ಕುಡುಕರನ್ನು ಚುಡಾಯಿಸಿ ಅವಾಂತರ ಮಾಡಿಕೊಂಡ ವಿದ್ಯಾರ್ಥಿಗಳು; ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ಹಲ್ಲೆ, ಇಬ್ಬರು ಅರೆಸ್ಟ್
ಉತ್ತರ ಕನ್ನಡ ಜಿಲ್ಲೆಯ ಭಟ್ಕಲ್ ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಡಿ.31ರಂದು ಭಾರೀ ದಾಂಧಲೆ ನಡೆದಿದೆ. ವಿದ್ಯಾರ್ಥಿಗಳು ಕುಡುಕರನ್ನು ಚುಡಾಯಿಸಿದ್ದು ಕೋಪಗೊಂಡ ಕುಡುಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಓರ್ವ ವಿದ್ಯಾರ್ಥಿ ಗಂಭಿರವಾಗಿ ಗಾಯಗೊಂಡಿದ್ದು ಇಬ್ಬರು ಅರೆಸ್ಟ್ ಆಗಿದ್ದಾರೆ.
ಕಾರವಾರ, ಜ.06: ಹೊಸ ವರ್ಷದಂದು (New Year) ಕುಡುಕರನ್ನು ಚುಡಾಯಿಸಲು ಹೋಗಿ ವಿದ್ಯಾರ್ಥಿಗಳು ಅವಾಂತರ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಲ್ ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಡಿ.31ರಂದು ಭಾರೀ ದಾಂಧಲೆ ನಡೆದಿದೆ. ವಿದ್ಯಾರ್ಥಿಗಳು ಕುಡುಕರನ್ನು ಚುಡಾಯಿಸಿದ್ದು ಮೂರು ನಾಲ್ಕು ಕುಡುಕರ ಗುಂಪು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ. ದೊಣ್ಣೆ, ಬ್ಯಾಟ್ಗಳಿಂದ ಹಲ್ಲೆ ನಡೆಸಿದ ಸಿಸಿ ಕ್ಯಾಮೆರಾ ವಿಡಿಯೋ ಟಿವಿ9ಗೆ ಲಭಿಸಿದೆ.
ಡಿಸೆಂಬರ್ 31ರಂದು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಗುಂಪೊಂದು ಕಂಠಪೂರ್ತಿ ಕುಡಿದು ಹೋಗುತ್ತಿದ್ದ ಕುಡುಕರಿಗೆ ಚುಡಾಯಿಸಿತ್ತು. ಆಗ ಕುಡುಕರು ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ನಿಲಯದ ವಿದ್ಯಾರ್ಥಿಗಳೆಲ್ಲ ಸೇರಿ ಪ್ರಶ್ನಿಸಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಕೊಪಗೊಂಡ ಕುಡುಕರು ತಮ್ಮ ಸ್ನೇಹಿತರನ್ನೆಲ್ಲ ಕರೆಸಿ ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ದೊಣ್ಣೆ, ಬ್ಯಾಟ್, ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ವಿದ್ಯಾರ್ಥಿ ನಿಲಯದ ಒಳಗಿನ ವಸ್ತುಗಳನ್ನು ಪುಡಿ ಮಾಡಲು ಯತ್ನಿಸಿದ್ದಾರೆ. ಘಟನೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನವೀದ್ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಿಲಯ ಪಾಲಕ ನಾಗೇಂದ್ರ ಎಂಬುವವರು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಮುಖ ಆರೋಪಿ ರಾಘವೇಂದ್ರ ಯಾನೆ ಬಾಬು ನಾಯ್ಕ ಮತ್ತು ನಂದನ ಜೈನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಛತ್ತೀಸ್ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿ 6 ಮಂದಿ ವಿರುದ್ಧ ಚಾರ್ಜ್ಶೀಟ್
ಪ್ರಯಾಣಿಕನ ಮೇಲೆ ಚಾಲಕ ಹಾಗೂ ನಿರ್ವಾಹಕನ ಹಲ್ಲೆ
ಪ್ರಯಾಣಿಕನ ಮೇಲೆ ಚಾಲಕ ಹಾಗೂ ನಿರ್ವಾಹಕ ಸೇರಿಕೊಂಡು ಭೀಕರ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲಘಟಗಿಯಿಂದ ಹಳಿಯಾಳಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಗಲಾಟೆ ನಡೆದಿದ್ದು ಚಾಲಕ ಮತ್ತು ನಿರ್ವಾಹಕ ಸೇರಿಕೊಂಡು ಪ್ರಯಾಣಿಕನನ್ನು ಬಸ್ನಿಂದ ಕೆಳಗೆ ಇಳಿಸಿ ಆತನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಳಿಯಾಳ ಹಾಗೂ ಕೂಡಲಗಿ ಮಧ್ಯೆ ಈ ಘಟನೆ ನಡೆದಿದೆ. ಪ್ರಯಾಣಿಕನ ಮೇಲೆ ಹಲ್ಲೆ ಮಾಡಲು ನಿಖರ ಕಾರಣ ತಿಳಿದು ಬಂದಿಲ್ಲ.
ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ಪದೇ ಪದೇ ಭಾರತ ಮಾತಾ ಕಿ ಜೈ ಎಂದು ಕೂಗುತ್ತಿದ್ದ. ಹೀಗಾಗಿ ಹಲ್ಲೆ ನಡೆದಿದೆ ಎಂದು ಬಸ್ನಲ್ಲಿದ್ದ ಕೆಲ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಚಾಲಕರು ಮತ್ತು ನಿರ್ವಾಹಕ ಬಸ್ ನಿಲ್ಲಿಸಿ ಪ್ರಯಾಣಿಕನನ್ನು ಕೆಳಗಡೆ ಇಳಿಸಿ ಹಲ್ಲೆ ನಡೆಸಿದ್ದಾರೆ. ಬಸ್ ನಿಂದ ಕೆಳಗೆ ಇಳಿಸಿ, ನೆಲದ ಮೇಲೆ ಬಿಳಿಸಿ ಕಾಲಿನಿಂದ ಒದ್ದು ಗುಂಡಾವರ್ತನೆ ತೋರಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ