ಉತ್ತರ ಕನ್ನಡ, ಅ.12: ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನ ರಕ್ಷಣೆ ಮಾಡಿದ ಘಟನೆ ಇಂದು(ಶನಿವಾರ) ಕುಮಟಾ ತಾಲೂಕಿನ ಗೋಕರ್ಣ(Gokarna)ದ ಮುಖ್ಯ ಕಡಲತೀರದಲ್ಲಿ ನಡೆದಿದೆ. ಮೈಸೂರು ಮೂಲದ ಅಭಿ ಹಾಗೂ ಇನ್ನೋರ್ವ ಪ್ರವಾಸಿಗನನ್ನು ಇಲ್ಲಿನ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ರಜೆ ಹಿನ್ನಲೆ ಗೋಕರ್ಣ ಪ್ರವಾಸಕ್ಕೆಂದು ಯುವಕರು ಬಂದಿದ್ದರು. ಸಮುದ್ರದಲ್ಲಿ ಈಜಾಡುವ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ್ , ಮೋಹನ್ , ಶಿವಪ್ರಸಾದ್ ಅಂಬಿಗ ಎನ್ನುವವರು ರಕ್ಷಣೆಗೆ ಮಾಡಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ್ ಗ್ರಾಮದ ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದ ಮಧ್ಯದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಸಿಲುಕಿದ್ದಾನೆ. ಮೂರು ದಿನಗಳಿಂದ ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದಲ್ಲಿ ಇವತ್ತು ನೀರಿನ ಪ್ರಮಾಣ ಇಳಿಕೆಯಾಗಿತ್ತು. ಈ ವೇಳೆ ಜಮೀನಿನ ಮಧ್ಯೆ ಮಾನಸಿಕ ಅಸ್ವಸ್ಥ ಲಕ್ಷ್ಮಣ ಬಾರಕೇರ್ ಕಾಣಿಸಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ನವಲಗುಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನವಲಗುಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಆರಂಭವಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡ: ಸಮುದ್ರದಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; 40 ಜನರ ರಕ್ಷಣೆ
ತಮಿಳುನಾಡು: ಸಾರಿಗೆ ಬಸ್ ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ನಡೆದು, ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದ ಕಳ್ಳ ಸಾವನ್ನಪ್ಪಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ ಕೆಲವರಪಲ್ಲಿ ಗ್ರಾಮದ ಸಮೀಪ ನಡೆದಿದೆ. ಅಭಿನೇಶ್ ಪಾಡಿಯಂನ್(33) ಮೃತ ಬೈಕ್ ಕಳ್ಳ. ಶೇಖರ್ ರೆಡ್ಡಿ ಎಂಬುವವರ ಬುಲೆಟ್ ಬೈಕ್ನ್ನು ಹೊಸೂರು ಸಮೀಪ ರಸ್ತೆ ಬದಿ ನಿಲ್ಲಿಸಿದ್ದರು. ಈ ವೇಳೆ ಮೂರು ಮಂದಿ ಬೈಕ್ ಕಳ್ಳರು ಸೇರಿಕೊಂಡು ಕಳ್ಳತನ ಮಾಡಿ ಹೋಗುತ್ತಿದ್ದಾಗ ಅಪಘಾತವಾಗಿದೆ. ಮತ್ತೊಂದು ಬೈಕ್ನಲ್ಲಿದ್ದ ಇಬ್ಬರು ಕಳ್ಖರನ್ನ ಹಿಡಿದ ಸ್ಥಳೀಯರು, ನಲ್ಲೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಧ್ಯ ಮೃತದೇಹ ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Sat, 12 October 24