜಪ್ತಿ
ಯಾವುದೇ ದಾಖಲೆ ಇಲ್ಲದೆ ಖಾಸಗಿ ಬಸ್ನಲ್ಲಿ ಸಾಗಾಟ ನಡೆಸುತ್ತಿದ್ದ ಕಂತೆ ಕಂತೆ ಹಣವನ್ನು ಕಾರವಾರದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ದುಡ್ಡನ್ನು ಗೋವಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿರುವ ಹಣವನ್ನ ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಕಾರವಾರ, ಅಕ್ಟೋಬರ್ 28: ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ಹಣವನ್ನ (Money) ಕಾರವಾರ ತಾಲೂಕಿನ ಮಾಜಾಳಿ ಚೆಕ್ಪೊಸ್ಟ್ನಲ್ಲಿ ಜಪ್ತಿ ಮಾಡಲಾಗಿದೆ. ಪೊಲೀಸರಿಂದ ಖಾಸಗಿ ಬಸ್ ತಪಾಸಣೆ ವೇಳೆ ಕಲ್ಪೇಶಕುಮಾರ್, ಬೊಂಬ್ರಾ ರಾಮ್ ಎಂಬುವರ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದೆ. ಗೋವಾದಿಂದ ಬೆಂಗಳೂರಿಗೆ ಹಣವನ್ನ ಸಾಗಿಸಲು ಯತ್ನಿಸಿದ್ದು, ಇದು Mxon ಎಲೆಕ್ಟ್ರಿಕಲ್ ಹಾರ್ಡ್ವೇರ್ ಕಂಪನಿಗೆ ಸೇರಿದ ದುಡ್ಡು ಎಂಬುದು ದೃಢಪಟ್ಟಿದೆ. ತೆರಿಗೆ ತಪ್ಪಿಸಲು ಬ್ಯಾಗ್‌ನಲ್ಲಿ ಹಣವನ್ನು ಆರೋಪಿಗಳು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿದ ಹಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
