Konkani Language: ಕೊಂಕಣಿ ಭಾಷೆಗೆ ಅವಮಾನ ಆರೋಪಿಸಿ ಕಾರವಾರದಲ್ಲಿ ಕೊಂಕಣಿ ಭಾಷಿಗರಿಂದ ಹೋರಾಟ

| Updated By: ಆಯೇಷಾ ಬಾನು

Updated on: Jun 17, 2022 | 3:13 PM

ನಗರದ ವಿವಿಧೆಡೆ ಕೊಂಕಣಿ ನಾಗರಿಕರು ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಬೇಕೆಬೇಕು ಕೊಂಕಣಿ ಭಾಷೆ ಬೇಕೆಂದು ಆಗ್ರಹಿಸಿದ್ದಾರೆ. ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ 15 ದಿನದಲ್ಲಿ ದೇವನಾಗರಿ ಲಿಪಿಯಲ್ಲಿ ನಾಮಫಲಕ ಬರೆಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Konkani Language: ಕೊಂಕಣಿ ಭಾಷೆಗೆ ಅವಮಾನ ಆರೋಪಿಸಿ ಕಾರವಾರದಲ್ಲಿ ಕೊಂಕಣಿ ಭಾಷಿಗರಿಂದ ಹೋರಾಟ
ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು
Follow us on

ಉತ್ತರ ಕನ್ನಡ: ದೇವನಾಗರಿ ಲಿಪಿಯಲ್ಲಿ ಬರೆಸಿದ್ದ ನಾಮಫಲಕಕ್ಕೆ ಕನ್ನಡಪರ ಸಂಘಟನೆಗಳ ವಿರೋಧ ಖಂಡಿಸಿ ಕೊಂಕಣಿ ಭಾಷೆಗೆ(Konkani Language) ಅವಮಾನ ಆರೋಪಿಸಿ ಕೊಂಕಣಿ ಭಾಷಿಕರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ವಿವಿಧೆಡೆ ಕೊಂಕಣಿ ನಾಗರಿಕರು ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಬೇಕೆಬೇಕು ಕೊಂಕಣಿ ಭಾಷೆ ಬೇಕೆಂದು ಆಗ್ರಹಿಸಿದ್ದಾರೆ. ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ 15 ದಿನದಲ್ಲಿ ದೇವನಾಗರಿ ಲಿಪಿಯಲ್ಲಿ ನಾಮಫಲಕ ಬರೆಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದೆ ಕನ್ನಡ ದೇವನಾಗರಿ ಲಿಪಿಯಲ್ಲಿ ನಗರಸಭೆ ನಾಮಫಲಕ ಬರೆಸಿತ್ತು. ಇದಕ್ಕೆ ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಕೊಂಕಣಿ ಭಾಷಿಕರು ಹದಿನೈದು ದಿನದಲ್ಲಿ ದೇವನಾಗರಿ ಲಿಪಿಯಲ್ಲಿ ನಾಮಫಲಕ ಬರೆಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೋಲಾರ: ಅಪ್ಪನ ನೌಕರಿ ತನಗೆ ನೀಡಲು ಕಂಪನಿ ನಿರಾಕರಿಸಿದ ಕಾರಣ ಆದರ ಆವರಣದಲ್ಲೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ