
ಕಾರವಾರ, ಜನವರಿ 30: ಕಳ್ಳತನ ಮಾಡಿದ ಮಾಂಸ ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ. ದನಗಳ್ಳರು (cow) ಯಾರೇ ಆಗಿದ್ರೂ ಬಂಧಿಸಿ, ನಮ್ಮ ಸಹಕಾರವಿದೆ ಎಂದು ಭಟ್ಕಳ ತಂಜೀಮ್ ಅಧ್ಯಕ್ಷ ಇಮಾಯತ್ವುಲ್ಲಾ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಯಾವುದೇ ಧರ್ಮದವರಿದ್ದರೂ ಬಂಧಿಸಬೇಕು ಎಂದಿದ್ದಾರೆ.
ದನ ಕಳ್ಳತನ ಕೇಸ್ ಜಾಸ್ತಿ ಆಗುತ್ತಿದೆ ಅಂತ ಟಿವಿಗಳಲ್ಲಿ ನೋಡಿದ್ದೇವೆ. 1 ತಿಂಗಳು ಭಟ್ಕಳದಲ್ಲಿ ಮಾಂಸದ ಅಂಗಡಿ ಬಂದ್ ಮಾಡಿದ್ದೆವು. ಗರ್ಭ ಧರಿಸಿದ್ದ ಹಸು ತಲೆ ಕಡಿದಿದ್ದನ್ನು ನಾವು ಖಂಡಿಸುತ್ತೇವೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಪ್ರಕರಣದಲ್ಲಿ ಆರೋಪಿಗಳ ಹೆಸರಿನ ಹಿಂದೆ ಭಟ್ಕಳ ಅಂತಿದೆ. ಅವರಿಂದಾಗಿ ಭಟ್ಕಳದ ಹೆಸರು ಹಾಳಾಗುತ್ತಿದೆ. ಭಟ್ಕಳ ಮುಸ್ಲಿಮರು ದನ ಕಳ್ಳತನ ಯಾವ ಕಾರಣಕ್ಕೂ ಸಹಿಸಲ್ಲ. ದನಗಳ್ಳರು ಯಾರೇ ಆಗಿದ್ದರೂ ಬಂಧಿಸಿ, ನಮ್ಮ ಸಹಕಾರವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊನ್ನಾವರ: ಗೋಮಾಂಸ ಕದ್ದೊಯ್ದ ಕೇಸ್ಗೆ ತಿರುವು, ವರ್ಷದಲ್ಲಿ 100 ಹಸುಗಳ ಕದ್ದು ಮಾರಾಟ ಮಾಡಿದ ಶಂಕೆ
ದನಕಳ್ಳತನ ಪ್ರಕರಣ ನಮ್ಮ ಜಿಲ್ಲೆಯಲ್ಲಿ ಇದೆ ಮೊದಲಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ದನಕಳ್ಳತನ ನಡೆದಿದೆ. ಬಿಜೆಪಿ ಶಾಸಕ ದಿನಕರ ಶೆಟ್ಟಿ ಸಿಎಂ, ಮತ್ತು ಗೃಹ ಸಚಿವರ ಬಗ್ಗೆ ಲಘುವಾಗಿ ಹೇಳಿಕೆ ಕೊಡುತ್ತಿದ್ದಾರೆ. ಅವರು ಮಾಡಿರುವ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದಿದ್ದಾರೆ.
ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡಿನ ದಾಳಿ ವಿಚಾರವಾಗಿ ಭಟ್ಕಳ ಮುಸ್ಲಿಂ ಮುಖಂಡ ಇಮ್ರಾನ್ ಲಂಕಾ ಪ್ರತಿಕ್ರಿಯಿಸಿದ್ದು, ಇದರಲ್ಲಿ ಆರೋಪಿ ಮತ್ತು ಪೊಲೀಸರದ್ದು ಇಬ್ಬರದ್ದು ತಪ್ಪಿದೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಬಾರದಾಗಿತ್ತು. ಆರೋಪಿಗಳು ತಪ್ಪು ಮಾಡಿದಕ್ಕೆ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಬೇಕಾಯ್ತು ಎಂದರು.
ಇದನ್ನೂ ಓದಿ: ಕರ್ನಾಟದಲ್ಲಿ ಮತ್ತೊಂದು ಅಮಾನವೀಯ ಘಟನೆ: ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ದುರುಳರು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಹಸುವಿನ ತಲೆಯನ್ನ ಕತ್ತರಿಸಿ ಎಸೆದಿದ್ದ ಕ್ರಿಮಿಗಳು, ದೇಹದ ಮಾಂಸವನ್ನ ಭಟ್ಕಳದಲ್ಲಿ ನಡೆದಿದ್ದ ಮದುವೆ ಊಟಕ್ಕೆ ನೀಡಿದ್ದರು. ಗೋಹತ್ಯೆಯ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು 400ಕ್ಕೂ ಅಧಿಕ ಜನರನ್ನೂ ವಿಚಾರಣೆ ನಡೆಸಿದ್ದರು. ಹೊನ್ನಾವರ ತಾಲೂಕಿನ ಮಲ್ಕಿಯ ತೌಫಿಕ್, ಕಾಸರಗೋಡಿನ ಫೈಝನ್ನ್ನ ಬಂಧನವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.