ವಲಯ ಅರಣ್ಯಾಧಿಕಾರಿಗಳ ನೇಮಕಾತಿಯಲ್ಲಿ ಮೀಸಲಾತಿ ಕಡಿತ; ಶೇ 100% ರಷ್ಟು ಮೀಸಲಾತಿ ನೀಡಿ ಎಂದು ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 08, 2022 | 3:58 PM

RFO ಮತ್ತು ACF ಹುದ್ದೆ ಅರಣ್ಯ ಶಾಸ್ತ್ರ ಪದವೀಧರರಿಗೆ ಸಿಗಬೇಕು, ಅದೇ ಕನಿಷ್ಠ ವಿದ್ಯಾರ್ಹತೆ ಆಗಿರಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಮೀಸಲಾತಿ ಕಡಿತವನ್ನು ವಾಪಾಸ್ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಬಿಡಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. 

ವಲಯ ಅರಣ್ಯಾಧಿಕಾರಿಗಳ ನೇಮಕಾತಿಯಲ್ಲಿ ಮೀಸಲಾತಿ ಕಡಿತ; ಶೇ 100% ರಷ್ಟು ಮೀಸಲಾತಿ ನೀಡಿ ಎಂದು ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳು.
Follow us on

ಕಾರವಾರ: ವಲಯ ಅರಣ್ಯಾಧಿಕಾರಿಗಳ ನೇಮಕಾತಿಯಲ್ಲಿ ಮೀಸಲಾತಿ ಕಡಿತಗೊಳಿಸಿದ್ದಕ್ಕೆ ಅರಣ್ಯ ಪದವೀಧರರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಎಸಿ ಕಚೇರಿ ಮುಂದೆ ಬಿ.ಎಸ್ಸಿ ವಿದ್ಯಾರ್ಥಿಗ (Students) ಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಶೇ.75ರಿಂದ ಶೇ.50ಕ್ಕೆ ಸರ್ಕಾರ ಮೀಸಲಾತಿಯನ್ನು ಕಡಿತಗೊಳಿಸಿದೆ. ಎಸಿ ಕಚೇರಿ ಮುಂದೆ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದು, ಅರಣ್ಯಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆ ಮಾಡಲು ಆಗ್ರಹ ಮಾಡಲಾಗಿದೆ. ಸುಮಾರು 240 ವಿದ್ಯಾರ್ಥಿಗಳಿಂದ ಧರಣಿ ಮಾಡಲಾಗುತ್ತಿದ್ದು, ನಮಗೆ 100% ವಲಯ ಅರಣ್ಯಾಧಿಕಾರಿಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. RFO ಮತ್ತು ACF ಹುದ್ದೆ ನೇಮಕಾತಿಯಲ್ಲಿ ಅರಣ್ಯಶಾಸ್ತ್ರ ಪದವಿಯನ್ನೆ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಬೇಕು. ರಾಜ್ಯ ಸರ್ಕಾರದ ಮೀಸಲಾತಿ ಕಡಿತದಿಂದ ಅರಣ್ಯ ಪದವೀಧರರ ಮರಣಶಾಸನ ಬರದಂತಾಗಿದೆ. ವಿದ್ಯಾರ್ಥಿಗಳು ನೇಣು ಹಾಕಿಕೊಂಡ ಪ್ರತಿಮೆ, ಮತ್ತು ಶವದ ಅಣಕು ಪ್ರತಿಮೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. RFO ಮತ್ತು ACF ಹುದ್ದೆ ಅರಣ್ಯ ಶಾಸ್ತ್ರ ಪದವೀಧರರಿಗೆ ಸಿಗಬೇಕು, ಅದೇ ಕನಿಷ್ಠ ವಿದ್ಯಾರ್ಹತೆ ಆಗಿರಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಮೀಸಲಾತಿ ಕಡಿತವನ್ನು ವಾಪಾಸ್ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಬಿಡಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ತಿಂಗಳ ಕೊನೆಗೆ ಶ್ರೀಲಂಕಾದಲ್ಲಿ ಇಂಧನಕ್ಕಾಗಿ ಹಾಹಾಕಾರ ಸಾಧ್ಯತೆ: ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ದೇಶದಲ್ಲಿ ಆತಂಕ

ಏಪ್ರಿಲ್ 10 ರಿಂದ ಎಲ್ಲಾ ವಯಸ್ಕರಿಗೆ ಕೊವಿಡ್ ಬೂಸ್ಟರ್ ಡೋಸ್‌: ಆರೋಗ್ಯ ಸಚಿವಾಲಯ